‘ನಾನು ರಾಮ ಮತ್ತು ಹನುಮನ ಭಕ್ತ’; ರಾಮ ರಾಜ್ಯದಿಂದ ಸ್ಫೂರ್ತಿ ಪಡೆದ 10 ಅಂಶ ಪಟ್ಟಿ ಮಾಡಿದ ಅರವಿಂದ್ ಕೇಜ್ರಿವಾಲ್

ಅಯೋಧ್ಯಾ ರಾಮ ಕ್ಷೇತ್ರದ ಕಾಮಗಾರಿ ಪೂರ್ಣಗೊಂಡ ಬಳಿಕ, ದೆಹಲಿಯ ಹಿರಿಯ ನಾಗರಿಕರನ್ನು ದೇವಾಲಯ ದರ್ಶನಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ ಕೇಜ್ರಿವಾಲ್, ಈ ಯೋಜನೆಯನ್ನು, ದೆಹಲಿ ಸರ್ಕಾರದ ‘ಮುಖ್ಯಮಂತ್ರಿ ತೀರ್ಥ ಯಾತ್ರೆ ಯೋಜನೆ’ಯ ಅಡಿಯಲ್ಲಿ ತರಲಾಗುವುದು ಎಂದು ಹೇಳಿದರು.

'ನಾನು ರಾಮ ಮತ್ತು ಹನುಮನ ಭಕ್ತ'; ರಾಮ ರಾಜ್ಯದಿಂದ ಸ್ಫೂರ್ತಿ ಪಡೆದ 10 ಅಂಶ ಪಟ್ಟಿ ಮಾಡಿದ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Follow us
TV9 Web
| Updated By: ganapathi bhat

Updated on:Apr 06, 2022 | 7:16 PM

ದೆಹಲಿ: ರಾಜ್ಯ ಸರ್ಕಾರಕ್ಕೆ ಆಡಳಿತ ನಡೆಸುವಲ್ಲಿ ‘ರಾಮ ರಾಜ್ಯ’ದ ಪರಿಕಲ್ಪನೆ ಸ್ಫೂರ್ತಿ ನೀಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು (ಮಾರ್ಚ್ 10) ಹೇಳಿದರು. ಶಿಕ್ಷಣ, ಆರೋಗ್ಯ, ಆಹಾರ ಸೌಕರ್ಯ ಮತ್ತಿತರ ವಿಚಾರದಲ್ಲಿ ಸೇವೆ ಒದಗಿಸಲು ಸರ್ಕಾರಕ್ಕೆ ರಾಮ ರಾಜ್ಯದ ಕಲ್ಪನೆ ಸಹಾಯ ಮಾಡಿದೆ ಎಂದು ತಿಳಿಸಿದರು. ನಾನು ಹನುಮಂತ ಹಾಗೂ ರಾಮನ ಭಕ್ತ. ರಾಮರಾಜ್ಯದ ಪರಿಕಲ್ಪನೆಯಿಂದ ಸ್ಫೂರ್ತಿ ಪಡೆದ 10 ತತ್ವಗಳನ್ನು ನಾವು ಅನುಸರಿಸುತ್ತಿದ್ದೇವೆ ಎಂದ ಅವರು, ಬಜೆಟ್ ಅಧಿವೇಶನದ ಲೆಫ್ಟಿನೆಂಟ್ ಗವರ್ನರ್ ಮಾತುಗಳಿಗೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಕೇಜ್ರಿವಾಲ್ ಹೀಗೆ ಮಾತನಾಡಿದರು.

ಅಯೋಧ್ಯಾ ರಾಮ ಕ್ಷೇತ್ರದ ಕಾಮಗಾರಿ ಪೂರ್ಣಗೊಂಡ ಬಳಿಕ, ದೆಹಲಿಯ ಹಿರಿಯ ನಾಗರಿಕರನ್ನು ದೇವಾಲಯ ದರ್ಶನಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ ಕೇಜ್ರಿವಾಲ್, ಈ ಯೋಜನೆಯನ್ನು, ದೆಹಲಿ ಸರ್ಕಾರದ ‘ಮುಖ್ಯಮಂತ್ರಿ ತೀರ್ಥ ಯಾತ್ರೆ ಯೋಜನೆ’ಯ ಅಡಿಯಲ್ಲಿ ತರಲಾಗುವುದು ಎಂದು ಹೇಳಿದರು.

