ಈ 12 ದೇಶಗಳಲ್ಲಿ ಕೊರೊನಾ ಇಲ್ಲ! ಅವು ಯಾವುವು?

ಇಷ್ಟು ದಿನ ಮನುಷ್ಯರಿಗೆ ಮಾತ್ರ ಅಂಟಿಕೊಳ್ತಿದ್ದ ಕೊರೊನಾ ವೈರಸ್ ಈಗ ಕೂಳಿಗೂ ಬಂದಿದೆ. ಹೌದು, ಇತ್ತೀಚೆಗಷ್ಟೇ ಬ್ರೆಜಿಲ್​ನಿಂದ ಚೀನಾಗೆ ಬಂದ ಕೋಳಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹೀಗಾಗಿ, ಬ್ರೆಜಿಲ್​ನಿಂದ ಕೋಳಿಗಳನ್ನ ಆಮದು ಮಾಡಿಕೊಳ್ಳುತ್ತಿದ್ದ ಫಿಲಿಪೈನ್ಸ್ ಈಗ ನಿರ್ಬಂಧ ವಿಧಿಸಿದೆ. ಇದರಿಂದ ಬ್ರೆಜಿಲ್​ನ ಕುಕ್ಕುಟೋದ್ಯಮಕ್ಕೆ ಹೊಡೆತ ಬಿದ್ದಿದೆ. ಕೊರೊನಾದಿಂದ ಸ್ಮೋಕಿಂಗ್ ಬ್ಯಾನ್! ಸ್ಪೇನ್ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಇದೀಗ ಸೋಂಕಿತರ ಸಂಖ್ಯೆ 3,37,334ಕ್ಕೆ ಏರಿದೆ. ಹೀಗಾಗಿ, ಎಚ್ಚೆತ್ತ ಅಲ್ಲಿನ ಸರ್ಕಾರ ದೇಶದಲ್ಲಿರುವ ನೈಟ್ ಕ್ಲಬ್​ಗಳನ್ನ […]

ಈ 12 ದೇಶಗಳಲ್ಲಿ ಕೊರೊನಾ ಇಲ್ಲ! ಅವು ಯಾವುವು?
ಸಾಂದರ್ಭಿಕ ಚಿತ್ರ
KUSHAL V

|

Aug 15, 2020 | 4:26 PM

ಇಷ್ಟು ದಿನ ಮನುಷ್ಯರಿಗೆ ಮಾತ್ರ ಅಂಟಿಕೊಳ್ತಿದ್ದ ಕೊರೊನಾ ವೈರಸ್ ಈಗ ಕೂಳಿಗೂ ಬಂದಿದೆ. ಹೌದು, ಇತ್ತೀಚೆಗಷ್ಟೇ ಬ್ರೆಜಿಲ್​ನಿಂದ ಚೀನಾಗೆ ಬಂದ ಕೋಳಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹೀಗಾಗಿ, ಬ್ರೆಜಿಲ್​ನಿಂದ ಕೋಳಿಗಳನ್ನ ಆಮದು ಮಾಡಿಕೊಳ್ಳುತ್ತಿದ್ದ ಫಿಲಿಪೈನ್ಸ್ ಈಗ ನಿರ್ಬಂಧ ವಿಧಿಸಿದೆ. ಇದರಿಂದ ಬ್ರೆಜಿಲ್​ನ ಕುಕ್ಕುಟೋದ್ಯಮಕ್ಕೆ ಹೊಡೆತ ಬಿದ್ದಿದೆ.

ಕೊರೊನಾದಿಂದ ಸ್ಮೋಕಿಂಗ್ ಬ್ಯಾನ್! ಸ್ಪೇನ್ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಇದೀಗ ಸೋಂಕಿತರ ಸಂಖ್ಯೆ 3,37,334ಕ್ಕೆ ಏರಿದೆ. ಹೀಗಾಗಿ, ಎಚ್ಚೆತ್ತ ಅಲ್ಲಿನ ಸರ್ಕಾರ ದೇಶದಲ್ಲಿರುವ ನೈಟ್ ಕ್ಲಬ್​ಗಳನ್ನ ಬಂದ್ ಮಾಡುವಂತೆ ಸೂಚಿಸಿದೆ. ಇದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ ಸ್ಪೇನ್ ಆರೋಗ್ಯ ಸಚಿವ ಸಲ್ವಾಡಾರ್​ ಇಲ್ಲಾ ಹೇಳಿದ್ದಾರೆ.

