ಏಸು ಪ್ರತಿಮೆ ಕಾಮಗಾರಿ ಸ್ಥಗಿತ ಮಾಡಿರುವುದು ಸರ್ಕಾರ ಅಲ್ಲ-ಅಶೋಕ್

|

Updated on: Jan 01, 2020 | 1:33 PM

ಬೆಂಗಳೂರು: ಕನಕಪುರದ ಕಪಾಲಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶ ನೀಡಿಲ್ಲ. ಏಸು ಪ್ರತಿಮೆ ನಿರ್ಮಾಣವನ್ನು ಟ್ರಸ್ಟ್ ನವರೇ ಸ್ಥಗಿತಗೊಳಿಸಿರಬಹುದು ಎಂದು ಸಿಎಂ ಗೃಹ ಕಚೇರಿ‌ ಕೃಷ್ಣಾದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಪ್ರತಿಮೆ ನಿರ್ಮಿಸಲು ಗೋಮಾಳ ಭೂಮಿ ಕೊಡಲಾಗಿದೆ. ಏಸು ಪ್ರತಿಮೆ ನಿರ್ಮಾಣಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ, ಬೋರ್ ವೆಲ್ ತೋಡಿಸಲಾಗಿದೆ. ಎರಡು ಕಿ.ಮೀ ರಸ್ತೆಯನ್ನೂ ಸಹ ನಿರ್ಮಿಸಲಾಗಿದೆ. ಇವೆಲ್ಲವೂ ಅನಧಿಕೃತ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದ್ದಾರೆ. ಇನ್ನು ಈ ಸಂಬಂಧ ರಾಮನಗರ […]

ಏಸು ಪ್ರತಿಮೆ ಕಾಮಗಾರಿ ಸ್ಥಗಿತ ಮಾಡಿರುವುದು ಸರ್ಕಾರ ಅಲ್ಲ-ಅಶೋಕ್
Follow us on

ಬೆಂಗಳೂರು: ಕನಕಪುರದ ಕಪಾಲಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶ ನೀಡಿಲ್ಲ. ಏಸು ಪ್ರತಿಮೆ ನಿರ್ಮಾಣವನ್ನು ಟ್ರಸ್ಟ್ ನವರೇ ಸ್ಥಗಿತಗೊಳಿಸಿರಬಹುದು ಎಂದು ಸಿಎಂ ಗೃಹ ಕಚೇರಿ‌ ಕೃಷ್ಣಾದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಪ್ರತಿಮೆ ನಿರ್ಮಿಸಲು ಗೋಮಾಳ ಭೂಮಿ ಕೊಡಲಾಗಿದೆ. ಏಸು ಪ್ರತಿಮೆ ನಿರ್ಮಾಣಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ, ಬೋರ್ ವೆಲ್ ತೋಡಿಸಲಾಗಿದೆ. ಎರಡು ಕಿ.ಮೀ ರಸ್ತೆಯನ್ನೂ ಸಹ ನಿರ್ಮಿಸಲಾಗಿದೆ. ಇವೆಲ್ಲವೂ ಅನಧಿಕೃತ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಸಂಬಂಧ ರಾಮನಗರ ಜಿಲ್ಲಾಧಿಕಾರಿ, ಕನಕಪುರ ತಹಸೀಲ್ದಾರ್ ರಿಂದ ವರದಿ ಕೇಳಿದ್ದೇವೆ. ನಿನ್ನೆಯೂ ಅಧಿಕಾರಿಗಳು ನನ್ನನ್ನು ಭೇಟಿ ಮಾಡಿ, ಮೌಖಿಕ ವಿವರ ಕೊಟ್ಟಿದ್ದಾರೆ. ವರದಿ ರೂಪದಲ್ಲಿ ವಿವರ ಕೊಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ವರದಿ ಬಂದ ಬಳಿಕ‌ ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕು ಅಂತಾ ನಿರ್ಧರಿಸಲಿದೆ ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

Published On - 1:31 pm, Wed, 1 January 20