ದುಡ್ಡಿದ್ರೆ ಅಧಿಕಾರ ನಿಮ್ದು.. ಲಕ್ಷಾಂತರ ರೂಪಾಯಿಗೆ ಗ್ರಾ.ಪಂ. ಸದಸ್ಯ ಸ್ಥಾನ ಹರಾಜು

|

Updated on: Dec 10, 2020 | 9:39 AM

ಲಕ್ಷಾಂತರ ರೂಪಾಯಿಗೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಹರಾಜು ಹಾಕಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಲಾಳನಕೆರೆಯಲ್ಲಿ ನಡೆದಿದೆ.

ದುಡ್ಡಿದ್ರೆ ಅಧಿಕಾರ ನಿಮ್ದು.. ಲಕ್ಷಾಂತರ ರೂಪಾಯಿಗೆ ಗ್ರಾ.ಪಂ. ಸದಸ್ಯ ಸ್ಥಾನ ಹರಾಜು
ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಹರಾಜು ಹಾಕುತ್ತಿರುವುದು
Follow us on

ಮಂಡ್ಯ: ಡಿಸೆಂಬರ್ 22 ಹಾಗೂ ಡಿಸೆಂಬರ್ 27ರಂದು ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಗೆ ಸಿದ್ಧತೆಗಳು ಶುರುವಾಗಿವೆ. ನಿಧಾನವಾಗಿ ಚುನಾವಣೆ ಕಣ ರಂಗೇರುತ್ತಿದೆ. ಆದರೆ ಈ ನಡುವೆ ಲಕ್ಷಾಂತರ ರೂಪಾಯಿಗೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಹರಾಜು ಹಾಕಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಲಾಳನಕೆರೆಯಲ್ಲಿ ನಡೆದಿದೆ.

ಹತ್ತಾರು ಜನ ಅಭ್ಯರ್ಥಿಗಳು ಚುನಾವಣೆಗೆ ನಿಂತು ಅದರಲ್ಲಿ ಒಬ್ಬರು ಗೆಲ್ಲಬೇಕು. ಇದು ಚುನಾವಣೆಯ ನಿಯಮ. ಆದರೆ ಲಾಳನಕೆರೆ ಗ್ರಾಮ ಪಂಚಾಯಿತಿ ಚುನಾವಣೆ ವಿಚಾರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ.

ಸಂತೆಯಲ್ಲಿ ಮೇಕೆ ಹರಾಜು ಕೂಗುವ ರೀತಿ‌ ಗ್ರಾಮದ ಮನೆಯೊಂದರಲ್ಲಿ ಕುಳಿತು ಲಕ್ಷಾಂತರ ರೂಪಾಯಿಗೆ ಗ್ರಾ.ಪಂ. ಸದಸ್ಯ ಸ್ಥಾನವನ್ನು ಗ್ರಾಮಸ್ಥರು ಹರಾಜು ಕೂಗಿದ್ದಾರೆ. ಹಣ ಪಡೆದು ಸದಸ್ಯರ ಅವಿರೋಧ ಆಯ್ಕೆಗೆ ಸಿದ್ಧತೆ ನಡೆಸಿದ್ದಾರೆ. ಗ್ರಾ.ಪಂ. ಸ್ಥಾನಗಳ ಹರಾಜು ಹಾಕಿದ ವಿಡಿಯೋ ವೈರಲ್ ಆಗಿದೆ.

₹ 26 ಲಕ್ಷಕ್ಕೆ ನಾಲ್ಕು ಗ್ರಾ.ಪಂ. ಕ್ಷೇತ್ರಗಳು ಸೇಲ್

Published On - 7:32 am, Wed, 9 December 20