SDA Exam Postpone: ಮಾರ್ಚ್​ 20,21ರಂದು ನಡೆಯಬೇಕಿದ್ದ ಎಸ್​ಡಿಎ ಪರೀಕ್ಷೆ ಮುಂದೂಡಿಕೆ

|

Updated on: Mar 10, 2021 | 7:08 PM

ಕಳೆದ ಜನವರಿ 24 ರಂದು ನಡೆಯಬೇಕಿದ್ದ ಎಫ್​ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮುನ್ನಾದಿನ ಸೋರಿಕೆ ಆಗಿ ಫೆ.28ಕ್ಕೆ ಮುಂದೂಡಲ್ಪಟ್ಟಿತ್ತು. ಇದಾದ ಬೆನ್ನಲ್ಲೇ ಎಸ್​ಡಿಎ ಪರೀಕ್ಷೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಆಯೋಗಕ್ಕೆ ಇನ್ನೂ ಸಮಯ ಬೇಕು ಎಂಬ ಕಾರಣಕ್ಕೆ ಎಸ್​ಡಿಎ ಪರೀಕ್ಷೆಯನ್ನೂ ಮುಂದೂಡಿ ಆದೇಶ ಹೊರಡಿಸಿದೆ.

SDA Exam Postpone: ಮಾರ್ಚ್​ 20,21ರಂದು ನಡೆಯಬೇಕಿದ್ದ ಎಸ್​ಡಿಎ ಪರೀಕ್ಷೆ ಮುಂದೂಡಿಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಮಾರ್ಚ್​ 20, 21ರಂದು ನಡೆಯಬೇಕಿದ್ದ ಎಸ್​ಡಿಎ (ದ್ವಿತೀಯ ದರ್ಜೆ ಸಹಾಯಕರು / ಕಿರಿಯ ಸಹಾಯಕರು) ಪರೀಕ್ಷೆಯನ್ನು ಕಾಲಾವಕಾಶದ ಕೊರತೆಯಿಂದ ಮುಂದೂಡಿರುವುದಾಗಿ ಕೆಪಿಎಸ್​ಸಿ ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ. ಕಳೆದ ಜನವರಿ 24 ರಂದು ನಡೆಯಬೇಕಿದ್ದ ಎಫ್​ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮುನ್ನಾದಿನ ಸೋರಿಕೆ ಆಗಿ ಫೆ.28ಕ್ಕೆ ಮುಂದೂಡಲ್ಪಟ್ಟಿತ್ತು. ಇದಾದ ಬೆನ್ನಲ್ಲೇ ಎಸ್​ಡಿಎ ಪರೀಕ್ಷೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಆಯೋಗಕ್ಕೆ ಇನ್ನೂ ಸಮಯ ಬೇಕು ಎಂಬ ಕಾರಣಕ್ಕೆ ಎಸ್​ಡಿಎ ಪರೀಕ್ಷೆಯನ್ನೂ ಮುಂದೂಡಿ ಆದೇಶ ಹೊರಡಿಸಿದೆ.

ಎಸ್​ಡಿಎ ಪರೀಕ್ಷೆ ಮುಂದೂಡಿರುವ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ. ಮುಂದೂಡಲ್ಪಟ್ಟ ಪರೀಕ್ಷೆಗಳ ಹೊಸ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದೂ ತಿಳಿಸಿದ್ದಾರೆ. ಕೊರೊನಾ ಕಾರಣ ಈಗಾಗಲೇ ಒಮ್ಮೆ ಬದಲಾಗಿದ್ದ ಪರೀಕ್ಷಾ ವೇಳಾಪಟ್ಟಿ ಮತ್ತೊಮ್ಮೆ ಬದಲಾಗಿದ್ದು, ಅಂತಿಮವಾಗಿ ಪರೀಕ್ಷೆ ಯಾವಾಗ ನಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.

Published On - 7:07 pm, Wed, 10 March 21