ಬೆಂಗಳೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ರಾಜ್ಯದ 3700 ಮುಜರಾಯಿ ವ್ಯಾಪ್ತಿಗೆ ಒಳಪಡುವ ಪುರಾತನ ಶಿವನ ದೇವಾಲಯಗಳಿಗೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ನೇತೃತ್ವದಲ್ಲಿ ಪವಿತ್ರ ಗಂಗಾಜಲ ವಿತರಣಾ ಕಾರ್ಯಕ್ರಮಕ್ಕೆ ನಾಳೆ ಚಾಲನೆ ನೀಡಲಾಗುತ್ತಿದೆ. ನಗರದ ಬಳೆಪೇಟೆ ಬಳಿ ಇರುವ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ಮಹರ್ಷಿ ಆನಂದ್ ಗುರೂಜೀ ಮತ್ತು ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಲೋಕಸಭಾ ಸದಸ್ಯರಾದ ಪಿ.ಸಿ. ಮೋಹನ್ ಚಾಲನೆ ನೀಡಲಿದ್ದಾರೆ.
ರಾಜ್ಯದ ಜನತೆಗೆ ಕೊಟ್ಟ ಮಾತಿನ ಪ್ರಕಾರ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹರಿದ್ವಾರದಿಂದ ಪವಿತ್ರ ಗಂಗಾಜಲವನ್ನು ದಿನಾಂಕ 01-3-22ರಂದು ನಡೆಯುವ ಮಹಾ ಶಿವರಾತ್ರಿ ಪ್ರಯುಕ್ತ ಶಿವ ದೇವಸ್ಥಾನಗಳಿಗೆ ಹರಿದ್ವಾರದಿಂದ ತಂದ ಪವಿತ್ರ ಗಂಗಾಜಲವನ್ನು ಕಲುಹಿಸಲಾಗುವುದು. ಸುಮಾರು 40 ಸಾವಿರ ಲೀಟರ್ ಗಂಗಾಜಲವನ್ನು ಹರಿದ್ವಾರದಿಂದ ತರಲಾಗಿದ್ದು, ಪವಿತ್ರ ಗಂಗೆಯನ್ನು ಹೊತ್ತು ವಾಹನಗಳು ನಗರಕ್ಕೆ ಆಗಮಿಸಲಿವೆ.
ರಾಜ್ಯದ ಎಲ್ಲಾ ಭಾಗಗಳಲ್ಲಿರುವಂತಹ ಸರಿ ಸುಮಾರು 3700 ಪುರಾತನ ಶಿವನ ದೇವಾಲಯಗಳಲ್ಲಿರವ ಶಿವನ ಮೂರ್ತಿಗೆ ಅಭಿಷೇಕ ಮತ್ತು ತೀರ್ಥ ವಿನಿಯೋಗಕ್ಕಾಗಿ ಎಲ್ಲಾ ಭಕ್ತಾದಿಗಳಿಗೆ ಪವಿತ್ರ ಗಂಗಾಜಲ ತಲುಪಿಸುವ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಿಗೆ ಸುಮಾರು 28 ವಾಹನಗಳಲ್ಲಿ ಸರಬರಾಜು ಮಾಡಲಾಗುತ್ತದೆ. ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಶಿವಾಲಯಗಳಿಗೂ ಮತ್ತು ಖಾಸಗಿ ಒಡೆತನದಲ್ಲಿರುವ ಶಿವನ ದೇವಸ್ಥಾನಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:
Puneeth Rajkumar: ‘ಜೇಮ್ಸ್’ ಚಿತ್ರದಲ್ಲಿ ಪುನೀತ್ ಸಖತ್ ಮಾಸ್ ಆ್ಯಂಡ್ ಕ್ಲಾಸ್; ಇಲ್ಲಿವೆ ಫೋಟೋಗಳು