ರಾಮ ರಾಜ್ಯದ ಕಲ್ಪನೆಯಿಂದ ಪ್ರೇರಿತಗೊಂಡ ಹತ್ತು ಅಂಶಗಳನ್ನು ವಿವರಿಸುತ್ತಾ, ದೆಹಲಿಯಲ್ಲಿ ಹಸಿದ ಹೊಟ್ಟೆಯಲ್ಲಿ ಯಾರೂ ಮಲಗಬಾರದು. ಸಾಮಾಜಿಕ ಸ್ಥಿತಿಗತಿಗಳನ್ನು ಮೀರಿ, ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಶ್ರೀಮಂತ ಅಥವಾ ಬಡವ ಎಂಬ ಭೇದವಿಲ್ಲದೆ ವೈದ್ಯಕೀಯ ಚಿಕಿತ್ಸೆ ಪ್ರತಿಯೊಬ್ಬರಿಗೂ ಸಿಗಬೇಕು ಎಂದು ಹೇಳಿದರು. ಅರವಿಂದ್ ಕೇಜ್ರಿವಾಲ್ ಹೇಳಿದ ಹತ್ತು ಅಂಶಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಅರವಿಂದ್ ಕೇಜ್ರಿವಾಲ್ ತಿಳಿಸಿದ ಹತ್ತು ಅಂಶಗಳು ಇಲ್ಲಿವೆ:

    • ದೆಹಲಿಯಲ್ಲಿರುವ ಯಾರೊಬ್ಬರೂ ಹಸಿದ ಹೊಟ್ಟೆಯಲ್ಲಿ ಇರಬಾರದು. ಖಾಲಿ ಹೊಟ್ಟೆಯಲ್ಲಿ ನಿದ್ದೆಗೆ ಜಾರುವಂತೆ ಆಗಬಾರದು
    • ಶ್ರೀಮಂತ, ಬಡವ ಎಂಬ ಭೇದವಿಲ್ಲದೆ, ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು
    • ಆರ್ಥಿಕ ಸ್ಥಿತಿಗತಿಗಳನ್ನು ಮೀರಿ, ಪ್ರತಿಯೊಬ್ಬ ಪ್ರಜೆಗೂ ಅತ್ಯುತ್ತಮ ಆರೋಗ್ಯ ಹಾಗೂ ವೈದ್ಯಕೀಯ ಚಿಕಿತ್ಸೆ, ಸೇವೆಗಳು ಸಿಗಬೇಕು
    • ಕುಟುಂಬವೊಂದರ ಆರ್ಥಿಕ ಸ್ಥಿತಿಗತಿಗಳ ಲೆಕ್ಕವಿಲ್ಲದೆ, ದೆಹಲಿಯ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಲಭಿಸಬೇಕು
    • ಪ್ರತಿಯೊಬ್ಬರಿಗೂ ನೀರಿನ ಸೌಕರ್ಯ ಇರಬೇಕು. ಈಗೀಗ ನೀರು ಕೂಡ ಬಹಳ ತುಟ್ಟಿಯಾಗುತ್ತಿದೆ. ಆದರೆ, ದೆಹಲಿಯಲ್ಲಿ ಹಾಗಿಲ್ಲ
    • ಉದ್ಯೋಗಾವಕಾಶಗಳ ಬಗ್ಗೆ ಮಾತನಾಡುತ್ತಾ, ಪ್ರತಿ ಕೈಗಳಿಗೂ ಕೆಲಸ ಇರಬೇಕು. ಆ ಮೂಲಕ ಸಂಪಾದನೆಯೂ ಆಗಬೇಕು
    • ಪ್ರತಿಯೊಬ್ಬ ನಾಗರಿಕನಿಗೂ ವಾಸ ಮಾಡಲು ಯೋಗ್ಯವಾದ ಸೂರು ಬೇಕು
    • ಮಹಿಳೆಯರಿಗೆ ಸುರಕ್ಷತೆ ಹಾಗೂ ರಕ್ಷಣೆ ಇರಬೇಕು. ಅಪರಾಧಗಳು ನಡೆಯಬಾರದು
    • ರಾಮ ಜನ್ಮಭೂಮಿಯ ದೇವಾಲಯಕ್ಕೆ ತೀರ್ಥ ಯಾತ್ರೆಯ ಯೋಜನೆಯ ಬಗ್ಗೆ ಮಾತನಾಡಿದ ಕೇಜ್ರಿವಾಲ್, ಸಮಾಜವು ಹಿರಿಯರನ್ನು ಗೌರವಿಸಬೇಕು ಹಿರಿಯರನ್ನು ಗೌರವಿಸದ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ
    • ಎಲ್ಲಾ ಜಾತಿ, ಧರ್ಮದ ಜನರ ನಡುವೆ ಸಮಾನತೆ ಇರಬೇಕು

ಇದನ್ನೂ ಓದಿ:  West Bengal Assembly Elections 2021: ನಂದಿಗ್ರಾಮದಿಂದ ನಾಮಪತ್ರ ಸಲ್ಲಿಸಿದ ಮಮತಾ ಬ್ಯಾನರ್ಜಿ

ರಾಮಮಂದಿರ ನಿರ್ಮಾಣಕ್ಕೆ 2,100 ಕೋಟಿ ರೂ. ಸಂಗ್ರಹವಾಗಿದೆ -ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

Published On - 5:15 pm, Wed, 10 March 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