ರೇಣುಕಾ ಯಲ್ಲಮ್ಮ ದೇಗುಲದ‌ ಬಳಿ ಅಕ್ರಮ ಕಟ್ಟಡ! ನಿರ್ಮಾಣಕ್ಕೆ ಮಧ್ಯಂತರ ತಡೆ

| Updated By: ಸಾಧು ಶ್ರೀನಾಥ್​

Updated on: Oct 12, 2020 | 3:10 PM

ಬೆಳಗಾವಿ: ರೇಣುಕಾ ಯಲ್ಲಮ್ಮ ದೇಗುಲದ‌ ಬಳಿ ಅಕ್ರಮ ಕಟ್ಟಡ ನಿರ್ಮಾಣ ಆರೋಪಕ್ಕೆ ಸಂಬಂಧಿಸಿ ದೇವಸ್ಥಾನದ 100 ಮೀಟರ್ ವ್ಯಾಪ್ತಿಯಲ್ಲಿನ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್ ವಿಭಾಗೀಯ ಪೀಠದಿಂದ ಮಧ್ಯಂತರ ತಡೆ ನೀಡಲಾಗಿದೆ. ಸವದತ್ತಿಯ ದೇವಸ್ಥಾನ ಸಂರಕ್ಷಿತ ಸ್ಮಾರಕ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನ ಸಂರಕ್ಷಿತ ಸ್ಮಾರಕ. ಹಾಗಾಗಿ, ಅದರ 100 ಮೀಟರ್ ಸುತ್ತಳತೆಯಲ್ಲಿ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಉಚ್ಚ ನ್ಯಾಯಾಲಯವು ಹೇಳಿದೆ. ದೇವಸ್ಥಾನದ ಸುತ್ತ ನಿಯಮ ಮೀರಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅರ್ಜಿದಾರರ ಪರ ವಿಜೇತಾ ಆರ್. […]

ರೇಣುಕಾ ಯಲ್ಲಮ್ಮ ದೇಗುಲದ‌ ಬಳಿ ಅಕ್ರಮ ಕಟ್ಟಡ! ನಿರ್ಮಾಣಕ್ಕೆ ಮಧ್ಯಂತರ ತಡೆ
Follow us on

ಬೆಳಗಾವಿ: ರೇಣುಕಾ ಯಲ್ಲಮ್ಮ ದೇಗುಲದ‌ ಬಳಿ ಅಕ್ರಮ ಕಟ್ಟಡ ನಿರ್ಮಾಣ ಆರೋಪಕ್ಕೆ ಸಂಬಂಧಿಸಿ ದೇವಸ್ಥಾನದ 100 ಮೀಟರ್ ವ್ಯಾಪ್ತಿಯಲ್ಲಿನ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್ ವಿಭಾಗೀಯ ಪೀಠದಿಂದ ಮಧ್ಯಂತರ ತಡೆ ನೀಡಲಾಗಿದೆ.

ಸವದತ್ತಿಯ ದೇವಸ್ಥಾನ ಸಂರಕ್ಷಿತ ಸ್ಮಾರಕ
ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನ ಸಂರಕ್ಷಿತ ಸ್ಮಾರಕ. ಹಾಗಾಗಿ, ಅದರ 100 ಮೀಟರ್ ಸುತ್ತಳತೆಯಲ್ಲಿ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಉಚ್ಚ ನ್ಯಾಯಾಲಯವು ಹೇಳಿದೆ.

ದೇವಸ್ಥಾನದ ಸುತ್ತ ನಿಯಮ ಮೀರಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅರ್ಜಿದಾರರ ಪರ ವಿಜೇತಾ ಆರ್. ನಾಯಕ್ ತಮ್ಮ ವಾದ ಮಂಡಿಸಿದ್ದರು. ಹೀಗಾಗಿ, ಮುಂದಿನ ವಿಚಾರಣೆಯವರೆಗೆ ಕಟ್ಟಡ ನಿರ್ಮಾಣಕ್ಕೆ ರೇಣುಕಾ ಯಲ್ಲಮ್ಮ ತಡೆ ನೀಡಿದೆ.