AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್​ ಜಾರಕಿಹೊಳಿ ಡಿಪ್ರೆಶನ್​ನಲ್ಲಿ ಇದ್ದಾನೆ, ಪಕ್ಷ ಬಿಟ್ಟ ಮೇಲೆ ‌ನಾನು ಕಾಲ್ ಮಾಡಿಲ್ಲ: ಡಿ.ಕೆ.ಶಿವಕುಮಾರ್​

ನಮ್ಮ ಮನೆಯವರೇ, ಸುತ್ತಮುತ್ತಲಿನವರೇ ಇದನ್ನು ಮಾಡಿದ್ದಾರೆ ಎಂಬ ರಮೇಶ್ ಹೇಳಿಕೆಗೆ ಪ್ರತ್ಯುತ್ತರಿಸಿ, ಒಂದು ಕಾಲದಲ್ಲಿ ರಮೇಶ್​ಗೆ ಒಳ್ಳೇದಾಗಲಿ ಎಂದು ಬಯಸಿದವನು ನಾನು. ಏನೇನೋ‌ ಹುಚ್ಚು ಹುಚ್ಚಾಗಿ ಮಾತನಾಡಿದ‌ ಮೇಲೆ ಸುಮ್ಮನಾದೆ. ಪಕ್ಷ ಬಿಟ್ಟ ಮೇಲೆ ‌ನಾನು ರಮೇಶ್​ಗೆ ಕಾಲ್ ಮಾಡಿಲ್ಲ. ಅವನು ನಮ್ಮ ಜೊತೆಯೇ ಇದ್ದವನು ಎಂದು ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

ರಮೇಶ್​ ಜಾರಕಿಹೊಳಿ ಡಿಪ್ರೆಶನ್​ನಲ್ಲಿ ಇದ್ದಾನೆ, ಪಕ್ಷ ಬಿಟ್ಟ ಮೇಲೆ ‌ನಾನು ಕಾಲ್ ಮಾಡಿಲ್ಲ: ಡಿ.ಕೆ.ಶಿವಕುಮಾರ್​
ರಮೇಶ್​ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್
Skanda
| Updated By: ganapathi bhat|

Updated on: Mar 10, 2021 | 6:01 PM

Share

ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅವರು ಹೇಳಿದ ಆ ಮಹಾನ್ ನಾಯಕ ಯಾರು ಎಂದು ಗೊತ್ತಿಲ್ಲಯ್ಯ. ನನ್ನ ಮೇಲೆ‌ ಹೇಳಲಿ‌ ಬಿಡಿ, ಇದು ರಾಜಕೀಯ ಚೆಸ್ ಗೇಮ್. ಸಂತೋಷ, ಯಾರದ್ದು ಏನೇನು ಕಥೆನೋ ಗೊತ್ತಿಲ್ಲ. ಅವರೆಲ್ಲ ದೇವರ ಮಕ್ಕಳು ಎಂದು ತಮ್ಮದೇ ದಾಟಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ.

ನಮ್ಮ ಮನೆಯವರೇ, ಸುತ್ತಮುತ್ತಲಿನವರೇ ಇದನ್ನು ಮಾಡಿದ್ದಾರೆ ಎಂಬ ರಮೇಶ್ ಹೇಳಿಕೆಗೆ ಪ್ರತ್ಯುತ್ತರಿಸಿ, ಒಂದು ಕಾಲದಲ್ಲಿ ರಮೇಶ್​ಗೆ ಒಳ್ಳೇದಾಗಲಿ ಎಂದು ಬಯಸಿದವನು ನಾನು. ಏನೇನೋ‌ ಹುಚ್ಚು ಹುಚ್ಚಾಗಿ ಮಾತನಾಡಿದ‌ ಮೇಲೆ ಸುಮ್ಮನಾದೆ. ಪಕ್ಷ ಬಿಟ್ಟ ಮೇಲೆ ‌ನಾನು ರಮೇಶ್​ಗೆ ಕಾಲ್ ಮಾಡಿಲ್ಲ. ಅವನು ನಮ್ಮ ಜೊತೆಯೇ ಇದ್ದವನು. ಆ ಸಿಡಿ ಫೇಕ್ ಆದರೆ ತನಿಖೆ ಯಾಕೆ ಬೇಕು? ಅವನು ಏನೋ ಡಿಪ್ರೆಶನಲ್ಲಿ ಇದಾನೆ ಹಾಗಾಗಿ ನಾನೇನು ಹೇಳೋಲ್ಲ. I feel Sorry for him ಎಂದಿದ್ದಾರೆ.

ಸಿಡಿ ಮಾಡಿದ್ದು ಕಾಂಗ್ರೆಸ್​ನವರೇ ಎಂಬ ಎಸ್.ಟಿ ಸೋಮಶೇಖರ್ ಆರೋಪದ ಬಗ್ಗೆ ಮಾತನಾಡಿ, ನನ್ನ ಮಿತ್ರನಾದ ಸೋಮಶೇಖರ್​ನನ್ನು ಬಿಜೆಪಿಗಿಂತ ಜಾಸ್ತಿ ಹತ್ತಿರದಿಂದ ಬಲ್ಲೆ. ನಮ್ಮ ಪಕ್ಷದ ಅಧ್ಯಕ್ಷರಾಗಿದ್ದರು, ಅಷ್ಟು ದೊಡ್ಡ ಸ್ಥಾನ ಸಿಕ್ಕಿದೆ ಅವರಿಗೆ. 20 ವರ್ಷದಿಂದ‌ ನಾವು ಈ ಕೆಲಸ‌ ಮಾಡಿದ್ದೇವೆಂದು ಹೇಳಿದ್ದಾರಲ್ಲ, ಏನೇನು ಕೆಲಸ ಎಂದು ಇವರದ್ದೂ ಸೇರಿಸಿ ಹೇಳಲಿ. ಇವರೇನು‌ ಮಾಡಿದರು, ಯಾರು ಏನು ಮಾಡಿದ್ರು ಎನ್ನುವುದನ್ನು ಇವರೇ ಹೇಳಲಿ ನಮ್ಮದೇನು ತಕರಾರು ಇಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

ಸಿಎಂಗೆ ಸಿಡಿ ಗುಮ್ಮ ಎಂದು ಎಚ್​.ವಿಶ್ವನಾಥ್ ಹೇಳಿದ್ದಾರೆ. ಬ್ಲ್ಯಾಕ್​ಮೇಲ್​ ‌ಮಾಡಿದವರನ್ನ ಮಂತ್ರಿ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಲು ಸಾಲ ಎಂದು ಎಂ.ಟಿ.ಬಿ ಹೇಳಿದ್ದರು. ಆದ್ರೆ ಈ ಹಿಂದೆ ಅವರು ತನಿಖೆ ಮಾಡಲಿಲ್ಲ. ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಕರಪ್ಟ್ ಎಂದು ಸಿಡಿಯಲ್ಲಿ ಹೇಳಿದ್ದಾರೆ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್​ ಪಕ್ಷ ಬಿಟ್ಟು ಹೋದವರಿಗೆ ತಿರುಗು ಬಾಣ ಬಿಟ್ಟಿದ್ದಾರೆ.

ಇದನ್ನೂ ಓದಿ: ಗೃಹ ಇಲಾಖೆ ಕಡೆಯಿಂದ ರಮೇಶ್​ ಜಾರಕಿಹೊಳಿ ಸಿಡಿ ತನಿಖೆಗೆ ಆದೇಶ ಬರಲಿದೆ: ಸಿಎಂ ಯಡಿಯೂರಪ್ಪ

‘CD ಪ್ರಕರಣದಲ್ಲಿ 9 ಜನರು ಭಾಗಿಯಾಗಿದ್ದಾರೆ; ರಾಜಕೀಯ ಹೋದ್ರೂ ತೊಂದರೆಯಿಲ್ಲ.. ಇವರಿಗೆ ತಕ್ಕ ಶಾಸ್ತಿ ಮಾಡ್ತೇವೆ’

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