A2 ಆರೋಪಿ, ಎಸ್ಡಿಪಿಐ ಸದಸ್ಯ ಅಯಾಜ್ ಬಂಧನ
ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ಡಿಪಿಐ ಸದಸ್ಯನಾಗಿರೋ ಅಯಾಜ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಾನು ಪೊಲೀಸರ ಪರ ಎಂದು ನಾಟಕವಾಡಿ, ಮೈಕ್ ಅಳವಡಿಸಿದ ಬಳಿಕ ಗಲಾಟೆಯಲ್ಲಿ ಅಯಾಜ್ ಭಾಗಿಯಾಗಿದ್ದಾನೆ. ಅಯಾಜ್ ನೂರಕ್ಕೂ ಹೆಚ್ಚು ಜನರನ್ನು ಗಲಾಟೆಗೆ ಕರೆ ತಂದು, ಗಲಾಟೆ ಮಾಡಲು ಪ್ರಚೋದನೆ ನೀಡಿದ್ದ ಎಂಬ ಮಾಹಿತಿ ಸಿಕ್ಕಿದೆ. ಗಲಭೆಗೆ ಕಾರಣನಾಗಿರುವ ಹಿನ್ನೆಲೆಯಲ್ಲಿ ಅಯಾಜ್ನನ್ನು ಬಂಧಿಸಲಾಗಿದೆ. ಸದ್ಯ ಪೊಲೀಸಸರು ವಿಡಿಯೋ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿಯುವ ಕಾರ್ಯವನ್ನು ಮುಂದುವರೆಸಿದ್ದಾರೆ.

ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ಡಿಪಿಐ ಸದಸ್ಯನಾಗಿರೋ ಅಯಾಜ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ತಾನು ಪೊಲೀಸರ ಪರ ಎಂದು ನಾಟಕವಾಡಿ, ಮೈಕ್ ಅಳವಡಿಸಿದ ಬಳಿಕ ಗಲಾಟೆಯಲ್ಲಿ ಅಯಾಜ್ ಭಾಗಿಯಾಗಿದ್ದಾನೆ. ಅಯಾಜ್ ನೂರಕ್ಕೂ ಹೆಚ್ಚು ಜನರನ್ನು ಗಲಾಟೆಗೆ ಕರೆ ತಂದು, ಗಲಾಟೆ ಮಾಡಲು ಪ್ರಚೋದನೆ ನೀಡಿದ್ದ ಎಂಬ ಮಾಹಿತಿ ಸಿಕ್ಕಿದೆ. ಗಲಭೆಗೆ ಕಾರಣನಾಗಿರುವ ಹಿನ್ನೆಲೆಯಲ್ಲಿ ಅಯಾಜ್ನನ್ನು ಬಂಧಿಸಲಾಗಿದೆ. ಸದ್ಯ ಪೊಲೀಸಸರು ವಿಡಿಯೋ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿಯುವ ಕಾರ್ಯವನ್ನು ಮುಂದುವರೆಸಿದ್ದಾರೆ.




