ಮಾಜಿ ಸಚಿವ ಪುತ್ರನಿಗೂ ಬೆಂಗಳೂರು Drugs ನೆಟ್​ವರ್ಕ್ ನಂಟು? ಸಮನ್ಸ್​ ಜಾರಿಗೆ ಸಿದ್ಧತೆ

ಬೆಂಗಳೂರು: ನಗರದಲ್ಲಿ ಹರಡಿರುವ ಡ್ರಗ್ಸ್ ನೆಟ್​ವರ್ಕ್​ಗೂ ಕೇರಳದ ಮಾಜಿ ಸಚಿವರ ಪುತ್ರನಿಗೂ ನಂಟಿರುವ ಗುಮಾನಿ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಸಚಿವರ ಪುತ್ರನಿಗೆ ಸಮನ್ಸ್ ನೀಡುವುದಕ್ಕೆ ಜಾರಿ ನಿರ್ದೇಶನಾಲಯವು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. ಕೇರಳ ಮಾಜಿ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿಗೆ ಸಮನ್ಸ್ ನೀಡುವುದಕ್ಕೆ ಸಿದ್ಧತೆ ನಡೆಸಲಾಗುತ್ತಿದ್ದು ಡ್ರಗ್ಸ್ ಪ್ರಕರಣದಲ್ಲಿ NCBಯಿಂದ ಬಂಧಿತನಾಗಿರುವ ಆರೋಪಿ ಅನೂಪ್ ತಾನು ರೆಸ್ಟೋರಂಟ್ ತೆರೆಯಲು ಬಿನೀಶ್ ಹಣ ನೀಡಿದ್ದ ಎಂದು ವಿಚಾರಣೆ ವೇಳೆ ಹೇಳಿದ್ದಾನಂತೆ. ಸುಮಾರು […]

ಮಾಜಿ ಸಚಿವ ಪುತ್ರನಿಗೂ ಬೆಂಗಳೂರು Drugs ನೆಟ್​ವರ್ಕ್ ನಂಟು? ಸಮನ್ಸ್​ ಜಾರಿಗೆ ಸಿದ್ಧತೆ
Edited By:

Updated on: Oct 01, 2020 | 1:20 PM

ಬೆಂಗಳೂರು: ನಗರದಲ್ಲಿ ಹರಡಿರುವ ಡ್ರಗ್ಸ್ ನೆಟ್​ವರ್ಕ್​ಗೂ ಕೇರಳದ ಮಾಜಿ ಸಚಿವರ ಪುತ್ರನಿಗೂ ನಂಟಿರುವ ಗುಮಾನಿ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಸಚಿವರ ಪುತ್ರನಿಗೆ ಸಮನ್ಸ್ ನೀಡುವುದಕ್ಕೆ ಜಾರಿ ನಿರ್ದೇಶನಾಲಯವು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಕೇರಳ ಮಾಜಿ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿಗೆ ಸಮನ್ಸ್ ನೀಡುವುದಕ್ಕೆ ಸಿದ್ಧತೆ ನಡೆಸಲಾಗುತ್ತಿದ್ದು ಡ್ರಗ್ಸ್ ಪ್ರಕರಣದಲ್ಲಿ NCBಯಿಂದ ಬಂಧಿತನಾಗಿರುವ ಆರೋಪಿ ಅನೂಪ್ ತಾನು ರೆಸ್ಟೋರಂಟ್ ತೆರೆಯಲು ಬಿನೀಶ್ ಹಣ ನೀಡಿದ್ದ ಎಂದು ವಿಚಾರಣೆ ವೇಳೆ ಹೇಳಿದ್ದಾನಂತೆ. ಸುಮಾರು 50 ಲಕ್ಷ ರೂಪಾಯಿ ಹಣ ನೀಡಿರುವುದಾಗಿ ಅನೂಪ್​ ಹೇಳಿದ್ದಾನೆ ಎಂದು ತಿಳಿದುಬಂದಿದೆ. ಇದಲ್ಲದೆ, ವಿಚಾರಣೆ ವೇಳೆ ಅನೂಪ್​ ತಾನು 2015ರಿಂದ ಡೀಲಿಂಗ್ ಮಾಡುತ್ತಿರುವುದಾಗಿ ಹೇಳಿದ್ದಾನಂತೆ.

ಸದ್ಯ NCB ಅಧಿಕಾರಿಗಳಿಂದ ಮಾಹಿತಿ ಪಡೆದಿರುವ ED ತಂಡವು ಬಿನೀಶ್​ಗೆ ಸಮನ್ಸ್​ ಜಾರಿ ಮಾಡಲು ಸಿದ್ಧತೆ ನಡೆಸಿದೆ.