ಆರ್ಕೆಸ್ಟ್ರಾ ಕಲಾವಿದರ ಪ್ರತಿಭಟನೆಗೆ ಕಿಚ್ಚ ಸುದೀಪ್​ ಬೆಂಬಲ; ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒತ್ತಾಯ

|

Updated on: Jan 18, 2021 | 3:34 PM

ದೂರದರ್ಶನಗಳು ಇಲ್ಲದ ಕಾಲದಿಂದಲೂ ನಮ್ಮನ್ನು ರಂಜಿಸುತ್ತಿರುವ ಈ ಕಲಾಬಳಗವನ್ನು ಮುಂದಿನ ತಲೆಮಾರುಗಳ ತನಕ ಕಾಪಾಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ.

ಆರ್ಕೆಸ್ಟ್ರಾ ಕಲಾವಿದರ ಪ್ರತಿಭಟನೆಗೆ ಕಿಚ್ಚ ಸುದೀಪ್​ ಬೆಂಬಲ; ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒತ್ತಾಯ
ನಟ ಸುದೀಪ್​
Follow us on

ಬೆಂಗಳೂರು: ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಆರ್ಕೆಸ್ಟ್ರಾ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸುತ್ತಿರುವ ವಾದ್ಯಗೋಷ್ಠಿ ಕಲಾವಿದರ ಬೆಂಬಲಕ್ಕೆ ನಟ ಕಿಚ್ಚ ಸುದೀಪ್​ ನಿಂತಿದ್ದಾರೆ.

ಆರ್ಕೆಸ್ಟ್ರಾ ಕಲಾವಿದರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿರುವ ಸುದೀಪ್​, ನಾನು ಪ್ರತಿಭಟನಾ ನಿರತ ವಾದ್ಯಗೋಷ್ಠಿ ಕಲಾವಿದರ ಜತೆಗೆ ಇದ್ದೇನೆ. ಅವರ ಹೋರಾಟಕ್ಕೆ ನನ್ನ ಬೆಂಬಲವಿದೆ. ಅವರಿಗೆ ನಿಮ್ಮಿಂದಾದ ನೆರವು ನೀಡಿ ಎಂದು ನನ್ನ ಸ್ನೇಹಿತರು ಮತ್ತು ಅಭಿಮಾನಿಗಳನ್ನು ವಿನಂತಿಸುತ್ತೇನೆ.

ಹಾಗೆಯೇ.. ಈ ಕಲಾವಿದರ ಪರವಾಗಿ ಸರ್ಕಾರ ಸಹ ಪೂರಕ ಕ್ರಮ ಕೈಗೊಳ್ಳಬೇಕು ಎಂದೂ ಕೋರುತ್ತೇನೆ. ದೂರದರ್ಶನಗಳು ಇಲ್ಲದ ಕಾಲದಿಂದಲೂ ನಮ್ಮನ್ನು ರಂಜಿಸುತ್ತಿರುವ ಈ ಕಲಾ ಬಳಗವನ್ನು ಮುಂದಿನ ತಲೆಮಾರುಗಳ ತನಕ ಕಾಪಾಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂಬುದು ನನ್ನ ಭಾವನೆ. ನಮ್ಮ ಈ ಪ್ರತಿಭೆಗಳ ಪರವಾಗಿ ನಾವೇ ನಿಲ್ಲದಿದ್ದರೆ, ಇನ್ಯಾರು ನಿಲ್ಲುತ್ತಾರೆ ಅಲ್ಲವೇ? ಎಂದು ಹೇಳಿದ್ದಾರೆ.

ಹಾಡುವವರ ಪಾಡು ಕೇಳೋರು ಯಾರೂ ಇಲ್ಲ.. ಆದ್ರೆ ಹಾಡು ಹಕ್ಕಿಗೂ ಬೇಕಿದೆ ಒಂದು ಗೂಡು, ನೆಲೆ!

Published On - 3:04 pm, Mon, 18 January 21