ಇನ್ನೊಂದು ಗುಂಡು ಯಾರಿಗೆ ಹೊಡೀಲಿ ಅಂತಾನೆ -ಸದನದಲ್ಲಿ CD ತೋರಿಸಿ H.D.ರೇವಣ್ಣ ಆಕ್ರೋಶ

ಗನ್​ನಿಂದ ಗುಂಡು ಹೊಡೆಯುತ್ತೇನೆ ಎಂದು ಬೆದರಿಸಿದ್ದಾರೆ. ಒಂದು ಗುಂಡು ನಿನಗೆ ಹೊಡೆಯುತ್ತೇನೆ,‌ ಇನ್ನೊಂದು ಗುಂಡು ಯಾರಿಗೆ ಹೊಡೆಯಲಿ ಅಂತಾನೆ. ಆತ ಹೀಗೆ ಮಾತನಾಡಿರುವ ಫೋನ್ ರೆಕಾರ್ಡ್ ಇದೆ. ಈ ಸಿಡಿಯಲ್ಲಿ ಇದೆ ಎಂದು ಸಿಡಿ ತೋರಿಸಿ ರೇವಣ್ಣ ತಮ್ಮ ಸಿಟ್ಟು ಹೊರಹಾಕಿದರು.

ಇನ್ನೊಂದು ಗುಂಡು ಯಾರಿಗೆ ಹೊಡೀಲಿ ಅಂತಾನೆ  -ಸದನದಲ್ಲಿ CD ತೋರಿಸಿ H.D.ರೇವಣ್ಣ ಆಕ್ರೋಶ
H.D.‌ರೇವಣ್ಣ
Follow us
KUSHAL V
|

Updated on:Mar 09, 2021 | 7:37 PM

ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿ ಇಂದು ಹಾಸನ ಜಿಲ್ಲೆಯ ಶಾಸಕರ ಗದ್ದಲ ತಾರಕಕ್ಕೇರಿತು. ಸಹಕಾರ ಇಲಾಖೆ ಅಧಿಕಾರಿಯೊಬ್ಬರ ವಿರುದ್ಧ ಶಾಸಕರು ತಮ್ಮ ಆಕ್ರೋಶ ಹೊರಹಾಕಿದರು. ಶಾಸಕರಾದ H.D.‌ರೇವಣ್ಣ, ಶಿವಲಿಂಗೇಗೌಡ, H.K.ಕುಮಾರಸ್ವಾಮಿ ಕಿಡಿಕಾರಿದರು.

ಸಹಕಾರ ಇಲಾಖೆ ಅಧಿಕಾರಿ ಕುಡಿದು ಏನೇನೋ ಬೈತಾರೆ. ದಲಿತ ಸಮುದಾಯದ ಯುವಕನೊಬ್ಬನಿಗೆ ಬೈಯುತ್ತಾರೆ. ಗನ್​ನಿಂದ ಗುಂಡು ಹೊಡೆಯುತ್ತೇನೆ ಎಂದು ಬೆದರಿಸಿದ್ದಾರೆ. ಒಂದು ಗುಂಡು ನಿನಗೆ ಹೊಡೆಯುತ್ತೇನೆ,‌ ಇನ್ನೊಂದು ಗುಂಡು ಯಾರಿಗೆ ಹೊಡೆಯಲಿ ಅಂತಾನೆ. ಆತ ಹೀಗೆ ಮಾತನಾಡಿರುವ ಫೋನ್ ರೆಕಾರ್ಡ್ ಇದೆ. ಈ ಸಿಡಿಯಲ್ಲಿ ಇದೆ ಎಂದು ಸಿಡಿ ತೋರಿಸಿ ರೇವಣ್ಣ ತಮ್ಮ ಸಿಟ್ಟು ಹೊರಹಾಕಿದರು.

‘ಆ ಅಧಿಕಾರಿಗೆ ಶಾಸಕರೊಬ್ಬರ ಬೆಂಬಲ ಇದೆ’ ಆತ ನಮಗೂ ಗೌರವ ಕೊಡಲ್ಲ. ಆ ಅಧಿಕಾರಿಗೆ ಶಾಸಕರೊಬ್ಬರ ಬೆಂಬಲ ಇದೆ. ಆದರೆ, ಆ ಶಾಸಕರ ಹೆಸರು ಹೇಳಲ್ಲ ಎಂದು ಹೆಚ್​.ಡಿ.ರೇವಣ್ಣ ತಮ್ಮ ಅಳಲು ತೋಡಿಕೊಂಡರು. ಈ ವೇಳೆ, ಶಾಸಕ ಪ್ರೀತಂಗೌಡ ಹೆಸರು ಹೇಳದೇ ರೇವಣ್ಣ ಆರೋಪ ಮಾಡಿದರು.

