AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಲಕಾಡಿನ ಪಂಚಲಿಂಗ ದರ್ಶನಕ್ಕೆ ಹೊರಗಿನವರಿಗೆ ಪ್ರವೇಶವಿಲ್ಲ: ಜಿಲ್ಲಾಡಳಿತದ ಖಡಕ್ ನಿರ್ಧಾರ

ಜಿಲ್ಲೆಯ ತಲಕಾಡಿನಲ್ಲಿ ನಡೆಯುವ ಪಂಚಲಿಂಗ ದರ್ಶನಕ್ಕೆ ಜಿಲ್ಲಾಡಳಿತ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯ ವರದಿ ಕಡ್ಡಾಯಗೊಳಿಸಿದೆ. ಅಲ್ಲದೇ, ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೇತೃತ್ವದಲ್ಲಿ ನಡೆದ ಸಭೆ ಈ ನಿರ್ಧಾರ ಕೈಗೊಂಡಿದೆ.

ತಲಕಾಡಿನ ಪಂಚಲಿಂಗ ದರ್ಶನಕ್ಕೆ ಹೊರಗಿನವರಿಗೆ ಪ್ರವೇಶವಿಲ್ಲ: ಜಿಲ್ಲಾಡಳಿತದ ಖಡಕ್ ನಿರ್ಧಾರ
ತಲಕಾಡು
guruganesh bhat
|

Updated on:Dec 10, 2020 | 12:56 PM

Share

ಮೈಸೂರು: ಜಿಲ್ಲೆಯ ತಲಕಾಡಿನಲ್ಲಿ ನಡೆಯುವ ಪಂಚಲಿಂಗ ದರ್ಶನಕ್ಕೆ ಸ್ಥಳಿಯ ನಿವಾಸಿಗಳಿಗೆ ಮಾತ್ರ ಪಂಚಲಿಂಗ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ತಲಕಾಡು, ಬಿ.ಶೆಟ್ಟಿಹಳ್ಳಿ, ಹೊಳೆಸಾಲು ಗ್ರಾಮಪಂಚಾಯಿತಿ ವ್ಯಾಪ್ತಿಯ ಸ್ಥಳಿಯರಿಗಷ್ಟೆ ಅವಕಾಶ ನೀಡಲಾಗುತ್ತಿದೆ. ಜೊತೆಗೆ, ಕೊರೊನಾ ನೆಗೆಟಿವ್ ವರದಿ ತಂದವರಿಗಷ್ಟೇ ದರ್ಶನ ಅವಕಾಶ ನೀಡಲಾಗಿದೆ.ಮಾಸ್ಕ್ ಧರಿಸದವರಿಗೆ ದರ್ಶನಕ್ಕೆ ಅನುಮತಿ ನೀಡುತ್ತಿಲ್ಲ.ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೇತೃತ್ವದಲ್ಲಿ ನಡೆದ ಸಭೆ ಈ ನಿರ್ಧಾರ ಕೈಗೊಂಡಿದೆ.

ವೈದ್ಯರ ತಂಡದ ನಿಯೋಜನೆ 5 ದೇವಾಲಯಗಳು ಬಳಿ 10 ಜನರ ವೈದ್ಯರ ತಂಡ ನಿಯೋಜನೆ ಮಾಡಲಾಗಿದೆ. ಆ್ಯಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಯನ್ನು ಸಹ ಸ್ಥಳದಲ್ಲಿ ನಿಯೋಜಿಸಲಾಗಿದೆ.ಡಿ.14ರಂದು ಸಿಎಂ ಬಿ ಎಸ್ ಯಡಿಯೂರಪ್ಪ ಆಗಮಿಸಲಿರುವ ಕಾರಣ ಭದ್ರತೆ ಕಲ್ಪಿಸಲಾಗಿದೆ.

ಹೊರಗಿನವರಿಗೆ ದರ್ಶನವಿಲ್ಲ ತಲಕಾಡು, ಬಿ. ಶೆಟ್ಟಹಳ್ಳಿ, ಹೊಳೆಸಾಲು ಗ್ರಾಮ ಪಂಚಾಯತಿ ವಾಸಿಗಳ ಸಂಖ್ಯೆಯೇ 35 ಸಾವಿರ. ಹೊರಗಿನವರಿಗೆ ಪ್ರವೇಶ ನೀಡಿದರೆ ಜನಸಂದಣಿಯಾಗುವ ಸಾಧ್ಯತೆಯಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನ ಮೇರೆಗೆ ಪ್ರತಿ ದಿನ 1000 ಜನರಿಗೆ ಡಿ.14 ರಂದು 1500 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ದರ್ಶನಕ್ಕೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯ ವರದಿ ತರುವುದನ್ನು ಕಡ್ಡಾಯಗೊಳಿಸಲಾಗಿದೆ.

ಸ್ಥಳೀಯರು ಮಧ್ಯಾಹ್ನ ಮೂರರೊಳಗೆ ದರ್ಶನ ಮಾಡಿ.. ಸ್ಥಳೀಯರಿಗೆ ಮಧ್ಯಾಹ್ನ 3 ಗಂಟೆಯೊಳಗೆ ದರ್ಶನ ಪಡೆಯಲು ಸೂಚಿಸಲಾಗಿದೆ. ಭದ್ರತಾ ಸಿಬ್ಬಂದಿಯ ಕೊರತೆ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

ಗ್ರಾಮ ಪಂಚಾಯಿತಿ ಚುನಾವಣೆಯೂ ಕಾರಣ.. ಗ್ರಾ ಪಂ ಚುನಾವಣಾ ಭದ್ರತೆಗೆ ಹೆಚ್ಚಿನ ಸಿಬ್ಬಂದಿಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪಂಚಲಿಂಗ ದರ್ಶನಕ್ಕೆ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸುವುದು ಕಷ್ಟವಾಗಲಿದೆ. ಹೀಗಾಗಿ ಈ ನಿರ್ಧಾರಕ್ಕೆ ಜಿಲ್ಲಾಡಳಿತ ಬಂದಿದೆ.

Published On - 6:26 am, Wed, 9 December 20