ಕೋಣನಕುಂಟೆಯಲ್ಲಿ ಕೊವಿಡ್ ಆಸ್ಪತ್ರೆ ಬೇಡವೆಂದು ಸ್ಥಳೀಯರ ಪಟ್ಟು, ಯಾಕೆ?

| Updated By: ಸಾಧು ಶ್ರೀನಾಥ್​

Updated on: Jul 07, 2020 | 12:49 PM

ಬೆಂಗಳೂರು: ಖಾಸಗಿ ಆಸ್ಪತ್ರೆಯನ್ನ ಕೊವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಹೊರಟ ಅಧಿಕಾರಿಗಳ ವಿರುದ್ಧ ಸ್ಥಳೀಯರು ಧರಣಿ ನಡೆಸಿರುವ ಘಟನೆ ನಗರದ ಕೋಣನಕುಂಟೆ ಬಳಿ ನಡೆದಿದೆ. ಬಡಾವಣೆಯಲ್ಲಿರುವ ಸುಪೂರ್ವ ಆಸ್ಪತ್ರೆಯನ್ನ ಕೊವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನ ಸ್ಥಳೀಯರು ಆಸ್ಪತ್ರೆಯ ಮುಂದೆ ಜಾಮವಣೆಯಾದರು. ಆಸ್ಪತ್ರೆ ಅಕ್ಕಪಕ್ಕದಲ್ಲಿ ಮನೆಗಳು ಇವೆ. ಜೊತೆಗೆ, ಇದೇ ರಸ್ತೆಯಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ಇದು ಜನಸಂದಣಿಯ ಪ್ರದೇಶವಾಗಿರೋದ್ರಿಂದ ಇಲ್ಲಿ ಕೊವಿಡ್​ ಅಸ್ಪತ್ರೆ ಮಾಡಿದರೆ ಸೋಂಕು ಹರಡುವ […]

ಕೋಣನಕುಂಟೆಯಲ್ಲಿ ಕೊವಿಡ್ ಆಸ್ಪತ್ರೆ ಬೇಡವೆಂದು ಸ್ಥಳೀಯರ ಪಟ್ಟು, ಯಾಕೆ?
Follow us on

ಬೆಂಗಳೂರು: ಖಾಸಗಿ ಆಸ್ಪತ್ರೆಯನ್ನ ಕೊವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಹೊರಟ ಅಧಿಕಾರಿಗಳ ವಿರುದ್ಧ ಸ್ಥಳೀಯರು ಧರಣಿ ನಡೆಸಿರುವ ಘಟನೆ ನಗರದ ಕೋಣನಕುಂಟೆ ಬಳಿ ನಡೆದಿದೆ.

ಬಡಾವಣೆಯಲ್ಲಿರುವ ಸುಪೂರ್ವ ಆಸ್ಪತ್ರೆಯನ್ನ ಕೊವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನ ಸ್ಥಳೀಯರು ಆಸ್ಪತ್ರೆಯ ಮುಂದೆ ಜಾಮವಣೆಯಾದರು.

ಆಸ್ಪತ್ರೆ ಅಕ್ಕಪಕ್ಕದಲ್ಲಿ ಮನೆಗಳು ಇವೆ. ಜೊತೆಗೆ, ಇದೇ ರಸ್ತೆಯಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ಇದು ಜನಸಂದಣಿಯ ಪ್ರದೇಶವಾಗಿರೋದ್ರಿಂದ ಇಲ್ಲಿ ಕೊವಿಡ್​ ಅಸ್ಪತ್ರೆ ಮಾಡಿದರೆ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಧರಣಿ ನಡೆಸಿದರು.