
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕ್ರಿಕೆಟ್ ಆಟಗಾರರು, ಸಿನಿಮಾ ನಟರ ಜೊತೆ ಮಾತನಾಡ್ತಾರೆ. ಆದ್ರೆ ರೈತರ ಜೊತೆ ಮಾತನಾಡುವುದಕ್ಕೆ ಟೈಮ್ ಇಲ್ಲಾ.. ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ಸಿಡಿದೆದ್ದಿದ್ದಾರೆ. ರಾಜ್ಯದ ಬಹುತೇಕ ಕಡೆ ಪ್ರತಿಭಟನೆಗಳ ಕಾವು ಮೆಲ್ಲನೆ ಏರುತ್ತಿದೆ. ಈ ಬಗ್ಗೆ ಟಿವಿ9ಜೊತೆ ಮಾತನಾಡಿದ ಕುರುಬೂರು ಶಾಂತಕುಮಾರ್ ಮೋದಿ ವಿರುದ್ಧ ಪ್ರಹಾರ ಬೀಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕ್ರಿಕೆಟ್ ಆಟಗಾರರು, ಸಿನಿಮಾ ನಟರ ಜೊತೆ ಮಾತನಾಡ್ತಾರೆ. ಆದ್ರೆ ರೈತರ ಜೊತೆ ಮಾತನಾಡೊದಕ್ಕೆ ಟೈಮ್ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಮೊಂಡು ಹಠ ಬಿಡಬೇಕು:
ಇವರು ರೈತರ ಪಿಎಂ ಅಲ್ಲಾ ಕಾರ್ಪೊರೇಟ್ ಪಿಎಂ ಆಗಿದ್ದಾರೆ ಅಂತಾ ಅನಿಸುತ್ತಿದೆ. ಸರ್ಕಾರ ಮೊಂಡು ಹಠ ಬಿಡಬೇಕು. ರೈತರ ಪರವಾಗಿ ನಿಲ್ಲಬೇಕು. ಸರ್ಕಾರ ರೈತರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಬಾರದು. ಎಲ್ಲಾ ರೈತರ ಜೊತೆ ಬೆಂಬಲಕ್ಕೆ ನಿಲ್ಲಬೇಕು.
ಸಂಕಷ್ಟದ ಸಮಯದಲ್ಲೂ ನಾವು ದವಸ ಧಾನ್ಯ ತರಕಾರಿ ಬೆಳೆದಿದ್ದೇವೆ. ಒಂದು ದಿನ ಬಂದ್ ಮಾಡಿ ಬೆಂಬಲ ನೀಡಬೇಕು. ಇವತ್ತು ಬೆಂಗಳೂರಿನಲ್ಲಿ ಎಲ್ಲರೂ ಪ್ರತಿಭಟನೆ ಮಾಡ್ತೀವಿ. ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಟಿವಿ9 ಗೆ ಕುರುಬೂರು ಶಾಂತಕುಮಾರ್ ತಿಳಿಸಿದ್ರು.
Published On - 8:50 am, Tue, 8 December 20