ಬೆಂಗಳೂರು: ಮುಂದಿನ ಸಿಎಂ ಅನ್ನೋದು ಕಾಂಗ್ರೆಸ್‌ನ ಸಂಸ್ಕೃತಿಯಲ್ಲ. ಮೊದಲು ಪಕ್ಷಕ್ಕೆ ಬಹುಮತ ಬರುವಂತಹ ಕೆಲಸ ಮಾಡಿ. ಆನಂತರ ಮುಖ್ಯಮಂತ್ರಿ ವಿಚಾರ ಎಂದು ಬೆಂಗಳೂರಿನಲ್ಲಿ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಕೆಲ ಕಾಂಗ್ರೆಸ್ ನಾಯಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೊದಲು ಪಕ್ಷಕ್ಕೆ ಬಹುಮತ ಬರುವಂತಹ ಕೆಲಸ ಮಾಡಿ. ಆನಂತರ ಮುಖ್ಯಮಂತ್ರಿ ವಿಚಾರ ಮಾಡಿ. ಒಂದು ಕಡೆ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಜಮೀರ್ ಹೇಳ್ತಾರೆ. ಮತ್ತೊಂದು ಕಡೆ ಡಿಕೆಶಿ ಮುಂದಿನ ಸಿಎಂ ಎಂದು ‘ಕೈ’ ಶಾಸಕಿ ಸೌಮ್ಯಾರೆಡ್ಡಿ, ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಹೇಳ್ತಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು. ಪಕ್ಷದ ಹಿತಕ್ಕೆ ಧಕ್ಕೆ ತರುವ ಹೇಳಿಕೆ ನೀಡಿದರೆ ನೋಟಿಸ್ ನೀಡಬೇಕು. ಛೋಟಾ ಛೋಟಾ ನಾಯಕರೆಲ್ಲಾ ಈಗ ಮಾತಾಡುತ್ತಿದ್ದಾರೆ. ಶಿಸ್ತುಕ್ರಮ ಸಮಿತಿಯಲ್ಲಿ ನಾನೂ ಇದ್ದೇನೆ, ಕ್ರಮಕೈಗೊಳ್ತೇನೆ. ಇಂತಹ ಹೇಳಿಕೆಗಳು ಕೊಟ್ಟವರಿಗೆ ಕೂಡಲೇ ಸಭೆ ಕರೆದು ನೋಟಿಸ್ ನೀಡುತ್ತೇವೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಎಲ್ಲವನ್ನೂ ಗಮನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡರ ಹೇಳಿಕೆಯನ್ನು ಟೀಕಿಸಿದ್ದಾರೆ.
ಇನ್ನು ಮುಖ್ಯಮಂತ್ರಿ ಆಗುವ ಯೋಗ್ಯತೆ ಉತ್ತರಕರ್ನಾಟಕದ ಹಲವು ನಾಯಕರಿಗೆ ಇದೆ. ಉತ್ತರ ಕರ್ನಾಟಕ ಭಾಗ ಸರಿಯಾಗಿ ಅಭಿವೃದ್ಧಿಯಾಗುತ್ತಿಲ್ಲ. ಅವಕಾಶವಿದ್ದರೆ ಉತ್ತರ ಕರ್ನಾಟಕದವರನ್ನು ಸಿಎಂ ಮಾಡಲಿ. ಆಗ ಉತ್ತರ ಕರ್ನಾಟಕ ಅಭಿವೃದ್ಧಿಯಾಗಲಿದೆ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದರು.
ಮುಂದಿನ ಸಿಎಂ ಯಾರು ಎಂಬುದು ಈಗ ಅಪ್ರಸ್ತುತ:
ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಕೋಳಿವಾಡ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಶಿಸ್ತುಪಾಲನಾ ಸಮಿತಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತದೆ. ಅದು ಅದರ ಜವಾಬ್ದಾರಿ ನಿರ್ವಹಿಸುತ್ತದೆ. ಮುಂದಿನ ಸಿಎಂ ಯಾರು ಎಂಬುದು ಈಗ ಅಪ್ರಸ್ತುತ. ನಾವೆಲ್ಲ ಶಾಸಕಾಂಗ ಪಕ್ಷದ ನಾಯಕರ ಜೊತೆ ಇದ್ದೇವೆ. ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಬರಲಿ. ಸಿಎಂ ಯಾರೆಂದು ಹೈಕಮಾಂಡ್ ನಿರ್ಧರಿಸುತ್ತೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆಸಿದ್ದಾರೆ.
Published On - 2:06 pm, Sun, 25 October 20