AA22: ಮತ್ತೋರ್ವ ತೆಲುಗು ಸ್ಟಾರ್ ನಟನ ಹಿಂದೆ ಬಿದ್ರಾ ಪ್ರಶಾಂತ್ ನೀಲ್? ಹೈದರಾಬಾದ್ನಲ್ಲಿ ಅಚ್ಚರಿಯ ಭೇಟಿ
ಸಲಾರ್ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಇರುವ ಪ್ರಶಾಂತ್ ನೀಲ್ ಇಂದು ಹೈದರಾಬಾದ್ನಲ್ಲಿರುವ ಗೀತಾ ಆರ್ಟ್ಸ್ ಸ್ಟುಡಿಯೋಗೆ ಭೇಟಿಕೊಟ್ಟಿದ್ದಾರೆ. ಈ ವೇಳೆ ಅಲ್ಲು ಅರ್ಜುನ್ ಕೂಡ ಅಲ್ಲಿಗೆ ಬಂದಿದ್ದು ವಿಶೇಷವಾಗಿತ್ತು.
ಕೆಜಿಎಫ್ ಚಾಪ್ಟರ್ 2 ನಂತರ ಪ್ರಶಾಂತ್ ನೀಲ್ ಮುಂದಿನ ಪ್ರಾಜೆಕ್ಟ್ ಯಾವುದು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ತೆಲುಗಿನ ಸ್ಟಾರ್ ನಟ ಪ್ರಭಾಸ್ ಜತೆ ಸಲಾರ್ ಚಿತ್ರಕ್ಕಾಗಿ ಕೈಜೋಡಿಸುವ ಮೂಲಕ ಪ್ರಶಾಂತ್ ನೀಲ್ ಈ ಎಲ್ಲ ಚರ್ಚೆಗಳಿಗೆ ತೆರೆ ಎಳೆದಿದ್ದರು. ಈಗ ಸಲಾರ್ ಬಗ್ಗೆ ಒಂದಷ್ಟು ಕುತೂಹಲಗಳು ಹುಟ್ಟಿ ತಣ್ಣಗಾಗುವುದರೊಳಗೆ ಪ್ರಶಾಂತ್ ನೀಲ್ ಮತ್ತೋರ್ವ ಟಾಲಿವುಡ್ ಸ್ಟಾರ್ ನಟನ ಹಿಂದೆ ಬಿದ್ದಂತೆ ಕಾಣುತ್ತಿದೆ. ಇಂದು (ಮಾ.9) ಅಲ್ಲು ಅರ್ಜುನ್ ಅವರನ್ನು ಪ್ರಶಾಂತ್ ನೀಲ್ ಭೇಟಿ ಮಾಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸಲಾರ್ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಇರುವ ಪ್ರಶಾಂತ್ ನೀಲ್ ಇಂದು ಹೈದರಾಬಾದ್ನಲ್ಲಿರುವ ಗೀತಾ ಆರ್ಟ್ಸ್ ಸ್ಟುಡಿಯೋಗೆ ಭೇಟಿಕೊಟ್ಟಿದ್ದಾರೆ. ಈ ವೇಳೆ ಅಲ್ಲು ಅರ್ಜುನ್ ಕೂಡ ಅಲ್ಲಿಗೆ ಬಂದಿದ್ದರು. ಇದೊಂದು ಸಾಮಾನ್ಯ ಭೇಟಿ ಎನ್ನುವ ಸ್ಪಷ್ಟನೆ ಕೇಳಿ ಬಂದಿದೆ. ಆದರೆ, ಈ ಭೇಟಿ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.
ಮೂಲಗಳ ಪ್ರಕಾರ್ ಅಲ್ಲು ಅರ್ಜುನ್ 22ನೇ ಸಿನಿಮಾಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಇಂದಿನ ಭೇಟಿ ವೇಳೆ ಪ್ರಶಾಂತ್ ಸಿನಿಮಾ ಕಥೆಯ ಒಂದೆಳೆ ಬಿಚ್ಚಿಟ್ಟಿದ್ದು, ಇದು ಅಲ್ಲು ಅರ್ಜುನ್ಗೆ ಇಷ್ಟವಾಗಿದೆ ಎನ್ನಲಾಗಿದೆ.
ಏಪ್ರಿಲ್ 8 ಅಲ್ಲು ಅರ್ಜುನ್ ಜನ್ಮದಿನ. ಈ ವೇಳೆ ಅವರ ನಟನೆಯ ಪುಷ್ಪ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ. ಅವರ 21ನೇ ಸಿನಿಮಾದ ಟೈಟಲ್ ಲಾಂಚ್ ಕೂಡ ಆಗುತ್ತಿದೆ. ಇದರ ಜತೆಗೆ ಪ್ರಶಾಂತ್ ನೀಲ್ ಸಿನಿಮಾದ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ ಎಂಬುದು ಸದ್ಯ ಕೇಳಿಬರುತ್ತಿರುವ ಮಾಹಿತಿ.
Hot News Of TFI ? Director @prashanth_neel meets@alluarjun at #GeethaArts Today.
Buzz⚡⚡ They Will Come Together AFTER#AlluArjun‘s Next #AA21 With #Koratala Film 2021.#AA22 With #PrashanthNeel Will On the Screens In Diwali 2022.#Pushpa #KGF2 #AA21 #AA22 pic.twitter.com/57UMZ3Jktd
— ?????????? ❁ (@Vijaykumar_0722) March 9, 2021
Next month April 8th ki ???#Pushpa Teaser#AA21 Title/ Rls date#AA22 Announcements vasthe ? pic.twitter.com/w9FEB75U8r
— FANATICS OF BUNNY (@FanaticsofBunny) March 8, 2021
Bollywood Famous Insider @aamir__71 Confirmed That #AA22 – Prasanth Neel . Almost Final.
Let’s Dance ⚡ pic.twitter.com/J9MKGIvTPi
— Musfirat Hasan (@FarazyHasan) March 9, 2021
ಇನ್ನು, ಪ್ರಶಾಂತ್ ನೀಲ್-ಅಲ್ಲು ಅರ್ಜುನ್ ಭೇಟಿ ನಂತರದಲ್ಲಿ ಟ್ವಿಟರ್ನಲ್ಲಿ AA22 ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿದೆ. ಅಭಿಮಾನಿಗಳು ಈ ಹ್ಯಾಶ್ಟ್ಯಾಗ್ ಅಡಿಯಲ್ಲಿ ಸಾಲು ಸಾಲು ಟ್ವೀಟ್ಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: ಉಗ್ರಂ ನಂತರ ಮತ್ತೆ ಒಂದಾದ್ರು ಶ್ರೀಮುರುಳಿ-ಪ್ರಶಾಂತ್ ನೀಲ್!