ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ: ಪಂಜಾಬ್​ ರೈತರ Delhi Chaloಗೆ ರಾಜ್ಯದ ಅನ್ನದಾತರ ಬೆಂಬಲ

ಪಂಜಾಬ್ ರೈತರ ಪ್ರತಿಭಟನೆ ಮುಕ್ತಾಯವಾಗುವವರೆಗೂ ನಗರದಲ್ಲಿ ರೈತರ ಧರಣಿ ಮುಂದುವರಿಯಲಿದೆ. ಧರಣಿಯಲ್ಲಿ ಪಾಲ್ಗೊಳ್ಳಲು ರಾಜ್ಯದ ಹಲವು ಜಿಲ್ಲೆಗಳಿಂದ ನಗರಕ್ಕೆ ರೈತರು ಬರಲಿದ್ದಾರೆ.

ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ: ಪಂಜಾಬ್​ ರೈತರ Delhi Chaloಗೆ ರಾಜ್ಯದ ಅನ್ನದಾತರ ಬೆಂಬಲ
ಪ್ರಾತಿನಿಧಿಕ ಚಿತ್ರ

Updated on: Dec 16, 2020 | 8:15 AM

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನುಗಳನ್ನು ವಿರೋಧಿ ಪಂಜಾಬ್ ರೈತರು ನಡೆಸುತ್ತಿರುವ Delhi Chalo ಪ್ರತಿಭಟನೆಗೆ ರಾಜ್ಯದ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಪಂಜಾಬ್ ರೈತರ ಪ್ರತಿಭಟನೆ ಮುಕ್ತಾಯವಾಗುವವರೆಗೂ ನಗರದಲ್ಲಿ ರೈತರ ಧರಣಿ ಮುಂದುವರಿಯಲಿದೆ ಎಂದು ರೈತ ಮುಖಂಡರಾದ ಕುರುಬೂರು ಶಾಂತಕುಮಾರ್ ಹಾಗೂ ಬಡಗಲಪುರ ನಾಗೇಂದ್ರ ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ.

ಧರಣಿಯಲ್ಲಿ ಪಾಲ್ಗೊಳ್ಳಲು ರಾಜ್ಯದ ಹಲವು ಜಿಲ್ಲೆಗಳಿಂದ ನಗರಕ್ಕೆ ರೈತರು ಬರಲಿದ್ದಾರೆ. ಮೌರ್ಯ ಸರ್ಕಲ್​ನಲ್ಲಿ ರೈತರ ಐಕ್ಯ ಹೋರಾಟ ಸಮಿತಿಯ ವೇದಿಕೆಯಲ್ಲಿ ರೈತರು ಒಗ್ಗೂಡಿ ಧರಣಿ ನಡೆಸಲಿದ್ದಾರೆ.

Delhi Chalo ಪಟ್ಟು ಬಿಡದ ರೈತರಿಂದ ಉಪವಾಸ ಸತ್ಯಾಗ್ರಹ ಆರಂಭ