AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್-19: ರಾಜ್ಯದಲ್ಲಿಂದು 11 ಸಾವು ಮತ್ತು 1,185 ಹೊಸ ಪ್ರಕರಣಗಳು

ಕಳೆದ 24 ಗಂಟೆಗಳಲ್ಲಿ ರಾಜ್ಯ ಮತ್ತು ಬೆಂಗಳೂರಿನಲ್ಲಿ ಕೊವಿಡ್-19 ಸಂಬಂಧಿತ ಸಾವು ಮತ್ತು ಹೊಸ ಪ್ರಕರಣಗಳು ಗಾಬರಿಗೊಳ್ಳುವಷ್ಟು ಹೆಚ್ಚಿಲ್ಲವಾದರೂ, ಚಳಿಗಾಲವಾಗಿರುವುದರಿಂದ ಜನ ಜಾಗ್ರತೆಯಿಂದಿರುವುದು ಅತ್ಯವಶ್ಯಕವಾಗಿದೆ.

ಕೊವಿಡ್-19: ರಾಜ್ಯದಲ್ಲಿಂದು 11 ಸಾವು ಮತ್ತು 1,185 ಹೊಸ ಪ್ರಕರಣಗಳು
ಸಾಂದರ್ಭಿಕ ಚಿತ್ರ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Dec 15, 2020 | 10:24 PM

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಇಂದು ಸಾಯಂಕಾಲ ದೊರೆತಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನಿಂದ 11 ಜನ ಸಾವನ್ನಪ್ಪಿದ್ದಾರೆ ಮತ್ತು ಹೊಸದಾಗಿ 1,185 ಜನರಿಗೆ ಸೋಂಕು ದೃಢಪಟ್ಟಿದೆ.

ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 11,965 ಜನ ಮರಣಿಸಿದ್ದಾರೆ ಮತ್ತು ಸೋಂಕಿತರ ಒಟ್ಟು ಸಂಖ್ಯೆ 9,03,425ಕ್ಕೇರಿದೆ. ಸೋಂಕಿತರ ಪೈಕಿ 8,75,796 ಜನ ಗುಣಮುಖರಾಗಿದ್ದಾರೆ, ಮಿಕ್ಕಿದ 15,645 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಾಗೆಯೇ, ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 3 ಜನ ಬಲಿಯಾಗಿದ್ದಾರೆ ಮತ್ತು ಇಂದು ಒಂದೇ ದಿನ 673 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ನಗರದಲ್ಲಿ ಇದುವರೆಗೆ ಕೊರೊನಾದಿಂದ  4,241 ಜನ ಮರಣಿಸಿದ್ದಾರೆ  ಮತ್ತು ಸೋಂಕು ಪೀಡಿತರ ಸಂಖ್ಯೆ 3,79,571 ತಲುಪಿದೆ.

ಸೋಂಕಿತರ ಪೈಕಿ 3,64,787 ಜನರು ಗುಣಮುಖರಾಗಿದ್ದಾರೆ ಮತ್ತು ಉಳಿದ10,542 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಲಭ್ಯವಾಗಿರುವ ಮಾಹಿತಿ ತಿಳಿಸುತ್ತದೆ.

ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ
ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ
ಪೆಟ್ರೋಲ್​ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ
ಪೆಟ್ರೋಲ್​ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ
ಸದಾನಂದಗೌಡರು ಬುಲ್ಡೋಜರ್ ಬಳಸುವ ಬಗ್ಗೆ ಹೇಳಿದ್ದು ಗೊತ್ತಿಲ್ಲ: ಪರಮೇಶ್ವರ್
ಸದಾನಂದಗೌಡರು ಬುಲ್ಡೋಜರ್ ಬಳಸುವ ಬಗ್ಗೆ ಹೇಳಿದ್ದು ಗೊತ್ತಿಲ್ಲ: ಪರಮೇಶ್ವರ್
ಕರ್ನಾಟಕದಿಂದ ಎಷ್ಟು ಪಾಕಿಸ್ತಾನೀಯರು ವಾಪಸ್? ಮಾಹಿತಿ ನೀಡಿದ ಪರಮೇಶ್ವರ್
ಕರ್ನಾಟಕದಿಂದ ಎಷ್ಟು ಪಾಕಿಸ್ತಾನೀಯರು ವಾಪಸ್? ಮಾಹಿತಿ ನೀಡಿದ ಪರಮೇಶ್ವರ್
ಶಿವಾನಂದ ರಾಜೀನಾಮೆ ಸಲ್ಲಿಸಿರುವುದು ಕೇವಲ ನಾಟಕ ಮಾತ್ರ: ವಿಶ್ವನಾಥ್
ಶಿವಾನಂದ ರಾಜೀನಾಮೆ ಸಲ್ಲಿಸಿರುವುದು ಕೇವಲ ನಾಟಕ ಮಾತ್ರ: ವಿಶ್ವನಾಥ್
ಡಿಎಂಕೆ ಸಂಸದ ರಾಜಾ ಭಾಷಣ ಮಾಡುವಾಗ ಬಿದ್ದ ಫೆಡ್​ಲೈಟ್ ಕಂಬ
ಡಿಎಂಕೆ ಸಂಸದ ರಾಜಾ ಭಾಷಣ ಮಾಡುವಾಗ ಬಿದ್ದ ಫೆಡ್​ಲೈಟ್ ಕಂಬ
ಉಗ್ರರಿಗೆ ಸಹಾಯ ಮಾಡಿದ್ದ ಇಮ್ತಿಯಾಜ್ ನದಿಗೆ ಹಾರಿ ಪ್ರಾಣ ಬಿಟ್ಟ
ಉಗ್ರರಿಗೆ ಸಹಾಯ ಮಾಡಿದ್ದ ಇಮ್ತಿಯಾಜ್ ನದಿಗೆ ಹಾರಿ ಪ್ರಾಣ ಬಿಟ್ಟ
ಯುದ್ಧಸನ್ನದ್ಧ ಭಾರತೀಯ ಸೇನೆಯಿಂದ ಪ್ರತ್ಯುತ್ತರ, ಪ್ರತಿದಾಳಿ
ಯುದ್ಧಸನ್ನದ್ಧ ಭಾರತೀಯ ಸೇನೆಯಿಂದ ಪ್ರತ್ಯುತ್ತರ, ಪ್ರತಿದಾಳಿ
‘ನಟಿ ಗ್ಲಾಮರಸ್ ಆಗಿದ್ರೆ ಮಾತ್ರ ನನ್ನ ಕಣ್ಣು ಬೀಳುತ್ತೆ’; ರವಿಚಂದ್ರನ್
‘ನಟಿ ಗ್ಲಾಮರಸ್ ಆಗಿದ್ರೆ ಮಾತ್ರ ನನ್ನ ಕಣ್ಣು ಬೀಳುತ್ತೆ’; ರವಿಚಂದ್ರನ್
ಅಪಘಾತದಲ್ಲಿ ಕಾರಿನ ಮುಂಭಾಗ, ಅಂಗಡಿ ಮುಂದೆ ನಿಂತಿದ್ದ ಸ್ಕೂಟರ್ ಜಖಂ
ಅಪಘಾತದಲ್ಲಿ ಕಾರಿನ ಮುಂಭಾಗ, ಅಂಗಡಿ ಮುಂದೆ ನಿಂತಿದ್ದ ಸ್ಕೂಟರ್ ಜಖಂ