
ಚಾಮರಾಜನಗರ: ಮಹಿಳಾ ದೂರುದಾರರಿಂದ ಪೊಲೀಸರಿಗೆ ಕೊರೊನಾ ತಗಲಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ಇದರ ಪರಿಣಾಮ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ಸೀಲ್ಡೌನ್ ಆಗಿದೆ.
ಮಹಿಳೆಯು ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಠಾಣೆಗೆ ಬಂದು ದೂರು ದಾಖಲಿಸಿದ್ದರು. ಇನ್ನು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ವೇಳೆ ಮಹಿಳೆಗೆ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದಿದೆ. ಇದೀಗ, ಸಂತ್ರಸ್ತೆಯಿಂದ ಠಾಣೆಯ ಪೊಲೀಸರಿಗೆ ಸಹ ವೈರಸ್ ಅಂಟಿದೆ.
ಇನ್ನು ಸಿಬ್ಬಂದಿಗೆ ಕೊರೊನಾ ದೃಢವಾಡ ಹಿನ್ನೆಲೆಯಲ್ಲಿ ಸಿಪಿಐ ಕಚೇರಿ ಸೀಲ್ಡೌನ್ ಮಾಡಲಾಗಿದೆ.
Published On - 1:55 pm, Tue, 11 August 20