ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ವರ್ತಕರು ಭಾರೀ ಮಹತ್ವದ ದೂರಗಾಮಿ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಇದು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಯಾಗುತ್ತದೆ ಅನ್ನೋದರ ಮೇಲೆ ಕೊರೊನಾ ಮಹಾಮಾರಿ ಭವಿಷ್ಯ ನಿಂತಿದೆ!
ಕೊರೊನಾ ನಿಯಂತ್ರಣದಲ್ಲಿ ಇತರರಗಿಂತ ನಾಲ್ಕು ಹೆಜ್ಜೆ ಮುಂದೆ ಹೋಗಿರುವ ಕೋಲಾರದ ವರ್ತಕರು ಅಕ್ಟೋಬರ್ 15ರವರೆಗೆ ಸ್ವಯಂ ಲಾಕ್‌ಡೌನ್‌ಗೆ ನಿರ್ಧಾರ ತೆಗೆದುಕೊಂಡಿದ್ದಾರೆ.
ಅರ್ಧ ದಿನ ಮಾತ್ರ ವ್ಯಾಪಾರ ವಹಿವಾಟು ಮಾಡಲು ನಿರ್ಧಾರ ತೆಗೆದುಕೊಂಡಿರುವ ಸ್ಥಳೀಯ ವ್ಯಾಪಾರಸ್ಥರು ಜನ ಬೇಕಾಬಿಟ್ಟಿ ಮಾರುಕಟ್ಟೆಯಲ್ಲಿ ಓಡಾಟ ಮಾಡುವುದನ್ನ ತಡೆಗಟ್ಟುವ ದೃಷ್ಟಿಕೋನದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ.
ದಿನೆ ದಿನೇ ಕೊರೊನಾ ಸೋಂಕು ಹರಡುವುದನ್ನ ತಡೆಯಲು ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಯಲಿದೆ. ಅಕ್ಟೋಬರ್ 15ರ ವರೆಗೆ ಜಿಲ್ಲೆಯಲ್ಲಿ ವರ್ತಕರ ಸಂಘದಿಂದಲೇ ಈ ಸ್ವಯಂ ಲಾಕ್ ಡೌನ್ ಜಾರಿಯಲ್ಲಿದೆ.
Published On - 11:45 am, Tue, 30 June 20