ವಿಜಯ್ ದೇವರಕೊಂಡ ಹಾಗೂ ಅನನ್ಯ ಪಾಂಡೆ ಸಿನಿಮಾಗೆ ಟೈಟಲ್ ಫೈನಲ್ ಆಗಿದೆ. ಚಿತ್ರಕ್ಕೆ LIGER ಎಂದು ಹೆಸರಿಡಲಾಗಿದ್ದು, ವಿಜಯ್ ಬಾಕ್ಸಿಂಗ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇಂದು ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಈ ವೇಳೆ ಟೈಟಲ್ ಕೂಡ ರಿಲೀಸ್ ಮಾಡಿದೆ ಚಿತ್ರತಂಡ. ವಿಶೇಷ ಎಂದರೆ, ಈ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.
ಈ ಬಗ್ಗೆ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಟ್ವೀಟ್ ಮಾಡಿದ್ದಾರೆ. ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿರುವ ಚಿತ್ರದ ಹೆಸರು ಲೈಗರ್. ಚಿತ್ರವನ್ನು ಜಗನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂನಲ್ಲಿ ಚಿತ್ರ ತೆರೆಗೆ ಬರುತ್ತಿದೆ ಎಂದು ಬರೆದುಕೊಂಡಿದ್ದಾರೆ.
Presenting LIGER, starring the ruler of big screens & hearts – Vijay Deverakonda & the fiery Ananya Panday. Directed by the exceptionally skilled Puri Jagannadh, we can't wait to let the world witness this story in 5 languages – Hindi, Telugu, Tamil, Kannada & Malayalam. #Liger pic.twitter.com/6hOBAB2wgJ
— Karan Johar (@karanjohar) January 18, 2021
ಫಸ್ಟ್ ಪೋಸ್ಟರ್ನಲ್ಲಿ ವಿಜಯ್ ದೇವರಕೊಂಡ ಬಾಕ್ಸಿಂಗ್ ಗ್ಲೌಸ್ ತೊಟ್ಟು ಕಾಣಿಸಿಕೊಂಡಿದ್ದಾರೆ. ದೇವರಕೊಂಡ ಬಾಕ್ಸಿಂಗ್ ಉಡುಗೆ ಹಾಕಿರುವುದರಿಂದ ಇದು ಕ್ರೀಡಾಧಾರಿತ ಚಿತ್ರ ಎನ್ನುವುದು ಖಚಿತವಾದಂತಾಗಿದೆ.
Humbly announcing our arrival Pan India!
Nation wide madness Guaranteed.
Produced by @KaranJohar @DharmaMovies @Charmmeofficial @PuriConnects
A @purijagan Film!#LIGER#SaalaCrossBreed pic.twitter.com/GWrLKuLrJu
— Vijay Deverakonda (@TheDeverakonda) January 18, 2021
ಅಷ್ಟಕ್ಕೂ LIGER ಶಬ್ದದ ಅರ್ಥವೇನು ಎನ್ನುವ ಪ್ರಶ್ನೆಗೂ ಉತ್ತರವಿದೆ. ಸಿಂಹ ಹಾಗೂ ಹುಲಿಯಿಂದ ಹುಟ್ಟಿದ ತಳಿಗೆ LIGER ಎಂದು ಕರೆಯಲಾಗುತ್ತದೆ. ಈ ಕಾರಣಕ್ಕೆ ಅವರ ಪೋಸ್ಟರ್ ಹಿಂಭಾಗದಲ್ಲಿ ಅರ್ಧ ಹುಲಿ ಅರ್ಧ ಸಿಂಹದ ಚಿತ್ರವಿದೆ.
A proud venture of @PuriConnects n @DharmaMovies ??
Presenting Our @thedeverakonda as #LIGER?#SaalaCrossbreed???
A film by #PuriJagannadh@karanjohar @ananyapanday @apoorva1972 @meramyakrishnan @RonitBoseRoy @IamVishuReddy
❤️ pic.twitter.com/mH3DPHWwdZ— Charmme Kaur (@Charmmeofficial) January 18, 2021