Lockdownನಿಂದ ಕೆಲ್ಸ ಕಳೆದುಕೊಂಡ ನೌಕರ, ಹಣಕ್ಕಾಗಿ ಮಾಡಿದ್ದೇನು ಗೊತ್ತಾ?

ಬೆಂಗಳೂರು: ಲಾಕ್​ಡೌನ್​ ತಂದೊಡ್ಡಿದ ಸಂಕಷ್ಟ ಅಂತಿಂಥದಲ್ಲ. ಇದರಿಂದ ಹಲವಾರು ಜನ ಕೆಲಸ ಕಳೆದುಕೊಂಡ ಪ್ರಸಂಗಗಳನ್ನ ನಾವು ಕೇಳಿದ್ದೇವೆ. ಆದರೆ, ನೌಕರಿ ಹೋದ ಬಳಿಕ ಕಳ್ಳತನಕ್ಕೆ ಇಳಿದ ಭೂಪನೊಬ್ಬನ ಕತೆ ನಗರದಲ್ಲಿ ಬೆಳಕಿಗೆ ಬಂದಿದೆ. ಹೌದು, ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡ ಈ ಮಹಾಶಯ ಬದುಕು ಸಾಗಿಸಲು ಸೈಬರ್ ಕ್ರೈಂ​ ಮೂಲಕ ರೋಲ್​ಕಾಲ್​ ದಂಧೆಗೆ ಇಳಿದುಬಿಟ್ಟ. ಅಂದ ಹಾಗೆ, ಇವನ ಹೆಸರು ಸಮೀರ್ ಕುಮಾರ್. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಸಮೀರ್​, ಮಹಿಳೆಯ ಭಾವಚಿತ್ರವನ್ನ ಬಳಸಿಕೊಂಡು ಜನರನ್ನ ವಂಚಿಸಲು ಮುಂದಾದ. […]

Lockdownನಿಂದ ಕೆಲ್ಸ ಕಳೆದುಕೊಂಡ ನೌಕರ, ಹಣಕ್ಕಾಗಿ ಮಾಡಿದ್ದೇನು ಗೊತ್ತಾ?
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Aug 11, 2020 | 1:41 PM

ಬೆಂಗಳೂರು: ಲಾಕ್​ಡೌನ್​ ತಂದೊಡ್ಡಿದ ಸಂಕಷ್ಟ ಅಂತಿಂಥದಲ್ಲ. ಇದರಿಂದ ಹಲವಾರು ಜನ ಕೆಲಸ ಕಳೆದುಕೊಂಡ ಪ್ರಸಂಗಗಳನ್ನ ನಾವು ಕೇಳಿದ್ದೇವೆ. ಆದರೆ, ನೌಕರಿ ಹೋದ ಬಳಿಕ ಕಳ್ಳತನಕ್ಕೆ ಇಳಿದ ಭೂಪನೊಬ್ಬನ ಕತೆ ನಗರದಲ್ಲಿ ಬೆಳಕಿಗೆ ಬಂದಿದೆ. ಹೌದು, ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡ ಈ ಮಹಾಶಯ ಬದುಕು ಸಾಗಿಸಲು ಸೈಬರ್ ಕ್ರೈಂ​ ಮೂಲಕ ರೋಲ್​ಕಾಲ್​ ದಂಧೆಗೆ ಇಳಿದುಬಿಟ್ಟ.

ಅಂದ ಹಾಗೆ, ಇವನ ಹೆಸರು ಸಮೀರ್ ಕುಮಾರ್. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಸಮೀರ್​, ಮಹಿಳೆಯ ಭಾವಚಿತ್ರವನ್ನ ಬಳಸಿಕೊಂಡು ಜನರನ್ನ ವಂಚಿಸಲು ಮುಂದಾದ. ತನ್ನ ಮಾಜಿ ಸಹೋದ್ಯೋಗಿಯಾಗಿದ್ದ ಮಹಿಳೆಯ ಡಿಪಿ ಪ್ರೊಫೈಲ್ ಹಾಕಿ WhatsApp ಗ್ರೂಪ್​ ಕ್ರಿಯೆಟ್ ಮಾಡಿದ್ದ.

ಆರೋಪಿ ನನ್ನ ತಾಯಿಯ ಚಿಕಿತ್ಸೆಗೆ ಹಣ ಬೇಕು ಅಂತಾ ಬ್ಯಾಂಕ್ ಖಾತೆ ನಂಬರ್​ ಹಾಕಿ ತನ್ನ ಇತರೆ ಸಹೋದ್ಯೋಗಿಗಳಿಗೆ ಮೆಸೇಜ್ ಮಾಡುತ್ತಿದ್ದನಂತೆ. ಮಹಿಳೆ ಕಷ್ಟದಲ್ಲಿದ್ದಾಳೆ ಅಂತಾ ನಂಬಿದ ಇತರೆ ಸಿಬ್ಬಂದಿ ಆ ಬ್ಯಾಂಕ್​ ಖಾತೆಗೆ ಹಣ ಟ್ರಾನ್ಸ್​ಫರ್ ಮಾಡಿದ್ದರಂತೆ!

ಇನ್ನು ಈ ವಿಷಯ ತಿಳಿದ ಸಂತ್ರಸ್ಥೆ ಕೂಡಲೇ ಪೂರ್ವ ವಿಭಾಗದ CEN ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಈ ಹಿಂದೆ ಕಂಪನಿಯ ಸಂದರ್ಶನಕ್ಕೆಂದು ಬಂದಿದ್ದ ಸಂತ್ರಸ್ಥೆ ಸೇರಿ ಎಲ್ಲಾ ಉದ್ಯೋಗಿಗಳ ಮೊಬೈಲ್​ ನಂಬರ್​ಗಳನ್ನ ಸಮೀರ್ ಕಲೆಕ್ಟ್ ಮಾಡಿದ್ದ ಎಂದು ತಿಳಿದುಬಂದಿದೆ.

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