ಆಪ್ತನ ಮನೆಯಲ್ಲಿ ಕಾಲ ಕಳೆಯುತ್ತಿರೋ ರಾಮುಲು: ಸಂಜೆ ಸಿಎಂ ಭೇಟಿ, ರಾಜೀನಾಮೆ?
ದೇವನಹಳ್ಳಿ: ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ಸಚಿವ ಬಿ. ಶ್ರೀರಾಮುಲು ತೀವ್ರ ಬೇಸರಗೊಂಡಿದ್ದಾರೆ. ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಧ್ಯಾಹ್ನ ಶ್ರೀರಾಮುಲು ಖಾತೆ ಬದಲಾವಣೆಯನ್ನು ಪಕ್ಕಾ ಮಾಡುತ್ತಿದ್ದಂತೆ ಸಿಎಂ ನಿವಾಸಕ್ಕೆ ರಾಮುಲು ದೌಡಾಯಿಸಿದ್ದರು. ಸಿಎಂ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ಸಂದರ್ಭದಲ್ಲಿ ತಮ್ಮಲ್ಲಿ ದುಗುಡ ತುಂಬಿದ್ದರೂ ಅದನ್ನು ತೋರ್ಪಡಿಸದೆ.. ಖಾತೆ ಹಂಚಿಕೆ ನಿಮ್ಮ ಪರಮಾಧಿಕಾರ, ನಿಮ್ಮ ಆದೇಶಕ್ಕೆ ಬದ್ಧ. ಈ ಬಾರಿ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದು ಸಿಎಂಗೆ ಸ್ಪಷ್ಟಪಡಿಸಿದ್ದರು ಎಂದು ತಿಳಿದುಬಂದಿದೆ. ಆದ್ರೆ ಅದಾಗುತ್ತಿದ್ದಂತೆ ಸೀದಾ ಬೆಂಗಳೂರು […]

ದೇವನಹಳ್ಳಿ: ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ಸಚಿವ ಬಿ. ಶ್ರೀರಾಮುಲು ತೀವ್ರ ಬೇಸರಗೊಂಡಿದ್ದಾರೆ. ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಧ್ಯಾಹ್ನ ಶ್ರೀರಾಮುಲು ಖಾತೆ ಬದಲಾವಣೆಯನ್ನು ಪಕ್ಕಾ ಮಾಡುತ್ತಿದ್ದಂತೆ ಸಿಎಂ ನಿವಾಸಕ್ಕೆ ರಾಮುಲು ದೌಡಾಯಿಸಿದ್ದರು.
ಸಿಎಂ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ಸಂದರ್ಭದಲ್ಲಿ ತಮ್ಮಲ್ಲಿ ದುಗುಡ ತುಂಬಿದ್ದರೂ ಅದನ್ನು ತೋರ್ಪಡಿಸದೆ.. ಖಾತೆ ಹಂಚಿಕೆ ನಿಮ್ಮ ಪರಮಾಧಿಕಾರ, ನಿಮ್ಮ ಆದೇಶಕ್ಕೆ ಬದ್ಧ. ಈ ಬಾರಿ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದು ಸಿಎಂಗೆ ಸ್ಪಷ್ಟಪಡಿಸಿದ್ದರು ಎಂದು ತಿಳಿದುಬಂದಿದೆ.
ಆದ್ರೆ ಅದಾಗುತ್ತಿದ್ದಂತೆ ಸೀದಾ ಬೆಂಗಳೂರು ಉತ್ತರದತ್ತ ಮುಖ ಮಾಡಿದ ಶ್ರೀರಾಮುಲು ಚಿಕ್ಕಜಾಲ ಬಳಿಯಿರುವ ತಮ್ಮ ಆಪ್ತನ ಮನೆಗೆ ತೆರಳಿದರು. ಅಲ್ಲಿ ಸಚಿವ ಸ್ಥಾನದ ಅದಲುಬದಲು ಬೇಸರದಲ್ಲಿ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ ರಾಮುಲು. ಮನೆಯ ಕೊಣೆಯಲ್ಲಿ ಒಂಟಿಯಾಗಿರೋ ರಾಮುಲು, ಆಪ್ತರು ಸೇರಿದಂತೆ ಯಾರಿಗೂ ಒಳಬಾರದಂತೆ ಸೂಚಿಸಿ ಒಂಟಿಯಾಗಿದ್ದಾರೆ ಎಂದು ಹೇಳಲಾಗಿದೆ.
ಸಂಜೆ ಸಿಎಂ ಭೇಟಿ, ರಾಜೀನಾಮೆ? ತಮ್ಮ ಬಳಿಯಿದ್ದ ಆರೋಗ್ಯ ಖಾತೆಯನ್ನು ಹಿಂಪಡೆದ ಹಿನ್ನೆಲೆ ತೀವ್ರ ನಿರಾಶೆಗೊಂಡಿರುವ ಸಚಿವ ಬಿ. ಶ್ರೀರಾಮುಲು ಇಂದು ಸಂಜೆ ಮತ್ತೊಮ್ಮೆ ಸಿಎಂ ಯಡಿಯೂರಪ್ಪ ಅವರನ್ನ ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಆ ವೇಳೆ, ಅತೃಪ್ತಿ ಶಮನವಾಗದಿದ್ದರೆ ರಾಜೀನಾಮೆ ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
Published On - 3:43 pm, Mon, 12 October 20