ರಷ್ಯಾ ಗುಡ್ ನ್ಯೂಸ್: ನಾಳೆ ಕೊರೊನಾ ಲಸಿಕೆ ರಿಜಿಸ್ಟರ್, ಸೆಪ್ಟೆಂಬರ್‌ನಿಂದ ಸಾರ್ವಜನಿಕರಿಗೆ!
ಮಾಸ್ಕೋ: ಕೊರೊನಾ ಮಹಾಮಾರಿಯ ಹಾವಳಿಯಿಂದ ಕಂಗೆಟ್ಟಿರುವ ವಿಶ್ವಕ್ಕೆ ಈಗ ಅರ್ಜೆಂಟಾಗಿ ವ್ಯಾಕ್ಸಿನ್ ಬೇಕಾಗಿದೆ. ಆರು ತಿಂಗಳಿನಿಂದ ಕಂಗೆಟ್ಟು ಕಾಯುತ್ತಿರುವ ಜನತೆಗೆ ಈಗ ರಷ್ಯಾ ಗುಡ್ ನ್ಯೂಸ್ ನೀಡಿದೆ. ಯಾಕಂದ್ರೆ ವಿಶ್ವದ ಮೊಟ್ಟ ಮೊದಲ ಕೊರೊನಾ ವ್ಯಾಕ್ಸಿನ್ ಅನ್ನು ರಷ್ಯಾ ನಾಳೆ ಅಂದ್ರೆ ಆಗಸ್ಟ್ 12ರಂದು ಅಧಿಕೃತವಾಗಿ ರಿಜಿಸ್ಟ್ರೇಶನ್ ಮಾಡಲಿದೆ. ರಷ್ಯಾ ಗುಡ್ ನ್ಯೂಸ್: ವಿಶ್ವದ ಮೊದಲ ಕೊರೊನಾ ವ್ಯಾಕ್ಸಿನ್ ನಾಳೆಯಿಂದ ಜನರಿಗೆ ಹೌದು ರಷ್ಯಾ ಈಗ ಕೊರೊನಾ ವಿರುದ್ಧದ ಹೋರಾಟದಲ್ಲಿ ಮೊದಲ ಮೇಲುಗೈ ಸಾಧಿಸಿದೆ. ಅಂದ್ರೆ ಕೊರೊನಾ […]
ಮಾಸ್ಕೋ: ಕೊರೊನಾ ಮಹಾಮಾರಿಯ ಹಾವಳಿಯಿಂದ ಕಂಗೆಟ್ಟಿರುವ ವಿಶ್ವಕ್ಕೆ ಈಗ ಅರ್ಜೆಂಟಾಗಿ ವ್ಯಾಕ್ಸಿನ್ ಬೇಕಾಗಿದೆ. ಆರು ತಿಂಗಳಿನಿಂದ ಕಂಗೆಟ್ಟು ಕಾಯುತ್ತಿರುವ ಜನತೆಗೆ ಈಗ ರಷ್ಯಾ ಗುಡ್ ನ್ಯೂಸ್ ನೀಡಿದೆ. ಯಾಕಂದ್ರೆ ವಿಶ್ವದ ಮೊಟ್ಟ ಮೊದಲ ಕೊರೊನಾ ವ್ಯಾಕ್ಸಿನ್ ಅನ್ನು ರಷ್ಯಾ ನಾಳೆ ಅಂದ್ರೆ ಆಗಸ್ಟ್ 12ರಂದು ಅಧಿಕೃತವಾಗಿ ರಿಜಿಸ್ಟ್ರೇಶನ್ ಮಾಡಲಿದೆ.
ರಷ್ಯಾ ಗುಡ್ ನ್ಯೂಸ್: ವಿಶ್ವದ ಮೊದಲ ಕೊರೊನಾ ವ್ಯಾಕ್ಸಿನ್ ನಾಳೆಯಿಂದ ಜನರಿಗೆ ಹೌದು ರಷ್ಯಾ ಈಗ ಕೊರೊನಾ ವಿರುದ್ಧದ ಹೋರಾಟದಲ್ಲಿ ಮೊದಲ ಮೇಲುಗೈ ಸಾಧಿಸಿದೆ. ಅಂದ್ರೆ ಕೊರೊನಾ ವೈರಸ್‌ಗೆ ಮದ್ದು ಕಂಡುಹಿಡಿದು ಜನರಿಗೆ ತಲುಪಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ರಷ್ಯಾದ ರಕ್ಷಣಾ ಸಚಿವಾಲಯದ ನೇತೃತ್ವದಲ್ಲಿ ಗಮೇಲಿಯಾ ಸೈಂಟಿಫಿಕ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಾಲಜಿ ಌಂಡ್ ಮೈಕ್ರೋಬಯಾಲಜಿ ಅಭಿವೃದ್ಧಿ ಪಡಿಸಿರುವ ಗ್ಯಾಮ್ ಕೋವಿಡ್ ವ್ಯಾಕ್ ಲಿಯೋ ವ್ಯಾಕ್ಸಿನ್ ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ರಷ್ಯಾ ಸಧ್ಯ ಎರಡು ಕೋವಿಡ್ 19 ವ್ಯಾಕ್ಸಿನ್‌ಗಳನ್ನು ಅಭಿವೃದ್ಧಿ ಪಡಿಸಿದ್ದು, ಗಮೇಲಿಯಾ ವ್ಯಾಕ್ಸಿನ್ ನಾಳೆ ಅಧಿಕೃತವಾಗಿ ರಿಜಿಸ್ಟರ್ ಆದ್ರೆ ಮತ್ತೊಂದು ವೆಕ್ಟರ್ ಸ್ಟೇಟ್ ರಿಸರ್ಚ್ ಸೆಂಟರ್ ಆಫ್ ವೈರಾಲಜಿ ಌಂಡ್ ಬಯೊಟೆಕ್ನಾಲಜಿ ಅಭಿವೃದ್ಧಿ ಪಡಿಸಿರುವ ಲಸಿಕೆ ಕೆಲವೇ ದಿನಗಳಲ್ಲಿ ರಿಜಿಸ್ಟರ್ ಆಗಲಿದೆ. ನಾಳೆ ರಿಜಿಸ್ಟರ್ ಆಗುವ ಗಮೇಲಿಯಾದ ವ್ಯಾಕ್ಸಿನ್ ಅನ್ನು ಸೆಪ್ಟೆಂಬರ್‌ನಲ್ಲಿ ರಷ್ಯಾದಲ್ಲಿ ಸಾರ್ವಜನಿಕವಾಗಿ ಲಸಿಕೆ ಹಾಕಲು ಆರಂಭಿಸಲಾಗುತ್ತದೆ.
ರಷ್ಯಾದಲ್ಲಿ ಉಚಿತವಾಗಿ ಸಾರ್ವಜನಿಕರಿಗೆ! ಈ ವ್ಯಾಕ್ಸಿನ್ ಅನ್ನು ರಷ್ಯಾ ತನ್ನ ದೇಶದಲ್ಲಿ ಉಚಿತವಾಗಿ ಸಾರ್ವಜನಿಕರಿಗೆ ನೀಡುತ್ತಿದ್ದು, ಮೊದಲ ಹಂತದಲ್ಲಿ ವೈದ್ಯರು ಮತ್ತು ಶಿಕ್ಷಕರಿಗೆ ನೀಡಲಾಗುತ್ತದೆ. ನಂತರ ಎಲ್ಲ ಜನರಿಗೂ ಲಸಿಕೆ ನೀಡಲು ಆರಂಭಿಸಲಾಗುತ್ತದೆ ಎಂದು ರಷ್ಯಾ ಹೇಳಿದೆ. ಈಗಿನ ಎರಡು ವ್ಯಾಕ್ಸಿನ್‌ಗಳಲ್ಲದೇ ರಷ್ಯಾ ಇನ್ನೂ 24 ಕೋವಿಡ್ 19 ವ್ಯಾಕ್ಸಿನ್‌ಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಇದರಲ್ಲಿ ಆರು ಲಸಿಕೆಗಳು ಶೀಘ್ರದಲ್ಲಿಯೇ ಮಾನವನ ಮೇಲೆ ಪ್ರಯೋಗಕ್ಕೆ ರೆಡಿಯಾಗಲಿವೆ.
ಇನ್ನು ಭಾರತ ಮತ್ತು ಬ್ರೆಜಿಲ್ ಸೇರಿದಂತೆ ವಿಶ್ವದ 20 ರಾಷ್ಟ್ರಗಳು ರಷ್ಯಾದ ಈ ವ್ಯಾಕ್ಸಿನ್ ಅನ್ನು ತಮ್ಮ ದೇಶಗಳಲ್ಲಿ ಉತ್ಪಾದಿಸಲು ಮುಂದೆ ಬಂದಿವೆ ಎಂದು ರಷ್ಯಾ ಹೇಳಿದೆ. ಆದ್ರೆ ಅಮೆರಿಕಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ರಷ್ಯಾದ ವ್ಯಾಕ್ಸಿನ್ ಬಗ್ಗೆ ಅಪಸ್ವರ ಎತ್ತಿದ್ದು, ಅದರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಆದ್ರೆ ಇದು ಏನೆ ಇರಲಿ ರಷ್ಯಾದ ಈ ವ್ಯಾಕ್ಸಿನ್ ಯಶಸ್ವಿಯಾಗಲಿ ಎನ್ನುವುದೇ ವಿಶ್ವದಾದ್ಯಂತ ಜನರ ಹಾರೈಕೆ. ಯಾಕಂದ್ರೆ ಜೀವ ಉಳಿಸುವ ಔಷಧಿ ಎಲ್ಲಿಂದ ಬಂದಿತು ಅನ್ನೋದಕ್ಕಿಂತ, ಜನರ ಜೀವ ಉಳಿಸುತ್ತಾ ಅನ್ನೋದೇ ಮುಖ್ಯ ಅಲ್ಲವಾ!