ತೆರೆದ ಬಾವಿಗೆ ಬಿದ್ದು ಇಬ್ಬರು ಮಕ್ಕಳ ಸಾವು

ಬೆಳಗಾವಿಯ ಬೆಕ್ಕಿನಕೇರಿ ಗ್ರಾಮದಲ್ಲಿ ಆಟವಾಡುತ್ತಿದ್ದ ಇಬ್ಬರು ಬಾಲಕರು ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ತೆರೆದ ಬಾವಿಗೆ ಬಿದ್ದು ಇಬ್ಬರು ಮಕ್ಕಳ ಸಾವು
ಮಕ್ಕಳು ಬಿದ್ದು ಸಾವನ್ನಪ್ಪಿದ ತೆರೆದ ಬಾವಿ
guruganesh bhat

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 08, 2020 | 8:08 PM

ಬೆಳಗಾವಿ: ಆಡಲು ಹೋಗಿದ್ದ ಮಕ್ಕಳು ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬೆಕ್ಕಿನಕೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಉತ್ಸಾಹ, ಉಮೇದಿನ ರೂಪಕವೇ ಆಗಿದ್ದ ಇಬ್ಬರು ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಕೇಳಿ ಗ್ರಾಮಸ್ಥರು ಮರುಗುತ್ತಿದ್ದಾರೆ.

ಬೆಕ್ಕಿನಕೇರಿಯ 10 ವರ್ಷದ ಲೋಕೇಶ್ ಪಾಟೀಲ್ ಮತ್ತು 7 ವರ್ಷದ ನಿಖಿಲ್ ಬೊಂದ್ರೆ ಸಾವನ್ನಪ್ಪಿದ ಬಾಲಕರು. ಮನೆ ಬಳಿಯ ಚಿಕ್ಕ ಬಾವಿ ಹತ್ತಿರ ಅಟವಾಡುತ್ತಿದ್ದ ಹುಡುಗರು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಲಾ ಆವರಣದಲ್ಲಿ ತೋಡಿದ್ದ ಗುಂಡಿಗೆ ಬಿದ್ದು 3 ಬಾಲಕರ ಸಾವು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada