‘CD ಪ್ರಕರಣದಲ್ಲಿ 9 ಜನರು ಭಾಗಿಯಾಗಿದ್ದಾರೆ; ರಾಜಕೀಯ ಹೋದ್ರೂ ತೊಂದರೆಯಿಲ್ಲ.. ಇವರಿಗೆ ತಕ್ಕ ಶಾಸ್ತಿ ಮಾಡ್ತೇವೆ’

ದೂರಿನಲ್ಲಿ ಷಡ್ಯಂತ್ರ ಮಾಡಿದ ಪ್ರಭಾವಿಗಳ ಹೆಸರು ಸೇರಿಸಿ ದೂರು ನೀಡುತ್ತೇವೆ. ನಮ್ಮ ರಾಜಕೀಯ ಹೋದರೂ ತೊಂದರೆ ಇಲ್ಲ. ಇದರಲ್ಲಿ ಷಡ್ಯಂತ್ರ ಮಾಡಿದವರಿಗೆ ತಕ್ಕಶಾಸ್ತಿ ಮಾಡ್ತೇವೆ ಎಂದು ಸಹ ಹೇಳಿದರು.

‘CD ಪ್ರಕರಣದಲ್ಲಿ 9 ಜನರು ಭಾಗಿಯಾಗಿದ್ದಾರೆ; ರಾಜಕೀಯ ಹೋದ್ರೂ ತೊಂದರೆಯಿಲ್ಲ.. ಇವರಿಗೆ ತಕ್ಕ ಶಾಸ್ತಿ ಮಾಡ್ತೇವೆ’
ಬಾಲಚಂದ್ರ ಜಾರಕಿಹೊಳಿ
Follow us
KUSHAL V
|

Updated on:Mar 09, 2021 | 9:59 PM

ಬೆಂಗಳೂರು: ರಮೇಶ್ ಜಾರಕಿಹೊಳಿ ಸೆಕ್ಸ್ CD ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ9ಗೆ ಬಾಲಚಂದ್ರ ಜಾರಕಿಹೊಳಿ ಸ್ಫೋಟಕ ಮಾಹಿತಿ ನೀಡಿದ್ದಾರೆ. ಈ ಸಿಡಿ ಪ್ರಕರಣದಲ್ಲಿ 9 ಜನರು ಭಾಗಿಯಾಗಿದ್ದಾರೆ. ಈಗಾಗಲೇ ಆ 9 ಜನರ ಮಾಹಿತಿ ನಮಗೆ ಸಿಕ್ಕಿದೆ. ಆ 9 ಜನರ ಪೈಕಿ ಕೆಲವರು ಪ್ರಭಾವಿಗಳು ಇದ್ದಾರೆ. ಪ್ರಭಾವಿಗಳು ಇರುವ ಹಿನ್ನೆಲೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ. ದೂರು ದಾಖಲಿಸಲು ಮತ್ತಷ್ಟು ಮಾಹಿತಿ ಸಂಗ್ರಹಿಸ್ತಿದ್ದೇವೆ ಎಂದು ಹೇಳಿದರು.

ಮೂರ್ನಾಲ್ಕು ದಿನಗಳಲ್ಲಿ ದೂರು ದಾಖಲಿಸುತ್ತೇವೆ. ದೂರಿನಲ್ಲಿ ಷಡ್ಯಂತ್ರ ಮಾಡಿದ ಪ್ರಭಾವಿಗಳ ಹೆಸರು ಸೇರಿಸಿ ದೂರು ನೀಡುತ್ತೇವೆ. ನಮ್ಮ ರಾಜಕೀಯ ಹೋದರೂ ತೊಂದರೆ ಇಲ್ಲ. ಇದರಲ್ಲಿ ಷಡ್ಯಂತ್ರ ಮಾಡಿದವರಿಗೆ ತಕ್ಕಶಾಸ್ತಿ ಮಾಡ್ತೇವೆ ಎಂದು ಸಹ ಹೇಳಿದರು.

