‘ಸ್ಥಳೀಯರೇ, ಸ್ಥಳ ಪರಿಚಯ ಇದ್ದವರಿಂದಲೇ ಕುಕೃತ್ಯ! ಬೇರೆ ಕಡೆಯಿಂದ ಬಂದವರದ್ದಲ್ಲ’

|

Updated on: Aug 12, 2020 | 10:36 AM

ಬೆಂಗಳೂರು: ಫೇಸ್​ಬುಕ್​ ಜ್ವಾಲಾಗ್ನಿಗೆ ಬೆಂಗಳೂರಿನ ಒಂದು ಭಾಗ ನಿನ್ನೆ ರಾತ್ರಿ ದಹದಹಿಸಿದೆ. ಹಿಂಸಾಚಾರಕ್ಕೆ ತಹತಹಿಸುತ್ತಿದ್ದವರ ಪೈಕಿ ಮೂವರು ಪೊಲೀಸರ ಬಂದೂಕಿಗೆ ಭಸ್ಮವಾಗಿದ್ದಾರೆ. ಈ ಮಧ್ಯೆ, ಹಿಂಸಾಚಾರದಲ್ಲಿ ಭಾಗವಹಿಸಿದ್ದವರೆಲ್ಲ ಹೊರಗಿನಿಂದ ಬಂದವರು ಎಂಬ ಥಿಯರಿ ಹರಿಯ ಬಿಡಲಾಗಿದೆ. ಆದ್ರೆ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದ ಗಲಾಟೆ ಯೋಜಿತವಾಗಿದ್ದು, ಪೊಲೀಸರನ್ನೇ ಟಾರ್ಗೆಟ್​ ಮಾಡಿ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ. ಇದು ಸ್ಥಳೀಯರೇ, ಸ್ಥಳ ಪರಿಚಯ ಇರುವವರದ್ದೇ ಕೃತ್ಯ ಎಂದು ತಿಳಿದುಬಂದಿದೆ. ಇದಕ್ಕೆ ಪೂರಕವೆಂಬಂತೆ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿರುವ […]

‘ಸ್ಥಳೀಯರೇ, ಸ್ಥಳ ಪರಿಚಯ ಇದ್ದವರಿಂದಲೇ ಕುಕೃತ್ಯ! ಬೇರೆ ಕಡೆಯಿಂದ ಬಂದವರದ್ದಲ್ಲ’
Follow us on

ಬೆಂಗಳೂರು: ಫೇಸ್​ಬುಕ್​ ಜ್ವಾಲಾಗ್ನಿಗೆ ಬೆಂಗಳೂರಿನ ಒಂದು ಭಾಗ ನಿನ್ನೆ ರಾತ್ರಿ ದಹದಹಿಸಿದೆ. ಹಿಂಸಾಚಾರಕ್ಕೆ ತಹತಹಿಸುತ್ತಿದ್ದವರ ಪೈಕಿ ಮೂವರು ಪೊಲೀಸರ ಬಂದೂಕಿಗೆ ಭಸ್ಮವಾಗಿದ್ದಾರೆ. ಈ ಮಧ್ಯೆ, ಹಿಂಸಾಚಾರದಲ್ಲಿ ಭಾಗವಹಿಸಿದ್ದವರೆಲ್ಲ ಹೊರಗಿನಿಂದ ಬಂದವರು ಎಂಬ ಥಿಯರಿ ಹರಿಯ ಬಿಡಲಾಗಿದೆ. ಆದ್ರೆ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದ ಗಲಾಟೆ ಯೋಜಿತವಾಗಿದ್ದು, ಪೊಲೀಸರನ್ನೇ ಟಾರ್ಗೆಟ್​ ಮಾಡಿ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ. ಇದು ಸ್ಥಳೀಯರೇ, ಸ್ಥಳ ಪರಿಚಯ ಇರುವವರದ್ದೇ ಕೃತ್ಯ ಎಂದು ತಿಳಿದುಬಂದಿದೆ.

ಇದಕ್ಕೆ ಪೂರಕವೆಂಬಂತೆ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳು ನಿಗದಿತ ಸಮುದಾಯದ ಮನೆ, ಅಂಗಡಿಗಳಿಗೆ ಹಾನಿ ಮಾಡಿಲ್ಲ. ಕೇವಲ ಪೊಲೀಸರು ಮತ್ತು ಅನ್ಯ ಸಮುದಾಯದವರನ್ನು ಗುರಿಯಾಗಿಸಿಕೊಂಡು ಗಲಭೆ ನಡೆಸಿದ್ದಾರೆ. ವಾಹನಗಳಿಗೆ ಬೆಂಕಿ ಹಚ್ಚಿದ್ದ ರಸ್ತೆಯಲ್ಲಿ ಸುತ್ತಮುತ್ತಲ ಮನೆಗಳಿಗೆ ಹಾನಿ ಮಾಡಿಲ್ಲ. ಹೀಗಾಗಿ ಸ್ಥಳೀಯರೇ, ಸ್ಥಳ ಪರಿಚಯ ಇರುವವರಿಂದಲೇ ಕೃತ್ಯ ಎಂಬ ತರ್ಕ ಪೊಲೀಸ್​ ವಲಯದಿಂದ ಇದೀಗ ಕೇಳಿಬರುತ್ತಿದೆ.

ಈ ಮಧ್ಯೆ, ಘಟನೆಯ ತೀವ್ರತೆಗೆ ನಿನ್ನೆ ಪೊಲೀಸರೇ ಆತಂಕಕ್ಕೆ ಸಿಲುಕಿದ್ರು. ನಮ್ಮ ಜೀವ ಉಳಿದಿದ್ದೇ ಹೆಚ್ಚು ಅಂತಿದ್ದಾರೆ ಪೊಲೀಸರು. ಡಿಜೆ ಹಳ್ಳಿ ಸ್ಟೇಷನ್ ಮುಂಭಾಗದ ಪೊಲೀಸ್ ವಾಹನಗಳಿಗೆ ಹತ್ತಿದ ಬೆಂಕಿ ಇನ್ನೂ ಆರಿಲ್ಲ.

Published On - 10:18 am, Wed, 12 August 20