MSIL ಮದ್ಯದಂಗಡಿ ಧಗಧಗ! ಲಕ್ಷಾಂತರ ಮೌಲ್ಯದ ಮದ್ಯಕ್ಕೆ ಬೆಂಕಿಯಿಟ್ಟಿದ್ದು ಯಾರು?
ಚಾಮರಾಜನಗರ: ಇದು ನಿಜಕ್ಕೂ ಮದ್ಯಪ್ರೇಮಿಗಳಿಗೆ ಭಾರೀ ಬೇಸರ ತರಿಸುವ ಸಂಗತಿ. ಕಣ್ಣೆದುರೇ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಅಗ್ನಿಗಾಹುತಿಯಾದ್ರೆ, ಕುಡುಕರ ಹೊಟ್ಟೆ ಭಗ್ ಅನ್ನಲ್ವಾ? ಹೌದು ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಎಂಎಸ್ಐಎಲ್ ಮದ್ಯದಂಗಡಿಗೆ ಬೆಂಕಿ ಬಿದ್ದಿದೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯದಂಗಡಿಗೆ ಬೆಂಕಿ ಬಿದ್ದಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಥವಾ ಕಳೆದ ಎರಡು ತಿಂಗಳಿನಿಂದ ಮದ್ಯ ಸಿಗದಿದ್ದಕ್ಕೆ ಯಾರೋ ಕಿರಾತಕ ಇಂತಹ ಕುಕೃತ್ಯ ಎಸಗಿದ್ದಾನಾ ಎಂಬ ಅನುಮಾನವೂ ಮೂಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ […]
ಚಾಮರಾಜನಗರ: ಇದು ನಿಜಕ್ಕೂ ಮದ್ಯಪ್ರೇಮಿಗಳಿಗೆ ಭಾರೀ ಬೇಸರ ತರಿಸುವ ಸಂಗತಿ. ಕಣ್ಣೆದುರೇ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಅಗ್ನಿಗಾಹುತಿಯಾದ್ರೆ, ಕುಡುಕರ ಹೊಟ್ಟೆ ಭಗ್ ಅನ್ನಲ್ವಾ? ಹೌದು ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಎಂಎಸ್ಐಎಲ್ ಮದ್ಯದಂಗಡಿಗೆ ಬೆಂಕಿ ಬಿದ್ದಿದೆ.
ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯದಂಗಡಿಗೆ ಬೆಂಕಿ ಬಿದ್ದಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಥವಾ ಕಳೆದ ಎರಡು ತಿಂಗಳಿನಿಂದ ಮದ್ಯ ಸಿಗದಿದ್ದಕ್ಕೆ ಯಾರೋ ಕಿರಾತಕ ಇಂತಹ ಕುಕೃತ್ಯ ಎಸಗಿದ್ದಾನಾ ಎಂಬ ಅನುಮಾನವೂ ಮೂಡಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಆಕಸ್ಮಿಕವೇ, ಉದ್ದೇಶ ಪೂರ್ವಕವಾಗಿ ಹಾಕಲಾಗಿದೆಯೇ ತನಿಖೆ ನಡೆಸುವಂತೆ ಸ್ಥಳೀಯರ ಆಗ್ರಹಿಸುತ್ತಿದ್ದಾರೆ.
Published On - 1:20 pm, Mon, 11 May 20