ಹೊರರಾಜ್ಯದ ಡಿಟೆಕ್ಟಿವ್​ ಏಜೆನ್ಸಿಗೆ ಕೇಸ್​ ವಹಿಸಿದ್ದೇವೆ. ಪ್ರಕರಣದ ಮಾಹಿತಿ ಕಲೆ ಹಾಕಲು ಕೇಸ್ ನೀಡಿದ್ದೇವೆ. ಬೆಳಗಾವಿಯಲ್ಲಿ, ಗೋಕಾಕ್​ನಲ್ಲಿ ದೂರು ದಾಖಲಿಸಬೇಕಾ ಅಥವಾ ಬೆಂಗಳೂರಿನಲ್ಲಿ ದಾಖಲಿಸಬೇಕಾ ಎಂಬ ಬಗ್ಗೆ ಚರ್ಚೆ ಮಾಡ್ತೇವೆ. ಶೀಘ್ರದಲ್ಲೆ ದೂರು ದಾಖಲಿಸ್ತೇವೆ, ಹಿಂದೆ ಸರಿಯಲ್ಲ ಎಂದು ಟಿವಿ9ಗೆ ಬಾಲಚಂದ್ರ ಜಾರಕಿಹೊಳಿ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಇದಕ್ಕೂ ಮುಂಚೆ, ತಮ್ಮ ವಿರುದ್ಧ ಬಿಡುಗಡೆಯಾದ ಸಿಡಿ ಬಗ್ಗೆ ಸ್ಪಷ್ಟನೆ ನೀಡಲು ಇಂದು ಸದಾಶಿವನಗರದ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ರಮೇಶ್ ಜಾರಕಿಹೊಳಿ ಭಾವುಕರಾದರು. ಮಾನಸಿಕವಾಗಿ ತುಂಬಾ ನೊಂದಿದ್ದೇನೆ. ಷಡ್ಯಂತ್ರದಿಂದಲೇ ನನಗೆ ಹೀಗೆ ಮಾಡಿದ್ದಾರೆ ಅಂತಾ ಅಳಲು ತೋಡಿಕೊಂಡಿದರು.

2020ರ ಫೆಬ್ರವರಿ 26ರಂದು ನಾನು ಸಚಿವನಾದೆ. ಆಗ ಒಬ್ಬ ಮಹಾನಾಯಕ ನನಗೆ ಚಾಲೆಂಜ್ ಹಾಕಿದ್ದ. ಈ ಇಲಾಖೆಯನ್ನ ಕೇವಲ 3 ತಿಂಗಳು ನಡೆಸ್ತಾನೆಂದಿದ್ದ. ನಾನು ರಾಜ್ಯವೇ ಮೆಚ್ಚುವಂತೆ ನನ್ನ ಇಲಾಖೆ ನಡೆಸಿದ್ದೆ. ಹೀಗಾಗಿ, ನನ್ನ ವಿರುದ್ಧ ಅವರು ಷಡ್ಯಂತ್ರ ನಡೆಸಿದ್ದಾರೆ. ಆ ಮಹಾನಾಯಕ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.

ಇನ್ನು ಈ ವೇಳೆ ಮಾತನಾಡಿದ ರಮೇಶ್ ಜಾರಕಿಹೊಳಿ, CD 100% ನಕಲಿ, ಈ CDಯಲ್ಲಿ ಸತ್ಯಾಂಶ ಇಲ್ಲ. ಯುವತಿಗೆ ನೀಡಿರುವುದು 50 ಲಕ್ಷ ಅಲ್ಲ, 5 ಕೋಟಿ ರೂ.ವಿದೇಶದಲ್ಲಿ 2 ಫ್ಲ್ಯಾಟ್‌ಗಳನ್ನು ಕೊಡಿಸಿರುವ ಬಗ್ಗೆ ಮಾಹಿತಿ ಇದೆ ಎಂದರು. ಬೇರೆ ಸೆಕ್ಸ್ ಹಗರಣಗಳಲ್ಲಿ 15-20 ಕೋಟಿ ಖರ್ಚು ಆದರೆ ನನ್ನನ್ನು ಮುಗಿಸಲು ನೂರಾರು ಕೋಟಿ ರೂ. ಖರ್ಚು ಮಾಡಿದ್ದಾರೆ. ರಾಜಕೀಯವಾಗಿ ಮುಗಿಸಲು ದೊಡ್ಡ ಷಡ್ಯಂತ್ರ ನಡೆದಿದೆ. 26 ಗಂಟೆ ಮೊದಲೇ CD ಬಿಡುಗಡೆ ಬಗ್ಗೆ ಹೈಕಮಾಂಡ್‌, ನನ್ನ ಹಿತೈಷಿಗಳು ಮಾಹಿತಿ ನೀಡಿದ್ದರು. ನಾಳೆ 5-6 ಗಂಟೆಗೆ CD ಬಿಡುಗಡೆ ಆಗುತ್ತೆಂದು ಹೇಳಿದ್ರು. ಭಯ ಪಡಬೇಡ, ಕಾನೂನು ಕ್ರಮಕೈಗೊಳ್ಳೋಣ ಎಂದಿದ್ರು. ಸಿಎಂ, ಬಸವರಾಜ ಬೊಮ್ಮಾಯಿ ಜತೆಯೂ ಚರ್ಚಿಸಿದ್ದೆ. ಸುಮಾರು ಒಂದು ಗಂಟೆ ಕಾಲ ಸಭೆಯಲ್ಲಿ ಭಾಗಿಯಾಗಿದ್ದೆ. ಸಿಎಂ ಎದುರು ಕುಳಿತಿದ್ದರು, ಬೊಮ್ಮಾಯಿ ಪಕ್ಕದಲ್ಲಿದ್ದರು. ನಾನು ಭಯಪಡಬೇಕಾದ ಅಗತ್ಯವಿರಲಿಲ್ಲ. ಏಕೆಂದರೆ ನಾನು ಯಾವುದೇ ತಪ್ಪು ಮಾಡಿರಲಿಲ್ಲ.

