ಸಿದ್ಧರಾಮಯ್ಯ ವರ್ತನೆಯಿಂದಲೇ ಕಾಂಗ್ರೆಸ್ ನೆಲಕಚ್ಚಿದೆ: ಸಚಿವ ಈಶ್ವರಪ್ಪ

| Updated By: ಆಯೇಷಾ ಬಾನು

Updated on: Oct 07, 2020 | 12:36 PM

ಕಲಬುರಗಿ: ಬಿಜೆಪಿ ನಾಯಕರ ಬಗ್ಗೆ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಏಕವಚನ ಪ್ರಯೋಗ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ನಗರದಲ್ಲಿ ಮಾತನಾಡಿದ್ದಾರೆ. ಸಿದ್ರಾಮಯ್ಯ ಮಾತು ನಾಲಿಗೆಯ ಸಂಸ್ಕೃತಿ ಏನಂತ ತೋರಿಸುತ್ತೆ. ಯೋಗಿ ಆದಿತ್ಯನಾಥ್, ತೇಜಸ್ವಿ ಸೂರ್ಯ ಬಗ್ಗೆ ಆಡಿರೋ ಮಾತು ಗೊತ್ತಿದೆ. ಸಿದ್ಧರಾಮಯ್ಯ ವರ್ತನೆಯಿಂದಾಗಿಯೇ ಕಾಂಗ್ರೆಸ್ ನೆಲಕಚ್ಚಿದೆ ಎಂದು ಸಿದ್ದರಾಮಯ್ಯ ಮೇಲೆ ಹರಿಹಾಯ್ದರು. ಸಿದ್ಧರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡವರು. ಸಿಎಂ ಹುದ್ದೆಯಿಂದ ಕೆಳಗಿಳಿದು ಈಗ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಕುಳಿತಿದ್ದಾರೆ. […]

ಸಿದ್ಧರಾಮಯ್ಯ ವರ್ತನೆಯಿಂದಲೇ ಕಾಂಗ್ರೆಸ್ ನೆಲಕಚ್ಚಿದೆ: ಸಚಿವ ಈಶ್ವರಪ್ಪ
Follow us on

ಕಲಬುರಗಿ: ಬಿಜೆಪಿ ನಾಯಕರ ಬಗ್ಗೆ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಏಕವಚನ ಪ್ರಯೋಗ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ನಗರದಲ್ಲಿ ಮಾತನಾಡಿದ್ದಾರೆ.

ಸಿದ್ರಾಮಯ್ಯ ಮಾತು ನಾಲಿಗೆಯ ಸಂಸ್ಕೃತಿ ಏನಂತ ತೋರಿಸುತ್ತೆ. ಯೋಗಿ ಆದಿತ್ಯನಾಥ್, ತೇಜಸ್ವಿ ಸೂರ್ಯ ಬಗ್ಗೆ ಆಡಿರೋ ಮಾತು ಗೊತ್ತಿದೆ. ಸಿದ್ಧರಾಮಯ್ಯ ವರ್ತನೆಯಿಂದಾಗಿಯೇ ಕಾಂಗ್ರೆಸ್ ನೆಲಕಚ್ಚಿದೆ ಎಂದು ಸಿದ್ದರಾಮಯ್ಯ ಮೇಲೆ ಹರಿಹಾಯ್ದರು.

ಸಿದ್ಧರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡವರು. ಸಿಎಂ ಹುದ್ದೆಯಿಂದ ಕೆಳಗಿಳಿದು ಈಗ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಕುಳಿತಿದ್ದಾರೆ. ಈಗಲಾದ್ರೂ ಸಿದ್ಧರಾಮಯ್ಯ ಬುದ್ಧಿ ಕಲಿಯಬೇಕು. ಸಿದ್ಧರಾಮಯ್ಯ ವರ್ತನೆ ಹೀಗೆಯೇ ಮುಂದುವರಿದರೆ ಕಾಂಗ್ರೆಸ್ ಪಕ್ಷ ಸಂಪೂರ್ಣ ನೆಲದಿಂದ ಕೆಳಗೆ ಹೋಗುತ್ತೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

ಡಿಕೆಶಿ ಪರಿಶುದ್ಧರಿದ್ದರೆ ಸೀತೆಯಂತೆ ಪಾವಿತ್ರ್ಯತೆಯಿಂದ ಹೊರ ಬರಲಿ..
ಇನ್ನು, ಡಿಕೆಶಿ ಮೇಲೆ ಸಿಬಿಐ ದಾಳಿ ವಿಚಾರವಾಗಿ ಉಪ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಸಿಬಿಐ ಅಸ್ತ್ರ ಪ್ರಯೋಗವಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ. ಡಿಕೆಶಿ ಪರಿಶುದ್ಧರಿದ್ದರೆ ಸೀತೆಯಂತೆ ಪಾವಿತ್ರ್ಯತೆಯಿಂದ ಹೊರ ಬರಲಿ. ಉಪ್ಪು ತಿಂದವರು ನೀರು ಕುಡೀಲೇ ಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು.

ಈ ಹಿಂದೆ ಯಡಿಯೂರಪ್ಪ ಮೇಲೆಯೂ ಸಿಬಿಐ ದಾಳಿ ನಡೆದಿತ್ತು. ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಯಡಿಯೂರಪ್ಪ ತನಿಖೆ ಎದುರಿಸಿ ನಿರಪರಾಧಿಯಾಗಿ ಹೊರಬಂದಿದ್ದಾರೆ. ಅದರಂತೆ ಡಿಕೆಶಿಯೂ ನಿರಪರಾಧಿ ಎಂದು ಸಾಬೀತು ಮಾಡಲಿ ಎಂದು ಈಶ್ವರಪ್ಪ ಹೇಳಿದರು.

Published On - 12:35 pm, Wed, 7 October 20