ಈ 12 ದೇಶಗಳಲ್ಲಿ ಕೊರೊನಾ ಇಲ್ಲ ಜಗತ್ತಿನಲ್ಲಿ 188 ದೇಶಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಆತಂಕ ತಂದೊಡ್ಡಿದೆ. ಆದ್ರೆ, ಇಡೀ ಭೂ ಮಂಡಲದಲ್ಲಿ ಕೇವಲ 12 ದೇಶಗಳಲ್ಲಿ ಮಾತ್ರ ವೈರಸ್ ಪತ್ತೆಯಾಗಿಲ್ಲ. ಹೌದು, ಕಿರಿಬಾಟಿ, ಮಾರ್ಷಲ್ ಐಲ್ಯಾಂಡ್, ಮೈಕ್ರೋನೇಸಿಯಾ, ನೌರಾ, ಉತ್ತರ ಕೊರಿಯಾ, ಪಾಲೌ, ಸಮೌ, ಸಾಲೋಮನ್ ದ್ವೀಪ, ಟರ್ಕ್​ಮೇನಿಸ್ತಾನ್ ಮತ್ತು ಟುವಾಲು ದೇಶಗಳಲ್ಲಿ ಒಂದೇ ಒಂದು ಸೋಂಕಿನ ಪ್ರಕರಣ ಕಂಡುಬಂದಿಲ್ಲ.

ನ್ಯೂಜಿಲ್ಯಾಂಡ್​ನಲ್ಲಿ ಮತ್ತೆ ಲಾಕ್​ಡೌನ್ ವಿಸ್ತರಣೆ ನ್ಯೂಜಿಲ್ಯಾಂಡ್​ನಲ್ಲಿ ಕೊರೊನಾ ವೈರಸ್ ಪದೇ ಪದೆ ಅಟ್ಯಾಕ್ ಮಾಡುತ್ತಲೇ ಇದೆ. 102 ದಿನಗಳ ಬಳಿಕ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ, ದೇಶದ ಆಕ್​ಲ್ಯಾಂಡ್​ನಲ್ಲಿ ಲಾಕ್​ಡೌನ್ ಅವಧಿಯನ್ನ ಮತ್ತೆ 12 ದಿನಗಳ ಕಾಲ ವಿಸ್ತರಿಸಲಾಗಿದೆ. ಆಕ್ಲೆಂಡ್​ನಲ್ಲೇ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಪರ್ಕದಲ್ಲಿದ್ದವರನ್ನ ಕ್ವಾರಂಟೈನ್​ ಮಾಡಲಾಗಿದೆ.

ರಷ್ಯಾ ವ್ಯಾಕ್ಸಿನ್​ಗೆ ಟ್ರಂಪ್​ ಮೆಚ್ಚುಗೆ ಕೊರೊನಾ ವೈರಸ್ ವಿರುದ್ಧ ರಷ್ಯಾ ವ್ಯಾಕ್ಸಿನ್ ಸಂಶೋಧಿಸಿದೆ. ಈ ವ್ಯಾಕ್ಸಿನ್​ಗೆ ಹಲವು ದೇಶಗಳು ಚಕಾರ ಎತ್ತಿವೆ. ಆದ್ರೆ, ಅಮೆರಿಕ ಅಧ್ಯಕ್ಷ ಟ್ರಂಪ್ ಮಾತ್ರ, ರಷ್ಯಾದ ವ್ಯಾಕ್ಸಿನ್ ಫಲಪ್ರದವಾಗಲಿದೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಟ್ರಂಪ್, ಈ ವ್ಯಾಕ್ಸಿನ್​ನನ್ನ ಅತಿ ಹೆಚ್ಚು ಉತ್ಪಾದಿಸೋದಾಗಿ ನಂಬಿದ್ದೇನೆಂದು ಹೇಳಿದ್ರು.

