ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ತಂಡದ ಸ್ವರೂಪವನ್ನು ನಿರ್ಧರಿಸಿಬಿಟ್ಟಿದ್ದಾರೆ!
ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ನಡೆಯಲಿರುವ 2021 ಟಿ20 ವಿಶ್ವಕಪ್ ಅಸಲಿಗೆ ಕಳೆದ ವರ್ಷವೇ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಆದರೆ, ಕೊವಿಡ್-19 ಪಿಡುಗುನಿಂದಾಗಿ ಅದನ್ನು ಮುಂದೂಡಿ ಭಾರತದಲ್ಲಿ ಆಯೋಜಿಸಲು ಐಸಿಸಿ ನಿರ್ಧರಿಸಿತು. ರಾಠೋಡ್ ಅವರ ಪ್ರಕಾರ ಇಂಗ್ಲೆಂಡ್ ವಿರುದ್ಧ 5-ಪಂದ್ಯಗಳ ಸರಣಿಯಲ್ಲಿ ಆಡುವ ಆಟಗಾರರರೇ ವಿಶ್ವಕಪ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಇದೇ ವರ್ಷದ ಅಂತ್ಯದಲ್ಲಿ ಭಾರತ ಆಯೋಜಿಸಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ, ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರದ ವಿಷಯವೆಂದರೆ, ಟೂರ್ನಿ ಆಯೋಜನೆಗೊಳ್ಳಲು ಇನ್ನೂ ಕೆಲ ದಿನಗಳು ಬಾಕಿಯಿರುವಂತೆಯೇ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋಡ್ ಭಾರತದ ಪರ ಯಾರು ಆಡಲಿದ್ದಾರೆ ಎನ್ನುವುದನ್ನು ಹೆಚ್ಚು ಕಡಿಮೆ ನಿರ್ಧರಿಸಿಬಿಟ್ಟಿದ್ದಾರೆ. ಟೀಮಿನ ಅಯ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸಂಬಂಧಿಸಿರುವ ವಿಷಯವಾದರೂ ಟೂರ್ನಿಯಲ್ಲಿ ಆಡಲಿರುವ ಸಂಭಾವ್ಯ ಆಟಗಾರರ ಪಟ್ಟಿ ಅವರ ತಲೆಯಲ್ಲಿ ಸಿದ್ಧಗೊಂಡಿದೆ. ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ನಡೆಯಲಿರುವ 2021 ಟಿ20 ವಿಶ್ವಕಪ್ ಅಸಲಿಗೆ ಕಳೆದ ವರ್ಷವೇ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಆದರೆ, ಕೊವಿಡ್-19 ಪಿಡುಗುನಿಂದಾಗಿ ಅದನ್ನು ಮುಂದೂಡಿ ಭಾರತದಲ್ಲಿ ಆಯೋಜಿಸಲು ಐಸಿಸಿ ನಿರ್ಧರಿಸಿತು. ರಾಠೋಡ್ ಅವರ ಪ್ರಕಾರ ಇಂಗ್ಲೆಂಡ್ ವಿರುದ್ಧ 5-ಪಂದ್ಯಗಳ ಸರಣಿಯಲ್ಲಿ ಆಡುವ ಆಟಗಾರರರೇ ವಿಶ್ವಕಪ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
‘ಟಿ20 ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ನಾನು ಬ್ಯಾಟಿಂಗ್ ಕೋಚ್ ಆಗಿರುವುದರಿಂದ, ಟೂರ್ನಿಗೆ ಮೊದಲು ಭಾರತದ ಬ್ಯಾಟಿಂಗ್ ಲೈನಪ್ ಸೆಟ್ಲ್ ಅಗಲಿ ಅಂತ ಆಶಿಸುತ್ತೇನೆ. ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್ಗಳ ಸರಣಿ ಮುಗಿಯುವ ಹೊತ್ತಿಗೆ ಇದೇ ಆಟಗಾರರ ಸೆಟ್ ವಿಶ್ವಕಪ್ನಲ್ಲಿ ಆಡಲಿದೆ ಎನ್ನುವುದು ನಮಗೆ ಖಾತ್ರಿಯಾಗಬೇಕು,’ ಎಂದು ಕ್ರಿಕೆಟ್ ವೆಬ್ಸೈಟೊಂದರ ಜೊತೆ ಮಾತಾಡುವಾಗ ರಾಠೋಡ್ ಹೇಳಿದರು.