ನಾನು ಮತ್ತೆ ರಾಜಕೀಯಕ್ಕೆ ಬರುತ್ತೇನೋ ಇಲ್ವೋ ಗೊತ್ತಿಲ್ಲ. ನನಗೆ ರಾಜಕಾರಣದ ಮೇಲೆ ಆಸಕ್ತಿ ಇಲ್ಲ. ಅವರನ್ನು ಜೈಲಿಗೆ ಹಾಕುವವರೆಗೂ ಬಿಡುವುದಿಲ್ಲ. ಎಷ್ಟೇ ಖರ್ಚಾದ್ರೂ ಅವರನ್ನ ಜೈಲಿಗೆ ಹಾಕಿಸದೆ ಬಿಡುವುದಿಲ್ಲ. ಎಷ್ಟೇ ಪ್ರಭಾವಿಯಾಗಿದ್ದರೂ ಸರಿ, ಜೈಲಿಗೆ ಹಾಕಿಸುತ್ತೇನೆ ಎಂದು ಹೇಳಿದ್ರು.

ಇಂದು ಕಬ್ಬನ್​ಪಾರ್ಕ್​ ಠಾಣೆಗೆ ಭೇಟಿ ನೀಡಿದ್ದ ದಿನೇಶ್​ ಈ ಮಧ್ಯೆ, ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಇಂದು ಕಬ್ಬನ್​ಪಾರ್ಕ್​ ಠಾಣೆಗೆ ಭೇಟಿ ನೀಡಿದ್ದರು. ಪ್ರಕರಣ ಹಿಂಪಡೆಯುವ ಬಗ್ಗೆ ದಿನೇಶ್​ ಕಲ್ಲಹಳ್ಳಿಯನ್ನು ವಿಚಾರಣೆ ನಡೆಸಿರುವ ಪೊಲೀಸರು ಅವರ ಹೇಳಿಕೆ ದಾಖಲಿಸಿದರು. ಜೊತೆಗೆ, ಈ ಬಗ್ಗೆ ನಾಳೆ ಅಧಿಕೃತವಾಗಿ ತಿಳಿಸುವುದಾಗಿ ಪೊಲೀಸರ ಸ್ಪಷ್ಟನೆ ನೀಡಿದ್ದಾರೆ ಎಂದು ಟಿವಿ9ಗೆ ದೂರುದಾರ‌ ದಿನೇಶ್ ಪರ ವಕೀಲರು ಮಾಹಿತಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಇನ್ನೊಂದು ಗುಂಡು ಯಾರಿಗೆ ಹೊಡೀಲಿ ಅಂತಾನೆ -ಸದನದಲ್ಲಿ CD ತೋರಿಸಿ H.D.ರೇವಣ್ಣ ಆಕ್ರೋಶ

Published On - 8:01 pm, Tue, 9 March 21

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