
ಕೋಲಾರ: ಜಿಲ್ಲೆಯ ಅವನಿ ಶೃಂಗೇರಿ ಶಾಖಾ ಮಠದ ಸ್ವಾಮೀಜಿ ಅಭಿನವ ವಿದ್ಯಾಶಂಕರ ಭಾರತಿ ಶ್ರೀಗಳು ವಿಧಿವಶರಾಗಿದ್ದಾರೆ. ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿರುವ ಮಠದಲ್ಲಿ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಶ್ರೀಗಳ ಹಠಾತ್ ನಿಧನದಿಂದ ನೊಂದ ಭಕ್ತಾದಿಗಳು ಅವರ ಅಗಲಿಕೆಯಿಂದ ಕಂಬನಿ ಮಿಡಿದರು. ಸಚಿವ ನಾಗೇಶ್ ಸೇರಿದಂತೆ ನೂರಾರು ಭಕ್ತರು ಅಂತಿಮ ದರ್ಶನ ಪಡೆದರು.