‘ನಾನಂದುಕೊಳ್ಳುವ ಹಾಗೆ, ಇಂಗ್ಲೆಂಡ್ ವಿರುದ್ಧದ ಸರಣಿ ಮುಗಿಯುವ ಹೊತ್ತಿಗೆ ನಮಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ. ಈ ಸರಣಿಯಲ್ಲಿ ಆಡುತ್ತಿರುವ ಟೀಮಿನ ಸದಸ್ಯರಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡುವ ಪ್ರಮೇಯವೇನೂ ಉದ್ಭವಿಸದು ಎಂದು ನಾನು ಭಾವಿಸುತ್ತೇನೆ. ಯಾರಾದರೂ ಫಾರ್ಮ್ ಕಳೆದುಕೊಂಡರೆ, ಅಥವಾ ಗಾಯಗೊಂಡರೆ ಮಾತ್ರ ಬದಲಾವಣೆಗಳು ಬೇಕಾಗುತ್ತವೆ. ಬ್ಯಾಟಿಂಗ್ ಯುನಿಟ್ ದೃಷ್ಟಿಯಿಂದ ಹೇಳಿವುದಾದರೆ, ಅದು ವಿಶ್ವಕಪ್ಗೆ ಮೊದಲು ಸೆಟ್ಲ್ ಆಗಿರಬೇಕು,’ ಎಂದು ರಾಠೋಡ್ ಹೇಳಿದ್ದಾರೆ.

ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋಡ್
ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಮತ್ತು ವಿಶ್ವಕಪ್ಗೆ ಮೊದಲು ಭಾರತದ ಮುಂದಿರುವ ಸಮಸ್ಯೆಯೆಂದರೆ ಯಾರಿಗೆ ವಿಕೆಟ್ಕೀಪರ್/ಬ್ಯಾಟ್ಸ್ಮನ್ ಜವಾಬ್ದಾರಿಯನ್ನು ವಹಿಸಬೇಕೆನ್ನುವುದು. ಆಸ್ಟ್ರೇಲಿಯಾದಲ್ಲಿ ಅದನ್ನು ಕರ್ನಾಟಕದ ಕೆ ಎಲ್ ರಾಹುಲ್ ಬಹಳ ಸೊಗಸಾಗಿ ನಿಭಾಯಿಸಿದರು. ಹಾಗೆ ನೋಡಿದರೆ ಅವರಿಗೆ 2020ರಿಂದ ಸದರಿ ಜವಾಬ್ದಾರಿಯನ್ನು ನಿಭಾಯಿಸಲು ಹೇಳಲಾಗುತ್ತಿದೆ. ಆದರೆ ಇಂಗ್ಲೆಂಡ್ ವಿರುದ್ಧ ಆಡಿದ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಜೊತೆ ವಿಕೆಟ್ ಹಿಂದೆಯೂ ಉಲ್ಲೇಖನೀಯ ಪ್ರದರ್ಶಗಳನ್ನು ನೀಡಿದ ರಿಷಭ್ ಪಂತ್ ಟಿ20 ತಂಡಕ್ಕೆ ವಾಪಸ್ಸಾಗಿರುವುದರಿಂದ ಸವಾಲು ಎದುರಾಗಿದೆ ಎಂದು ರಾಠೋಡ್ ಹೇಳಿದ್ದಾರೆ.
‘ವಿಕೆಟ್ಕೀಪರ್/ಬ್ಯಾಟ್ಸ್ಮನ್ ಆಗಿ ರಾಹುಲ್ ಉತ್ತಮ ಪ್ರದರ್ಶಗಳನ್ನು ನೀಡಿದ್ದಾರೆ. ನಿಸ್ಸಂದೇಹವಾಗಿ ಅವರೊಬ್ಬ ಅಪ್ರತಿಮ ಕ್ರಿಕಟರ್. ಉತ್ತಮವಾಗಿ ಬ್ಯಾಟ್ ಮಾಡುವುದಲ್ಲದೆ ವಿಕೆಟ್ಗಳ ಹಿಂದೆಯೂ ಯಾರಿಗೂ ಕಮ್ಮಿಯಲ್ಲದಂಥ ಪ್ರದರ್ಶನ ನೀಡಿದರು. ಈಗ ಪಂತ್ ಫಾರ್ಮ್ಗೆ ಮರಳಿದ್ದಾರೆ ಮತ್ತು ಎರಡೂ ವಿಭಾಗಗಳಲ್ಲಿ ಕಳಂಕರಹಿತ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಮುಂದೆ ಇದು ಹೇಗೆ ಸಾಗಲಿದೆ ಎನ್ನುವುದನ್ನು ಕಾದು ನೋಡಬೇಕು. ಇಂಥ ಪರಿಸ್ಥಿತಿ ಎದುರಾದಾಗ ಟೀಮ್ ಮ್ಯಾನೇಜ್ಮೆಂಟ್ ಟೀಮಿನ ಸ್ವರೂಪ ಹೇಗಿರಬೇಕೆಂದು ಬಯಸುತ್ತದೆಯೋ ಅದೇ ಆಧಾರದ ಮೇಲೆ ಆಡುವ ಇಲೆವನ್ ಅಂತಿಮಗೊಳಿಸಲಾಗುತ್ತದೆ,’ ಎಂದು ರಾಠೋಡ್ ಹೇಳಿದರು.
ಅವರು ಹೇಳಿದಂತೆ ಆಗಲಿದೆಯೇ ಎನ್ನುವುದನ್ನು ಕಾಡು ನೋಡಬೇಕು.