ಪೊಲೀಸರು-ಕೊಲೆ ಆರೋಪಿಗಳ ನಡುವೆ ಫೈರಿಂಗ್​; ಆರೋಪಿಯ ಮುಖಕ್ಕೇ ಬಿತ್ತು ಎಎಸ್​ಐ ಹೊಡೆದ ಗುಂಡು

ಆರೋಪಿಗಳ ಬಳಿ ಇದ್ದ ಎಲ್ಲ ಮಾರಕಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಸದ್ಯ ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • TV9 Web Team
  • Published On - 16:30 PM, 18 Jan 2021
ಆರೋಪಿ ಮತ್ತು ಅವನ ಬಳಿ ಇದ್ದ ಪಿಸ್ತೂಲ್​

ಬೆಂಗಳೂರು: ಪೊಲೀಸರು ಮತ್ತು ಕೊಲೆ ಪ್ರಕರಣದ ಆರೋಪಿಗಳ ನಡುವೆ ಗುಂಡಿನ ಚಕಮಕಿ ನಡೆದ ಘಟನೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ಜಿ.ಹಳ್ಳಿ ಸುಲ್ತಾನ್​ನನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಲು ಕೆ.ಜಿ.ಹಳ್ಳಿ ಪೊಲೀಸರು ತೆರಳಿದ್ದಾಗ ​ಘಟನೆ ನಡೆದಿದೆ.

ಅಪಾರ್ಟ್​ಮೆಂಟ್​ವೊಂದರಲ್ಲಿ ಆರೋಪಿಗಳಾದ ಮೆಹರಜ್​ ಮತ್ತು ಅಬ್ರಹಾರ್ ಇದ್ದ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು, ಅವರನ್ನು ಬಂಧಿಸಲು ತೆರಳಿದ್ದರು. ಆದರೆ ಆರೋಪಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಪೊಲೀಸರೂ ಫೈರಿಂಗ್​ ಮಾಡಿದ್ದಾರೆ.

ಈ ವೇಳೆ ಎಎಸ್​ಐ ದಿನೇಶ್​ ಪಾಟೀಲ್ ಹೊಡೆದ ಗುಂಡು, ಮೆಹರಜ್ ಮುಖಕ್ಕೆ ತಗುಲಿದೆ. ಇವರಿಬ್ಬರ ವಿರುದ್ಧ ಒಟ್ಟು 36 ವಿವಿಧ ಕೇಸ್​ಗಳು ಇದ್ದವು. ಆರೋಪಿಗಳ ಬಳಿ ಇದ್ದ ಎಲ್ಲ ಮಾರಕಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಸದ್ಯ ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಂಪೌಂಡ್ ಒಳಗಿದ್ದ 8 ಬೈಕ್​ಗಳಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಖದೀಮನ ದುಷ್ಕೃತ್ಯ CCTVಯಲ್ಲಿ ಸೆರೆ