ಮೆಕ್ಸಿಕೋದಲ್ಲಿ 55 ಸಾವಿರ ಸೋಂಕಿತರು ಸಾವು ಮೆಕ್ಸಿಕೋದಲ್ಲಿ ಕೊರೊನಾ ವೈರಸ್​ನ ಅಬ್ಬರಕ್ಕೆ ಕೊನೆಯೇ ಇಲ್ಲವಾಗಿದ್ದು, ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ದೇಶದಲ್ಲಿ 5,11,369 ಜನರಿಗೆ ಸೋಂಕು ವಕ್ಕರಿಸಿಕೊಂಡಿದ್ರೆ, 55,908 ಜನರು ಜೀವ ಕಳೆದುಕೊಂಡಿದ್ದಾರೆ. 24 ಗಂಟೆಗಳ ಅವಧಿಯಲ್ಲಿ 5,618 ಜನರಿಗೆ ಸೋಂಕು ಬಂದಿದ್ರೆ, 615 ಜನರು ಬಲಿಯಾಗಿದ್ದಾರೆ. ಆದ್ರೆ, ಸರ್ಕಾರದ ಪ್ರಕಾರ ಅಧಿಕೃತ ಸಂಖ್ಯೆಗಿಂತಲೂ ಸೋಂಕಿತರ ಸಂಖ್ಯೆಗಿಂತಲೂ ಹೆಚ್ಚಾಗಿದೆಯಂತೆ.

ಕಾಂಟ್ಯಾಕ್ಟ್​ ಲೆಸ್​ ಹೋಟೆಲ್ ಕೊರೊನಾ ಸೋಂಕಿನಿಂದಾಗಿ ವಿಶ್ವದೆಲ್ಲೆಡೆ ಸಂಪರ್ಕ ರಹಿತವಾಗಿ ವ್ಯವಹಾರಗಳು ನಡೆಯುತ್ತಿವೆ. ದಕ್ಷಿಣ ಅಮೆರಿಕಾದ ಕೊಲಂಬಿಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4,45,111 ಜನರಿಗೆ ವೈರಸ್ ಹೊಕ್ಕಿದೆ. ಹೀಗಾಗಿ, ಎಚ್ಚೆತ್ತ ಅಲ್ಲಿನ ಸರ್ಕಾರ ಚೀನಾ ರೆಸ್ಟೋರೆಂಟ್​ಗಳಲ್ಲಿ ಸೋಂಕಿನಿಂದ ರಕ್ಷಿಸಲು ಗ್ರಾಹಕರಿಗೆ ಕಾಂಟ್ಯಾಕ್ಟ್ ಲೆಸ್​ ಸರ್ವೀಸ್ ನೀಡ್ತಿದೆ. ರೆಸ್ಟೋರೆಂಟ್​ಗ ಈ ಐಡಿಯಾಗೆ ಜನರೂ ಫಿದಾ ಆಗಿದ್ದಾರೆ.

ಸ್ಫೋಟದ ಬಳಿಕ ಮೂಕರೋಧನೆ ಲೆಬನಾನ್​ ದೇಶದಲ್ಲಿ ನಡೆದ ಸ್ಫೋಟದಿಂದಾಗಿ ಹತ್ತಾರು ಜನರು ಪ್ರಾಣ ಕಳೆದುಕೊಂಡ್ರೆ, ನೂರಾರು ಜನರು ಗಾಯಗೊಂಡಿದ್ದಾರೆ. ಕೇವಲ ಸಾರ್ವಜನಿಕರು ಮಾತ್ರವಲ್ಲ, ಮೂಕ ಪ್ರಾಣಿಗಳೂ ಕೂಡ ಸ್ಫೋಟದಿಂದಾಗಿ ಹೈರಾಣಾಗಿವೆ. ಈ ಪ್ರಾಣಿಗಳನ್ನ ಕೆಲ ಪ್ರಾಣಿಪ್ರಿಯರು ತಾವೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ, ನಾಯಿ, ಬೆಕ್ಕುಗಳನ್ನ ರಕ್ಷಣೆ ಮಾಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada