ಬಿ.ಎಸ್.ಯಡಿಯೂರಪ್ಪ ಅವರಿಗೆ ಒಂದು ಕಿವಿ ಕೇಳ್ತಿಲ್ಲ; ತೊಂದರೆ ಕೊಡೋಕೆ ಇಷ್ಟವಿಲ್ಲ -ಜಯಮೃತ್ಯುಂಜಯ ಸ್ವಾಮೀಜಿ

ಬಿ.ಎಸ್.ಯಡಿಯೂರಪ್ಪ ಅವರಿಗೆ ಒಂದು ಕಿವಿ ಕೇಳ್ತಿಲ್ಲ; ತೊಂದರೆ ಕೊಡೋಕೆ ಇಷ್ಟವಿಲ್ಲ -ಜಯಮೃತ್ಯುಂಜಯ ಸ್ವಾಮೀಜಿ
ಬಿ.ಎಸ್​.ಯಡಿಯೂರಪ್ಪ (ಎಡ); ಜಯಮೃತ್ಯುಂಜಯ ಸ್ವಾಮೀಜಿ (ಬಲ)

ಸಿಎಂ BSYಗೆ ಕೆಲವು ಶಾಸಕರು ಮಿಸ್ ಗೈಡ್ ಮಾಡ್ತಿದ್ದಾರೆ. ಕೆಲವೇ ದಿನಗಳಲ್ಲೇ ಅವರ ಹೆಸರನ್ನ ಬಯಲು ಮಾಡ್ತೇನೆ. ಸುದ್ದಿಗೋಷ್ಠಿ ಮೂಲಕ ಅವರ ಹೆಸರನ್ನ ಬಯಲು ಮಾಡ್ತೇನೆ ಎಂದು ಸ್ವಾಮೀಜಿ ಹೇಳಿದರು.

KUSHAL V

| Edited By: Ghanashyam D M | ಡಿ.ಎಂ.ಘನಶ್ಯಾಮ

Mar 09, 2021 | 8:08 PM

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ವಿಚಾರವಾಗಿ ನಮ್ಮ ಬೇಡಿಕೆ ಈಡೇರದಿದ್ರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಸರ್ಕಾರಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಯಡಿಯೂರಪ್ಪಗೆ ಪಾಪ ಒಂದು ಕಿವಿ ಕೇಳುತ್ತಿಲ್ಲ. ನಮ್ಮವರೇ ಕೆಲವರು ವೇದಿಕೆ ಹತ್ತಿಕೊಂಡು ನಮಗೆ ಮೋಸ ಮಾಡುತ್ತಿದ್ದಾರೆ. ಸಿಎಂ BSYಗೆ ಕೆಲವು ಶಾಸಕರು ಮಿಸ್ ಗೈಡ್ ಮಾಡ್ತಿದ್ದಾರೆ. ಕೆಲವೇ ದಿನಗಳಲ್ಲೇ ಅವರ ಹೆಸರನ್ನ ಬಯಲು ಮಾಡ್ತೇನೆ. ಸುದ್ದಿಗೋಷ್ಠಿ ಮೂಲಕ ಅವರ ಹೆಸರನ್ನ ಬಯಲು ಮಾಡ್ತೇನೆ ಎಂದು ಸ್ವಾಮೀಜಿ ಹೇಳಿದರು.

ಸಮುದಾಯದ ಅತೃಪ್ತ, ಅಜ್ಞಾನಿ ಶಾಸಕರಿಂದ ಮೀಸಲಾತಿಗೆ ಹಿಂದೇಟು ಹಾಕುತ್ತಿದ್ದಾರೆ. ನಮ್ಮ ಬೇಡಿಕೆ ಈಡೇರಿಸಲು ಆಗುತ್ತೋ, ಇಲ್ವೋ ಹೇಳಿ. ನಿಮಗೆ ತೊಂದರೆ ಕೊಡೋಕೆ ಇಷ್ಟವಿಲ್ಲ ಎಂದು ಜಯಮೃತ್ಯುಂಜಯ ಸ್ವಾಮೀಜಿ ಸಿಎಂ ಯಡಿಯೂರಪ್ಪಗೆ ಹೇಳಿದರು. ಶಾಸಕ ಯತ್ನಾಳ್ ಹಿಂದುತ್ವದ ಫೈಯರ್ ಬ್ರ್ಯಾಂಡ್ ಎಂದು ಸಹ ಹೇಳಿದರು.

ನಮ್ಮ ಬಲ ಪ್ರದರ್ಶನದ ಮೂಲಕ ಸಿಎಂ ನಮ್ಮ ಒತ್ತಡಕ್ಕೆ ಮಣಿದಿದ್ರು ಅನ್ನೋ ವಿಚಾರ ಗೊತ್ತಾಗಿತ್ತು. ಆದ್ರೆ ನಮ್ಮ ಸಮುದಾಯದ ಕೆಲವು ಶಾಸಕರು ಮೀಸಲಾತಿ ಕೊಡಬೇಡಿ ಅಂತಾ ಹೇಳಿದ್ದಾರಂತೆ. ವಿಜಯೇಂದ್ರ ಕೂಡ ಮೀಸಲಾತಿ ಕೊಡಿ ಅಂತಾ ಬಿಎಸ್​ವೈ ಚರ್ಚೆ ಮಾಡಿದ್ರು.

ಇದನ್ನೂ ಓದಿ: ನಮ್ಮೂರಿನ ರಾಮನ ಗುಡಿಗೆ ಹಣ ಕೊಟ್ಟಿದ್ದೇನೆ; ಎಲ್ಲಿ ಕೊಟ್ಟರೇನು, ರಾಮನಿಗೇ ಕೊಟ್ಟೆ -ಸ್ಪೀಕರ್​ ದೇಣಿಗೆ ಪ್ರಶ್ನೆಗೆ ಸಿದ್ದು ಜಬರ್​ದಸ್ತ್​ ಕೌಂಟರ್

Follow us on

Related Stories

Most Read Stories

Click on your DTH Provider to Add TV9 Kannada