ಹೊಸ ವರ್ಷದ ಅಮಲಿನಲ್ಲಿ ದಾಖಲಾದ ಡ್ರಿಂಕ್ & ಡ್ರೈವ್ ಕೇಸುಗಳು ಇಷ್ಟು

ಹೊಸ ವರ್ಷದ ಅಮಲಿನಲ್ಲಿ ದಾಖಲಾದ ಡ್ರಿಂಕ್ & ಡ್ರೈವ್ ಕೇಸುಗಳು ಇಷ್ಟು

ಬೆಂಗಳೂರು: ಹೊಸ ವರ್ಷಾಚರಣೆ ಎಂದು ನಗರದಲ್ಲಿ ಕುಡಿದು ವಾಹನ ಚಲಾಯಿಸಿದವರಿಗೆ ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಿನ್ನೆ ಹೊಸ ವರ್ಷಾಚರಣೆ ಸಂಭ್ರಮ ವೇಳೆ ನೂರಾರು ಡ್ರಿಂಕ್ & ಡ್ರೈವ್ ಪ್ರಕರಣಗಳು ದಾಖಲಾಗಿದ್ದು, ಡ್ರಿಂಕ್ & ಡ್ರೈವ್​ ಕೇಸ್​ನಲ್ಲಿ ಒಂದೇ ರಾತ್ರಿಗೆ ಲಕ್ಷಗಟ್ಟಲೇ ದಂಡ ಹರಿದು ಬಂದಿದೆ.

ಬೆಂಗಳೂರು ನಗರದಲ್ಲಿ 426 ಡ್ರಿಂಕ್ & ಡ್ರೈವ್ ಪ್ರಕರಣ ದಾಖಲಾಗಿದೆ. ಪೂರ್ವ ವಿಭಾಗದಲ್ಲಿ 99, ಪಶ್ಚಿಮ ವಿಭಾಗದಲ್ಲಿ 254, ಉತ್ತರ ವಿಭಾಗದಲ್ಲಿ 73 ಕೇಸ್ ದಾಖಲಾಗಿದೆ. ನಗರದ ಮೂರು ಸಂಚಾರಿ ವಿಭಾಗದಲ್ಲಿ ಒಟ್ಟು 426 ಡ್ರಿಂಕ್ & ಡ್ರೈವ್ ಕೇಸ್ ಆಗಿದೆ. ದಾಖಲಾದ 426 ಪ್ರಕರಣಗಳಲ್ಲಿ ಎಲ್ಲಾ 426 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಸದ್ಯ ಕುಡಿದು ವಾಹನ ಚಲಾಯಿಸಿರೋ 426 ಮಂದಿಯ ಡ್ರೈವಿಂಗ್ ಲೈಸೆನ್ಸ್ ರದ್ದಾಗುವ ಸಾದ್ಯತೆಯಿದೆ.

Click on your DTH Provider to Add TV9 Kannada