Bigg Boss Kannada: ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ ಪ್ರೆಗ್ನೆನ್ಸಿ ನಾಟಕ
ದಿವ್ಯಾ ಪ್ರೆಗ್ನೆನ್ಸಿ ನಾಟಕವಾಡಿದ್ದಾರೆ! ಹಾಗಂತ ಈ ನಾಟಕದ ಹಿಂದೆ ಯಾವುದೇ ಕೆಟ್ಟ ಉದ್ದೇಶವಿರಲಿಲ್ಲ. ಈ ನಾಟಕದ ಹಿಂದೆ ಇದ್ದಿದ್ದು ಸಂಪೂರ್ಣವಾಗಿ ಒಳ್ಳೆಯ ಉದ್ದೇಶ.
ಬಿಗ್ ಬಾಸ್ ಮನೆ ಎಂದರೆ ಅಲ್ಲಿ ಡ್ರಾಮಾಗಳು ಇರಲೇಬೇಕು. ನಾಟಕಗಳು ಇಲ್ಲದಿದ್ದರೆ ಯಾರು ನೋಡುತ್ತಾರೆ? ಎನ್ನುವ ಚರ್ಚೆ ಕೂಡ ಇತ್ತೀಚೆಗೆ ಕನ್ನಡ ಬಿಗ್ ಬಾಸ್ ಮನೆಯಲ್ಲಿ ನಡೆದಿತ್ತು. ಅಂತೆಯೇ, ಈಗ ದೊಡ್ಮನೆಯಲ್ಲಿ ಒಂದಾದಮೇಲೆ ಒಂದರಂತೆ ನಾಟಕಗಳು ನಡೆಯುತ್ತಿವೆ. ಈಗ ಇದಕ್ಕೆ ಹೊಸ ಸೇರ್ಪಡೆ ದಿವ್ಯಾ ಉರುಡು ಪ್ರೆಗ್ನೆನ್ಸಿ ನಾಟಕ! ಅಷ್ಟಕ್ಕೂ ದಿವ್ಯಾ ಹೀಗೆ ಮಾಡಿದ್ದೇಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಬಿಗ್ ಬಾಸ್ ಎಪಿಸೋಡ್ನಲ್ಲಿ ತೋರಿಸದ ವಿಡಿಯೋವನ್ನು ಕಲರ್ಸ್ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ದಿವ್ಯಾ ಪ್ರೆಗ್ನೆನ್ಸಿ ನಾಟಕವಾಡಿದ್ದಾರೆ! ಹಾಗಂತ ಈ ನಾಟಕದ ಹಿಂದೆ ಯಾವುದೇ ಕೆಟ್ಟ ಉದ್ದೇಶವಿರಲಿಲ್ಲ. ಈ ನಾಟಕದ ಹಿಂದೆ ಇದ್ದಿದ್ದು ಸಂಪೂರ್ಣವಾಗಿ ಒಳ್ಳೆಯ ಉದ್ದೇಶ.
ಸೋಮವಾರ (ಮಾ.8) ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಗಿತ್ತು. ಇದರ ಅಂಗವಾಗಿ ವಿಶೇಷ ನಾಟಕ ಮಾಡಲು ಬಿಗ್ ಬಾಸ್ ಆದೇಶಹೊರಡಿಸಿದ್ದರು. ಇದಕ್ಕಾಗಿ ಸಾಕಷ್ಟು ಐಡಿಯಾಗಳನ್ನು ಸ್ಪರ್ಧಿಗಳು ನೀಡಿದ್ದರು. ಲ್ಯಾಗ್ ಮಂಜು, ಹೆಣ್ಣು ಮಗು ಜನಿಸಿದ ನಂತರ ಆಕೆ ಸಮಾಜದಲ್ಲಿ ಎದುರಿಸುವ ಕಷ್ಟ ಮತ್ತು ನಂತರ ಅದನ್ನು ಮೆಟ್ಟಿ ನಿಂತು ಆಕೆ ಹೇಗೆ ಅದನ್ನು ಎದುರಿಸಿ ಯಶಸ್ಸು ಕಾಣುತ್ತಾಳೆ ಎಂಬುದನ್ನು ತೋರಿಸಬಹುದು ಎಂದು ಹೇಳಿದ್ದರು. ಇದೇ ವಿಚಾರ ಇಟ್ಟುಕೊಂಡು ದಿವ್ಯಾ ಆ್ಯಂಡ್ ಟೀಂ ನಾಟಕವಾಡಿದೆ.
ನಾಟಕದಲ್ಲಿ ರಾಜೀವ್ ಹಾಗೂ ದಿವ್ಯಾ ಗಂಡ ಹೆಂಡತಿ ಆಗಿರುತ್ತಾರೆ. ದಿವ್ಯಾ ಗರ್ಭ ಧರಿಸುತ್ತಾಳೆ. ಹೆಣ್ಣುಮಗು ಎನ್ನುವ ಕಾರಣಕ್ಕೆ ಮಗುವನ್ನು ತೆಗೆಸಿಬಿಡೋಣ ಎನ್ನುತ್ತಾನೆ ಪತಿ. ಆದರೆ, ಆಕೆ ಇದಕ್ಕೆ ಒಪ್ಪದೆ ಆ ಮಹಿಳೆ ಗಂಡನಿಂದ ಬೇರೆ ಆಗುತ್ತಾಳೆ. ಆಕೆಗೆ ಹೆಣ್ಣುಮಗು ಕೂಡ ಜನಿಸುತ್ತದೆ. ಸಮಾಜದಲ್ಲಿ ಹೆಣ್ಣುಮಗು ಎಷ್ಟು ಕಷ್ಟ ಅನುಭವಿಸುತ್ತಾಳೆ ಮತ್ತು ಅದನ್ನೆಲ್ಲ ಮೆಟ್ಟಿ ಹೇಗೆ ನಿಲ್ಲುತ್ತಾಳೆ ಎಂಬುದೇ ಈ ನಾಟಕದ ಸಾರಾಂಶ. ಇದನ್ನು ನೋಡಿ ನಿಧಿ ಸುಬ್ಬಯ್ಯ ಕಣ್ಣಲ್ಲಿ ನೀರು ಹಾಕಿದ್ದಾರೆ.
View this post on Instagram
ಕಲರ್ಸ್ ಕನ್ನಡ ಹಂಚಿಕೊಂಡ ವಿಡಿಯೋ..
ಇದನ್ನೂ ಓದಿ: Bigg Boss Kannada: ದೊಡ್ಡವರು ಅಂತ ಸುಮ್ನೆ ಬಿಟ್ಟೀದೀನಿ ಮಗನೆ; ಪ್ರಶಾಂತ್ಗೆ ಬ್ರೋ ಗೌಡ ಆವಾಜ್!