ಗಣಿ ಭೂ ವಿಜ್ಞಾನ ಸಚಿವರ ಕ್ಷೇತ್ರದಲ್ಲೇ ಭೂಕುಸಿತ: ಗುಣಿಯಲ್ಲಿ ಬಿದ್ದ ದಂಪತಿ ಪಾರು

  • TV9 Web Team
  • Published On - 10:15 AM, 8 Feb 2020
ಗಣಿ ಭೂ ವಿಜ್ಞಾನ ಸಚಿವರ ಕ್ಷೇತ್ರದಲ್ಲೇ ಭೂಕುಸಿತ: ಗುಣಿಯಲ್ಲಿ ಬಿದ್ದ ದಂಪತಿ ಪಾರು

ಗದಗ: ಗಣಿ ಮತ್ತು ಭೂವಿಜ್ಞಾನ ಸಚಿವ ಸಿಸಿ ಪಾಟೀಲ್ ತವರು ಕ್ಷೇತ್ರದಲ್ಲಿ ಮತ್ತೆ ಭೂಕುಸಿತ ಉಂಟಾಗಿದೆ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ನರಗುಂದ ಪಟ್ಟಣದ ಕಸಬಾ ಓಣಿಯ ಮನೆಯೊಂದರಲ್ಲಿ ಏಕಾಏಕಿ ಭೂಮಿ ಕುಸಿದಿದೆ. ಕುಟುಂಬಸ್ಥರ ಸಮಯ ಪ್ರಜ್ಞೆಯಿಂದ ಭೂಕುಸಿತದಲ್ಲಿ ಸಿಲುಕಿದ್ದ ಶರಣಪ್ಪ, ರೇಣವ್ವ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಡುಗೆ ಮನೆಯಲ್ಲಿ ಸುಮಾರು 10 ಅಡಿ‌ ಆಳ ಭೂಮಿ ಕುಸಿದಿದೆ. ಭೂಮಿಯಲ್ಲಿ ಸಿಲುಕಿದ್ದ ಶರಣಪ್ಪ, ರೇಣವ್ವ ದಂಪತಿಯನ್ನು ಹಗ್ಗದ ಸಹಾಯದಿಂದ ಕುಟುಂಬ ಸದಸ್ಯರು ಮೇಲೆತ್ತಿದ್ದಾರೆ. ಈ ವೇಳೆ ಭೂಕುಸಿತದಲ್ಲಿ ಬಿದ್ದು ಪುತ್ರ ಸೋಮಣ್ಣಗೆ ಗಾಯಗಳಾಗಿದೆ. ಕುಸಿದ ಭೂಮಿಯಲ್ಲಿ ನೀರು ಬರುತ್ತಿದೆ.

ಎರಡು ದಿನಗಳ ಹಿಂದೆಯಷ್ಟೇ ಕುಸಿದ ಭೂಮಿಯಿಂದ ಸ್ವಲ್ಪದರಲ್ಲೇ ಮಹಿಳೆ ಪಾರಾಗಿದ್ದರು. ಇದೀಗ ಮತ್ತೆ ಭೂಮಿ ಕುಸಿದಿದೆ. ಅಲ್ಲದೆ, ಒಂದೇ ತಿಂಗಳಲ್ಲಿ ಮೂರನೇ ಬಾರಿ ಭೂಮಿ ಕುಸಿದಿದ್ದು, ನರಗುಂದ ಪಟ್ಟಣದ ಜನ ಕಂಗಾಲಾಗಿದ್ದಾರೆ. ಪ್ರತಿದಿನ ಭಯ, ಆತಂಕದಲ್ಲಿ ಜನರು ಜೀವನ ಸಾಗಿಸುತ್ತಿದ್ದಾರೆ.