ಆ ಅಧಿಕಾರಿ ಸಸ್ಪೆಂಡ್ ಮಾಡಿ ಎಂದು ರೇವಣ್ಣ ಆಗ್ರಹಿಸಿದರು. ರೇವಣ್ಣ ಆರೋಪಕ್ಕೆ ದನಿಗೂಡಿಸಿದ ಶಿವಲಿಂಗೇಗೌಡ ಒಬ್ಬ ಶಾಸಕರು ಬೆದರಿಕೆ ಹಾಕಿದ್ದಾರೆ. ಆ ಅಧಿಕಾರಿ ವಿರುದ್ಧ ಎರಡು ಎಫ್ಐಆರ್ ದಾಖಲಾಗಿದೆ ಎಂದು ಹೇಳಿದರು. ಜೊತೆಗೆ, ಅಧಿಕಾರಿಯನ್ನು ಸಸ್ಪೆಂಡ್ ಮಾಡಲು JDS‌ ಶಾಸಕರು ಆಗ್ರಹಿಸಿದರು.

PREETHAM GOWDA 1

ಪ್ರೀತಂಗೌಡ

SHIVALINGEGOWDA 1

ಶಿವಲಿಂಗೇಗೌಡ

ಈ ವೇಳೆ, ಶಾಸಕ ಪ್ರೀತಂಗೌಡಗೆ ಆ ಅಧಿಕಾರಿ ಆಪ್ತನಾಗಿದ್ದಾನೆ. ಪ್ರೀತಂಗೌಡಗೆ ಆಪ್ತ ಎಂದು ಶಿವಲಿಂಗೇಗೌಡ ಕಾಲೆಳೆದರು. ಶಿವಲಿಂಗೇಗೌಡ ಮಾತಿಗೆ ಸಿಟ್ಟಾದ ಶಾಸಕ ಪ್ರೀತಂಗೌಡ ನನ್ನನ್ನು ಏಕೆ ಎಳೆಯುತ್ತೀರಿ ಎಂದು ಹೇಳಿದರು. ಜೊತೆಗೆ, ಆ ಸಿಡಿ‌ ಅಸಲಿಯತ್ತು ಬಗ್ಗೆಯೂ ಕೇಳಿ ಎಂದು ಸಿಟ್ಟಿಗೆದ್ದರು. ಈ ನಡುವೆ, ಶಿವಲಿಂಗೇಗೌಡ, ರೇವಣ್ಣ, ಪ್ರೀತಂಗೌಡ ಮಧ್ಯೆ ವಾಕ್ಸಮರ ಸಹ ನಡೆಯಿತು.

ST SOMASHEKAR 1

ಎಸ್.ಟಿ.ಸೋಮಶೇಖರ್

‘ಜನಪ್ರತಿನಿಧಿಗಳ ವಿರುದ್ಧ ಅಧಿಕಾರಿಗಳು ಮಾತಾಡುವುದನ್ನು ಸಹಿಸಲ್ಲ’ ಜೆಡಿಎಸ್​ ಶಾಸಕರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಸಚಿವ ಎಸ್​.ಟಿ.ಸೋಮಶೇಖರ್​ ಜನಪ್ರತಿನಿಧಿಗಳ ವಿರುದ್ಧ ಅಧಿಕಾರಿಗಳು ಮಾತಾಡುವುದನ್ನು ಸಹಿಸಲ್ಲ. ಈಗಾಗಲೇ ಆತನಿಗೆ ನೋಟಿಸ್ ಕೊಟ್ಟಿದ್ದೇವೆಂದು ಉತ್ತರ ನೀಡಿದ್ದಾರೆ. ನನಗೆ ಉತ್ತರ ಸಮಾಧಾನ ಆಗಿಲ್ಲ, ಇಲಾಖೆ ಕ್ರಮ ತೆಗೆದುಕೊಳ್ಳುತ್ತೇವೆ. ನಾರಾಯಣ, ಸುನಿಲ್ ಎಂಬ ಇಬ್ಬರು ಅಧಿಕಾರಿಗಳು ಇದ್ದಾರೆ. ಜನಪ್ರತಿನಿಧಿಗಳಿಗೆ ಅವಹೇಳನ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಸಹಕಾರ ಇಲಾಖೆಯಲ್ಲಿರಲು ನಾಲಾಯಕ್ ಎಂದು ನೋಟಿಸ್ ಕೊಟ್ಟಿದ್ದೇವೆ ಎಂದು ಹೇಳಿದರು.

ಕಾನೂನಿನಲ್ಲಿ ಏನು ಕ್ರಮ ಕೈಗೊಳ್ಳಬೇಕು ಅದರಂತೆ ಕ್ರಮ ನಿಶ್ಚಿತ. ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ಧ ಮಾತಾಡಿದರೆ ರಕ್ಷಣೆ ಇಲ್ಲ ಎಂದು ವಿಧಾನಸಭೆಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್​ ಹೇಳಿದರು.

‘ಬೆಂಗಳೂರಲ್ಲಿ ಸರ್ಕಾರಿ ಜಮೀನು ಉಳಿಸೋದೆ ದೊಡ್ಡ ಸಮಸ್ಯೆ’ ಬೆಂಗಳೂರಲ್ಲಿ ಸರ್ಕಾರಿ ಜಮೀನು ಉಳಿಸೋದೆ ದೊಡ್ಡ ಸಮಸ್ಯೆ ಎಂದು ವಿಧಾನಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್​ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ವಿಪಕ್ಷದಲ್ಲಿದ್ದಾಗ ಮಾತಾಡುತ್ತೇವೆ, ಇಲ್ಲಿ ಬಂದ ಮೇಲೆ ಸಮಸ್ಯೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ ಕಂದಾಯ ಸಚಿವ R.ಅಶೋಕ್​ ಕೆ.ಆರ್.ಪುರಂನಲ್ಲಿ ನೂರಾರು ಕೋಟಿ ಮೌಲ್ಯದ ಆಸ್ತಿ ಕಬಳಿಸಿದ್ದಾರೆ. ಸರ್ಕಾರದ ಆಸ್ತಿಯಲ್ಲಿ ಅಪಾರ್ಟ್​ಮೆಂಟ್​ ನಿರ್ಮಿಸಿದ್ದಾರೆ. ಸಬ್ ರಿಜಿಸ್ಟ್ರಾರ್, ತಹಶೀಲ್ದಾರ್​ ಅಮಾನತು ಮಾಡಿದ್ದೆವು. ಆದರೆ, ಅವರು KATಗೆ ಹೋಗಿ ತಡೆಯಾಜ್ಞೆ ತಂದರು ಎಂದು ಸಚಿವ ಆರ್.ಅಶೋಕ್ ಹೇಳಿದರು.

ಬಳಿಕ ತುಮಕೂರಿಗೆ ವರ್ಗಾವಣೆ ಮಾಡಿದೆ, ಮತ್ತೆ ತಡೆಯಾಜ್ಞೆ ತಂದ್ರು. ಕೋರ್ಟ್​ಗೆ ಹೋಗಿ ತಡೆಯಾಜ್ಞೆ ತಂದರು. ಸರ್ಕಾರಿ ಜಮೀನು ಗುರುತಿಸಿ ತಕ್ಷಣ ಬೌಂಡರಿ ಹಾಕುತ್ತೇವೆ. ಕಾಂಪೌಂಡ್​ ಹಾಕಲು ಬಜೆಟ್​ನಲ್ಲಿ ಕೋಟಿ ಹಣ ಕೇಳಿದ್ದೆವು. ಆದರೆ, ಬೆಂಗಳೂರಿನಲ್ಲಿ ಸರ್ಕಾರಿ ಜಮೀನು ಉಳಿಸುವುದು ಸಾಹಸ ಎಂದು ವಿಧಾನಸಭೆಯಲ್ಲಿ ಸಚಿವ ಅಶೋಕ್​ ಅಸಹಾಯಕತೆ ವ್ಯಕ್ತಪಡಿಸಿದರು.

‘ರಾಜ್ಯದ ಹಿತ ಬಲಿ ಕೊಡಲು ಬಿಜೆಪಿಯವರು ಮುಂದಾಗಿದ್ದಾರೆ’ ಇತ್ತ, ನದಿ ಜೋಡಣೆ ಮಾಡುತ್ತೇವೆ ಎಂದು ಪೂಜೆ ಮಾಡಿದ್ದಾರೆ. ತಮಿಳುನಾಡು ಸರ್ಕಾರ ಯೋಜನೆಗೆ ಭೂಮಿ ಪೂಜೆ ಮಾಡಿದೆ. ನಮ್ಮ ಅನುಮತಿ ಇಲ್ಲದೆ ಅವರು ಹೇಗೆ ಪೂಜೆ ಮಾಡಿದರು? ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ವಿಧಾನಪರಿಷತ್​ನಲ್ಲಿ ಸರ್ಕಾರಕ್ಕೆ ಎಸ್.ಆರ್.ಪಾಟೀಲ್ ಆಗ್ರಹಿಸಿದರು.

ರಾಜ್ಯದ ಹಿತಕ್ಕೆ ಅನ್ಯಾಯ ಆಗುತ್ತಿದೆ. AIADMK ಜೊತೆ ಬೀಗತನ ಮಾಡಿ ಬಿಜೆಪಿ ಖಾತೆ ತೆರೆಯಲು ಮುಂದಾಗಿದೆ. ರಾಜ್ಯದ ಹಿತ ಬಲಿ ಕೊಡಲು ಬಿಜೆಪಿಯವರು ಮುಂದಾಗಿದ್ದಾರೆ ಎಂದು ಪರಿಷತ್​ನಲ್ಲಿ ಸರ್ಕಾರದ ವಿರುದ್ಧ ಎಸ್.ಆರ್.ಪಾಟೀಲ್ ವಾಗ್ದಾಳಿ ನಡೆಸಿದರು. ಕೇಂದ್ರ, ತಮಿಳುನಾಡು ನಮ್ಮ ಹಕ್ಕು ಕಸಿವ ಕೆಲಸ ಮಾಡ್ತಿದೆ. ರಾಜ್ಯದಲ್ಲಿನ 26 ಸಂಸದರು ಏನು ಮಾಡ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು. ಪ್ರಧಾನಿ ಮೋದಿ ಮೇಲೆ ಒತ್ತಡ ತರುವ ಕೆಲಸವನ್ನು ಮಾಡಿ ಎಂದು ಪರಿಷತ್​ನಲ್ಲಿ ಸರ್ಕಾರಕ್ಕೆ ಎಸ್.ಆರ್.ಪಾಟೀಲ್ ಆಗ್ರಹ ಮಾಡಿದರು.

‘ರಾಜ್ಯ ಬಿಜೆಪಿ ನಾಯಕರನ್ನ ಮೋದಿ ಹತ್ತಿರಕ್ಕೂ ಬಿಟ್ಟುಕೊಳ್ಳಲ್ಲ’ ರಾಜ್ಯ ಬಿಜೆಪಿಯವರು ಸುಮ್ಮನೆ ಪ್ರಧಾನಿ ಹೆಸರು ಹೇಳುತ್ತಾರೆ. ಪ್ರಧಾನಿ ಮೋದಿ ಇವರಿಗೆ ಭೇಟಿ ಮಾಡಲು ಅವಕಾಶ ನೀಡಲ್ಲ. ರಾಜ್ಯ ಬಿಜೆಪಿ ನಾಯಕರನ್ನ ಮೋದಿ ಹತ್ತಿರಕ್ಕೂ ಬಿಟ್ಟುಕೊಳ್ಳಲ್ಲ ಎಂದು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಪರಿಷತ್​ ಸದಸ್ಯ ಮರಿತಿಬ್ಬೇಗೌಡ ಆಕ್ರೋಶ ಹೊರಹಾಕಿದರು.

‘ತಮಿಳುನಾಡು ನಮ್ಮ ಒಪ್ಪಿಗೆ ಪಡೆಯದೇ ಯೋಜನೆ ಮಾಡ್ತಿದೆ’ ತಮಿಳುನಾಡು ನಮ್ಮ ಒಪ್ಪಿಗೆ ಪಡೆಯದೇ ಯೋಜನೆ ಮಾಡ್ತಿದೆ. ರಾಜ್ಯ ಸರ್ಕಾರ ಕೂಡಲೇ ಯೋಜನೆ ಪ್ರಾರಂಭ ಮಾಡಬೇಕು ಎಂದು ಪರಿಷತ್​ನಲ್ಲಿ ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಒತ್ತಾಯಿಸಿದರು. ಏಪ್ರಿಲ್​​ 6ರಂದು ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ಮೋದಿ ಮತ ಬ್ಯಾಂಕ್​ಗಾಗಿ ಅನುಕೂಲ ಮಾಡುವ ಸಾಧ್ಯತೆಯಿದೆ. ಹಾಗಾಗಿ, ತಮಿಳುನಾಡಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆ ಇದೆ. ನಮ್ಮ 26 ಸಂಸದರು ಮಾತಾಡುವ ಧೈರ್ಯ ತೋರುತ್ತಿಲ್ಲ. ಪ್ರಧಾನಿ ಮೋದಿ ಎದುರು ಮಾತಾಡುವ ಧೈರ್ಯ ತೋರ್ತಿಲ್ಲ. ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಿ ಪರಿಷತ್​ನಲ್ಲಿ ಸರ್ಕಾರಕ್ಕೆ ನಾರಾಯಣಸ್ವಾಮಿ ಒತ್ತಾಯಿಸಿದರು.

‘ರಾಜ್ಯದ ನೆಲ, ಜಲದ ಪ್ರಶ್ನೆ ಬಂದಾಗ ಮಣೆ ಹಾಕಲ್ಲ’ ರಾಜ್ಯದ ನೆಲ, ಜಲದ ಪ್ರಶ್ನೆ ಬಂದಾಗ ಮಣೆ ಹಾಕಲ್ಲ. ನಮ್ಮ ಸರ್ಕಾರ ಯಾರ ಮಾತಿಗೂ ಮಣೆ ಹಾಕುವುದಿಲ್ಲ. ರಾಜ್ಯದ ಜನ, ರೈತರ ಹಿತ ಕಾಪಾಡಲು ನಾವು ಬದ್ಧ ಎಂದು ಪರಿಷತ್​ನಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ತಮಿಳುನಾಡಿನ ಕಾವೇರಿ-ವೆಗೈ-ಗುಂಡಾರ್ ನದಿ ಜೋಡಣೆಗೆ ನಮ್ಮ ಸರ್ಕಾರ ವಿರೋಧ ಮಾಡಿದೆ. ಕೇಂದ್ರ, ಕೇಂದ್ರ ಜಲಶಕ್ತಿ ಇಲಾಖೆಗೆ ಪತ್ರ ಬರೆಯಲಾಗಿದೆ. ತಮಿಳುನಾಡು ಯೋಜನೆ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಈಗಾಗಲೇ ವಕೀಲರ ಜೊತೆ ಚರ್ಚೆ ಪ್ರಾರಂಭ ಮಾಡಿದ್ದೇವೆ. ಶೀಘ್ರವೇ ಸಿಎಂ ಬಿಎಸ್​ವೈ ಸರ್ವ ಪಕ್ಷ ಸಭೆ ಕರೆಯುತ್ತಾರೆ. ಸಭೆಯಲ್ಲಿ ಸಿಎಂ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡ್ತಾರೆ. ಕೇಂದ್ರ ಸರ್ಕಾರವೂ ಕೂಡ ಇದಕ್ಕೆ ಒಪ್ಪಿಗೆಯನ್ನ ನೀಡಿಲ್ಲ. ಇದೊಂದು ಕಾನೂನು ವಿರೋಧಿ ಕೆಲಸ ಎಂದು ಕಾರಜೋಳ ಹೇಳಿದರು.

ಪ್ರಧಾನಿ, ಕೇಂದ್ರ ಜಲಶಕ್ತಿ ಸಚಿವರ ಜತೆ ಸಂಪರ್ಕದಲ್ಲಿದ್ದೇವೆ. ಯಾವುದೇ ಕಾರಣಕ್ಕೂ ಯೋಜನೆಗೆ ಒಪ್ಪಿಗೆ ಕೊಡಲ್ಲ. ಮೇಕೆದಾಟು ಯೋಜನೆಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಸುಮಾರು 9 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈಗಾಗಲೇ ತಾಂತ್ರಿಕ ಕೆಲಸಗಳು ಆಗುತ್ತಿವೆ ಎಂದು ಹೇಳಿದರು.

ಇದನ್ನೂ ಓದಿ:ಸಿಎಂ BSYಗೆ ಪಾಪ ಒಂದು ಕಿವಿ ಕೇಳ್ತಿಲ್ಲ; ಅವರಿಗೆ ತೊಂದರೆ ಕೊಡೋಕೆ ಇಷ್ಟವಿಲ್ಲ -ಜಯಮೃತ್ಯುಂಜಯ ಸ್ವಾಮೀಜಿ

Published On - 7:19 pm, Tue, 9 March 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