ಜಯನಗರ ಆಸ್ಪತ್ರೆ ಆವರಣದಲ್ಲಿ ಇದೆಂತ ಫಜೀತಿ! ಎಲ್ಲೆಲ್ಲೂ ಮಾಸ್ಕ್, ಗ್ಲೌಸ್ಗಳೇ..
ಬೆಂಗಳೂರು: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ. ಕಿಲ್ಲರ್ ವೈರಸ್ ಹೇಗೆ ಬೇಕಾದ್ರು ಹರಡುತ್ತೆ ಎಂಬ ಸಂಗತಿ ತಿಳಿದಿದ್ದರು ವೈದ್ಯರೇ ನಿರ್ಲಕ್ಷ್ಯವಹಿಸಿದ್ದಾರೆ. ಬೆಂಗಳೂರಿನ ಜಯನಗರದ ಜನರಲ್ ಆಸ್ಪತ್ರೆಯ ಆವರಣದಲ್ಲಿ ಬಳಸಿದ ಮಾಸ್ಕ್, ಗ್ಲೌಸ್ಗಳು ತುಂಬಿ ತುಳುಕುತ್ತಿವೆ. ಆಸ್ಪತ್ರೆ ಗೇಟ್ನಿಂದ ಮುಖ್ಯ ದ್ವಾರದ ತನಕ ಗ್ಲೌಸ್ಗಳು ಸಾಲಾಗಿ ಬಿದ್ದಿವೆ. ಸಾರ್ವಜನಿಕರು, ರೋಗಿಗಳು ಓಡಾಡೋ ಜಾಗದಲ್ಲಿ, ಜನರು ಕುಳಿತುಕೊಳ್ಳುವ ಬೆಂಚ್ಗಳ ಬಳಿ ಮಾಸ್ಕ್, ಗ್ಲೌಸ್ಗಳು ಹರಡಿವೆ. ಅಲ್ಲದೆ ಆಸ್ಪತ್ರೆ ಆವರಣದಲ್ಲಿರೋ ಗಿಡಗಳಲ್ಲೂ ಗ್ಲೌಸ್ಗಳು ನೇತಾಡುತ್ತಿವೆ. ಇನ್ನೂ ಆಸ್ಪತ್ರೆಯ ಹೊರಗಿನ ಎರಡೂ […]
ಬೆಂಗಳೂರು: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ. ಕಿಲ್ಲರ್ ವೈರಸ್ ಹೇಗೆ ಬೇಕಾದ್ರು ಹರಡುತ್ತೆ ಎಂಬ ಸಂಗತಿ ತಿಳಿದಿದ್ದರು ವೈದ್ಯರೇ ನಿರ್ಲಕ್ಷ್ಯವಹಿಸಿದ್ದಾರೆ. ಬೆಂಗಳೂರಿನ ಜಯನಗರದ ಜನರಲ್ ಆಸ್ಪತ್ರೆಯ ಆವರಣದಲ್ಲಿ ಬಳಸಿದ ಮಾಸ್ಕ್, ಗ್ಲೌಸ್ಗಳು ತುಂಬಿ ತುಳುಕುತ್ತಿವೆ.
ಆಸ್ಪತ್ರೆ ಗೇಟ್ನಿಂದ ಮುಖ್ಯ ದ್ವಾರದ ತನಕ ಗ್ಲೌಸ್ಗಳು ಸಾಲಾಗಿ ಬಿದ್ದಿವೆ. ಸಾರ್ವಜನಿಕರು, ರೋಗಿಗಳು ಓಡಾಡೋ ಜಾಗದಲ್ಲಿ, ಜನರು ಕುಳಿತುಕೊಳ್ಳುವ ಬೆಂಚ್ಗಳ ಬಳಿ ಮಾಸ್ಕ್, ಗ್ಲೌಸ್ಗಳು ಹರಡಿವೆ. ಅಲ್ಲದೆ ಆಸ್ಪತ್ರೆ ಆವರಣದಲ್ಲಿರೋ ಗಿಡಗಳಲ್ಲೂ ಗ್ಲೌಸ್ಗಳು ನೇತಾಡುತ್ತಿವೆ.
ಇನ್ನೂ ಆಸ್ಪತ್ರೆಯ ಹೊರಗಿನ ಎರಡೂ ಬದಿಯ ಫುಟ್ ಪಾತ್ ಅಂತೂ ಕಸದ ರಾಶಿಯಿಂದ ತುಂಬಿ ಹೋಗಿದೆ. ಈ ರೀತಿಯ ಚಿತ್ರಣ ಜಯನಗರದ ಜನರಲ್ ಆಸ್ಪತ್ರೆಯ ಎದುರು ಕಂಡು ಬಂದಿದೆ. ಆಸ್ಪತ್ರೆಯಲ್ಲೇ ಈ ರೀತಿಯ ವ್ಯವಸ್ಥೆ ಇದ್ದರೆ ಮುಂದೆ ಏನು ಗತಿ? ಎಂಬ ಆತಂಕದಲ್ಲಿ ಅಲ್ಲಿನ ಜನರಿದ್ದಾರೆ. ಈ ರೀತಿ ಬಳಸಿದ ಮಾಸ್ಕ್, ಗ್ಲೌಸ್ಗಳಿಂದ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ.