ಬೆಂಗಳೂರಲ್ಲಿ ಎರಡು ಕಡೆ ಸಿಸಿಬಿ ದಾಳಿ; ವೇಶ್ಯಾವಾಟಿಕೆ, ಬೆಟ್ಟಿಂಗ್ ದಂಧೆಗೆ ಬ್ರೇಕ್
ರಾಮಮೂರ್ತಿನಗರದಲ್ಲಿ ವಿದೇಶಿಗರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ಸಿಸಿಬಿ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದಾರೆ. ಈ ವೇಳೆ ನಾಲ್ವರು ವಿದೇಶಿ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.
ಬೆಂಗಳೂರು: ನಗರದಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಮಂಗಳವಾರ ಎರಡು ಕಡೆ ಪ್ರತ್ಯೇಕ ದಾಳಿ ನಡೆಸಿದೆ. ಒಂದು ಕಡೆ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಧೆ ಮಟ್ಟ ಹಾಕಲಾಗಿದ್ದು, ಮತ್ತೊಂದೆಡೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದವರಿಗೆ ಬಿಸಿ ಮುಟ್ಟಿಸಲಾಗಿದೆ.
ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ರಾಮಮೂರ್ತಿ ನಗರದಲ್ಲಿ ವಿದೇಶಿಗರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಸಿಸಿಬಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದಾರೆ. ಈ ವೇಳೆ ನಾಲ್ವರು ವಿದೇಶಿ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಬೆಟ್ಟಿಂಗ್ ದಂಧೆಗೆ ಬ್ರೇಕ್: ಇನ್ನು, ನಿನ್ನೆ ಆಸ್ಟ್ರೇಲಿಯಾ ಹಾಗೂ ಭಾರತದ ನಡುವೆ ಅಂತಿಮ ಟಿ-20 ಪಂದ್ಯ ನಡೆದಿತ್ತು. ಈ ಪಂದ್ಯಕ್ಕೆ ಬೆಟ್ಟಿಂಗ್ ಕಟ್ಟುತ್ತಿದ್ದ ದಂಧೆಯನ್ನು ಕೂಡ ಸಿಸಿಬಿ ಮಟ್ಟ ಹಾಕಿದೆ. ಬೆಂಗಳೂರಿನಲ್ಲಿ ನಿನ್ನೆ ದೊಡ್ಡ ಮಟ್ಟದಲ್ಲಿ ಬೆಟ್ಟಿಂಗ್ ನಡೆಯುತ್ತಿತ್ತು. ಈ ವೇಳೆ ದಾಳಿ ನಡೆಸಿದ ಸಿಸಿಬಿ, ₹ 4.5 ಲಕ್ಷ ರೂಪಾಯಿ ವಶಕ್ಕೆ ಪಡೆದಿದೆ.
ಒಂದೇ ದಿನ 21 ಜನರ ಬಂಧನ: ಬೆಂಗಳೂರಿನಲ್ಲಿ ಆಗಸ್ಟ್ 30ರಂದು ಜೂಜಾಡುತ್ತಿದ್ದವರ ಮೇಲೆ ಮೇಲೆ ಸಿಸಿಬಿ ದಾಳಿ ನಡೆಸಿ 21 ಜನರು ಬಂಧಿಸಿತ್ತು. ಅಲ್ಲದೆ, ದೊಡ್ಡ ಪ್ರಮಾಣದಲ್ಲಿ ಹಣ ಕೂಡ ಜಪ್ತಿ ಮಾಡಲಾಗಿತ್ತು. ಈ ದಾಳಿ ವೇಳೆ ಮನೆಯ ಮಾಲೀಕ ಕೂಡ ಅರೆಸ್ಟ್ ಆಗಿದ್ದ.
2 riads done by CCB..one prostitution racket unearthed, brothel raided in Rammurtynagar & 4 foreign national women rescued..appropriate action under Foriegners Act wud b taken..& cricket betting being done during Ind-Aus T20 busted..Rs 4.5 lakhs seized.. @CPBlr @BlrCityPolice
— Sandeep Patil IPS (@ips_patil) December 9, 2020
ಸಿಸಿಬಿ ವಿಚಾರಣೆ ವೇಳೆ ಬಯಲಾಯ್ತು ಹ್ಯಾ”ಕಿಂಗ್” ಶ್ರೀಕಿಯ ಮತ್ತೊಂದು ಕೋಡ್..