ವೈದ್ಯಾಧಿಕಾರಿಯ ತಾರತಮ್ಯದ ವಿರುದ್ಧ ಸಿಡಿದೆದ್ದ KIMS ಸಿಬ್ಬಂದಿ

| Updated By:

Updated on: Jul 31, 2020 | 12:18 AM

ಬೆಂಗಳೂರು: ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲೊಂದಾಗಿರುವ ಕಿಮ್ಸ್​ನ ನರ್ಸ್, ಆಯಾ ಮತ್ತು ವಾರ್ಡ್​ ಬಾಯ್​ಗಳು ಆಸ್ಪತ್ರೆಯ ಆಡಳಿತಾತ್ಮಕ ವೈದ್ಯಾಧಿಕಾರಿ ಡಾ. ವಿನೋದ್ ಅವರ ಕಾರ್ಯವೈಖರಿ ಖಂಡಿಸಿ ಪ್ರತಿಭಟನೆ ನಡೆಸಿದರು. ತಮ್ಮ ಕೆಲಸವನ್ನು ನಿಲ್ಲಿಸಿ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆಗೆ ಕುಳಿತ ಸಿಬ್ಬಂದಿಯ ಆರೋಪವೇನೆಂದರೆ, ಕೊರೊನಾ ವಾರ್ಡ್​ಗಳಲ್ಲಿ ಬಹಳಷ್ಟು ನರ್ಸ್ ಮತ್ತು ವಾರ್ಡ್​ ಬಾಯ್​ಗಳು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮೊದಲಿದ್ದ ಒಂದು ವಾರ ಕೆಲಸ-ಒಂದು ವಾರ ಕ್ವಾರಂಟೈನ್ ವ್ಯವಸ್ಥೆಯನ್ನು ಡಾ. ವಿನೋದ್ ರದ್ದು ಮಾಡಿ ಬಿಡುವಿಲ್ಲದಂತೆ ದುಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಐವರು ನರ್ಸ್​ಗಳು […]

ವೈದ್ಯಾಧಿಕಾರಿಯ ತಾರತಮ್ಯದ ವಿರುದ್ಧ ಸಿಡಿದೆದ್ದ KIMS ಸಿಬ್ಬಂದಿ
Follow us on

ಬೆಂಗಳೂರು: ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲೊಂದಾಗಿರುವ ಕಿಮ್ಸ್​ನ ನರ್ಸ್, ಆಯಾ ಮತ್ತು ವಾರ್ಡ್​ ಬಾಯ್​ಗಳು ಆಸ್ಪತ್ರೆಯ ಆಡಳಿತಾತ್ಮಕ ವೈದ್ಯಾಧಿಕಾರಿ ಡಾ. ವಿನೋದ್ ಅವರ ಕಾರ್ಯವೈಖರಿ ಖಂಡಿಸಿ ಪ್ರತಿಭಟನೆ ನಡೆಸಿದರು.

ತಮ್ಮ ಕೆಲಸವನ್ನು ನಿಲ್ಲಿಸಿ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆಗೆ ಕುಳಿತ ಸಿಬ್ಬಂದಿಯ ಆರೋಪವೇನೆಂದರೆ, ಕೊರೊನಾ ವಾರ್ಡ್​ಗಳಲ್ಲಿ ಬಹಳಷ್ಟು ನರ್ಸ್ ಮತ್ತು ವಾರ್ಡ್​ ಬಾಯ್​ಗಳು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮೊದಲಿದ್ದ ಒಂದು ವಾರ ಕೆಲಸ-ಒಂದು ವಾರ ಕ್ವಾರಂಟೈನ್ ವ್ಯವಸ್ಥೆಯನ್ನು ಡಾ. ವಿನೋದ್ ರದ್ದು ಮಾಡಿ ಬಿಡುವಿಲ್ಲದಂತೆ ದುಡಿಸಿಕೊಳ್ಳುತ್ತಿದ್ದಾರೆ.

ಇದರಿಂದಾಗಿ ಐವರು ನರ್ಸ್​ಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಡ್ಯೂಟಿ ಅವಧಿ ಮೀರಿ ಕೆಲಸ ಮಾಡುವಂತೆ ವಿನೋದ್ ಒತ್ತಡ ಹೇರುತ್ತಿದ್ದಾರೆ ಎಂದು ಪ್ರತಿಭಟನಾನಿರತ ಸಿಬ್ಬಂದಿ ಆರೋಪಿಸಿದರು. ಇದಲ್ಲದೆ, PPE ಕಿಟ್ ಹಂಚುವುದರಲ್ಲೂ ಡಾ. ವಿನೋದ್ ತಾರತಮ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿದ ನರ್ಸ್​ಗಳು ತಮಗೆ ನ್ಯಾಯ ಒದಗಿಸುವ ಭರವಸೆ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಹೇಳಿದರು.

Published On - 5:33 pm, Wed, 29 July 20