Bigg Boss Kannada: ದೊಡ್ಡವರು ಅಂತ ಸುಮ್ನೆ ಬಿಟ್ಟೀದೀನಿ ಮಗನೆ; ಪ್ರಶಾಂತ್ಗೆ ಬ್ರೋ ಗೌಡ ಆವಾಜ್!
ಆಟದಲ್ಲಿ ಪ್ರಶಾಂತ್ ಸಂಬರಗಿ ತುಂಬಾನೇ ವೈಲೆಂಟ್ ಆಗಿ ನಡೆದುಕೊಂಡಂತೆ ಕಾಣುತ್ತದೆ. ಆಟ ಆಡುವ ಭರದಲ್ಲಿ ಕೆಲವರಿಗೆ ಗಾಯ ಮಾಡಿದಂತೆಯೂ ಕಾಣುತ್ತಿದೆ.
ಬಿಗ್ ಬಾಸ್ ಮನೆ ಸೇರಿದವರಿಗೆ ಸ್ವಾರ್ಥ ಸ್ವಲ್ಪ ಹೆಚ್ಚೇ ಇರುತ್ತದೆ. ನಾನು ಗೆಲ್ಲಬೇಕು ಎನ್ನುವುದನ್ನು ತಲೆಯಲ್ಲಿ ತುಂಬಿಕೊಂಡು ಸ್ಪರ್ಧಿಗಳು ಆಟವಾಡುತ್ತಾರೆ. ಈಗ ಕನ್ನಡ ಬಿಗ್ ಬಾಸ್ ಸೀಸನ್ 8 ಆರಂಭವಾಗಿ ವಾರ ಕಳೆದಿದೆ. ಸ್ಪರ್ಧಿಗಳ ನಡುವೆ ನಿಧಾನವಾಗಿ ತಿಕ್ಕಾಟ ಆರಂಭವಾಗುತ್ತಿದೆ. ಎಲ್ಲರ ಸ್ವಾರ್ಥದ ಮುಖ ಅನಾವರಣಗೊಳ್ಳುತ್ತಿದೆ. ಇತ್ತೀಚೆಗೆ ಪ್ರಶಾಂತ್ ಸಂಬರಗಿ-ಬ್ರೋ ಗೌಡ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಈಗ ಅಂಥದ್ದೇ ಘಟನೆ ಮರುಕಳಿಸಿದೆ. ದೊಡ್ಡವರು ಅಂತ ಸುಮ್ನೆ ಬಿಟ್ಟೀದಿನಿ ಮಗನೆ ಎಂದು ಪ್ರಶಾಂತ್ಗೆ ಬ್ರೋ ಗೌಡ ಆವಾಜ್ ಹಾಕಿದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿಯು ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಸ್ಪರ್ಧಿಗಳ ನಡುವೆ ನಡೆದ ಕಿತ್ತಾಟದ ಅನಾವರಣ ಆಗಿದೆ. ಇಂದು ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ನ ಅನುಸಾರ ಒಂದು ಟೀಂ ವೈರಸ್ ಆದರೆ, ಮತ್ತೊಬ್ಬರು ಮನುಷ್ಯರು. ವೈರಸ್ನಿಂದ ಮನುಷ್ಯರು ತಪ್ಪಿಸಿಕೊಳ್ಳಬೇಕು.
ಈ ಆಟದಲ್ಲಿ ಪ್ರಶಾಂತ್ ಸಂಬರಗಿ ತುಂಬಾನೇ ವೈಲೆಂಟ್ ಆಗಿ ನಡೆದುಕೊಂಡಂತೆ ಕಾಣುತ್ತದೆ. ಆಟ ಆಡುವ ಭರದಲ್ಲಿ ಕೆಲವರಿಗೆ ಗಾಯ ಮಾಡಿದಂತೆಯೂ ಕಾಣುತ್ತಿದೆ. ಇದೇ ವಿಚಾರ ಬ್ರೋ ಗೌಡ ಅವರನ್ನು ಕೆರಳಿಸಿದೆ. ನೀನು ಮನುಷ್ಯನೋ ಅಥವಾ ಮೃಗವೋ? ಕತ್ತನ್ನು ಹಿಚಕುತ್ತೀಯಾ. ದೊಡ್ಡವನು ಎಂದು ಸುಮ್ನೆ ಬಿಟ್ಟಿದೀನಿ ಮಗನೆ ಎಂದು ಆವಾಜ್ ಹಾಕಿದ್ದಾರೆ. ಆದರೆ, ಪ್ರಶಾಂತ್ ಮಾತ್ರ ಇದಕ್ಕೆ ತಲೆ ಕೆಡಿಸಿಕೊಂಡಂತೆ ಕಂಡಿಲ್ಲ. ತನಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಅವರು ಕೂತಿದ್ದರು. ಅಷ್ಟಕ್ಕೂ ಕೊನೆಗೆ ಆಟ ಯಾವ ಗತಿ ಪಡೆದುಕೊಂಡಿತು, ಮನೆಯಲ್ಲಿ ಏನೆಲ್ಲ ಆಯಿತು ಎಂಬುದಕ್ಕೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಬೇಕಿದೆ.
View this post on Instagram
View this post on Instagram
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಮನೆಗೆ ಕಾಲಿಟ್ಟ ಆತಂಕಕಾರಿ ವೈರಸ್? ನಿರ್ಮಲಾ ಚೆನ್ನಪ್ಪ ಅಸ್ವಸ್ಥ
Published On - 6:11 pm, Tue, 9 March 21