AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್ ಸಿಟಿಯಲ್ಲಿ ವೃದ್ಧ ದಂಪತಿಯನ್ನ ಹತ್ಯೆ ಮಾಡಿದ್ದ ಆರೋಪಿ ಅಂದರ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ವೃದ್ಧ ದಂಪತಿಯ ಡಬಲ್ ಮರ್ಡರ್ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ತಡರಾತ್ರಿ ಜೆ.ಪಿ.ನಗರದ ವೃದ್ಧ ದಂಪತಿ ಗೋವಿಂದಯ್ಯ ಹಾಗೂ ಶಾಂತಮ್ಮ ಕೊಲೆಯಾಗಿತ್ತು. ಪ್ರಕರಣ ಸಂಬಂಧ ದಂಪತಿಯ ಮೊದಲ ಪುತ್ರ ನವೀನ್ ಬಾಮೈದ ರಾಕೇಶ್ ಅಲಿಯಾಸ್ ರಾಕ್ಸ್​ನನ್ನು ಪೊಲೀಸರು ಬಂಧಿಸಿದ್ದಾರೆ. 2008 ರಲ್ಲಿ ಪವಿತ್ರ ಎಂಬುವರನ್ನ ವೃದ್ಧ ದಂಪತಿಯ ಪುತ್ರ ನವೀನ್ ಮದುವೆಯಾಗಿದ್ದ. ಆ ಬಳಿಕ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನವೀನ್ ಪತ್ನಿ ಪವಿತ್ರ ಮನೆ ಬಿಟ್ಟು […]

ಸಿಲಿಕಾನ್ ಸಿಟಿಯಲ್ಲಿ ವೃದ್ಧ ದಂಪತಿಯನ್ನ ಹತ್ಯೆ ಮಾಡಿದ್ದ ಆರೋಪಿ ಅಂದರ್
ಸಾಧು ಶ್ರೀನಾಥ್​
|

Updated on: May 11, 2020 | 2:25 PM

Share

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ವೃದ್ಧ ದಂಪತಿಯ ಡಬಲ್ ಮರ್ಡರ್ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ತಡರಾತ್ರಿ ಜೆ.ಪಿ.ನಗರದ ವೃದ್ಧ ದಂಪತಿ ಗೋವಿಂದಯ್ಯ ಹಾಗೂ ಶಾಂತಮ್ಮ ಕೊಲೆಯಾಗಿತ್ತು. ಪ್ರಕರಣ ಸಂಬಂಧ ದಂಪತಿಯ ಮೊದಲ ಪುತ್ರ ನವೀನ್ ಬಾಮೈದ ರಾಕೇಶ್ ಅಲಿಯಾಸ್ ರಾಕ್ಸ್​ನನ್ನು ಪೊಲೀಸರು ಬಂಧಿಸಿದ್ದಾರೆ.

2008 ರಲ್ಲಿ ಪವಿತ್ರ ಎಂಬುವರನ್ನ ವೃದ್ಧ ದಂಪತಿಯ ಪುತ್ರ ನವೀನ್ ಮದುವೆಯಾಗಿದ್ದ. ಆ ಬಳಿಕ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನವೀನ್ ಪತ್ನಿ ಪವಿತ್ರ ಮನೆ ಬಿಟ್ಟು ತೆರಳಿದ್ದರು. ತವರಿಗೆ ಮರಳಿದ್ದ ಪವಿತ್ರರನ್ನ ಕರೆತರುವಂತೆ ರಾಕೇಶ್​ಗೆ ನವೀನ್ ಕರೆ ಮಾಡಿದ್ದ. ಕೌಟುಂಬಿಕ ನ್ಯಾಯಾಲಯದ ಕೌನ್ಸೆಲಿಂಗ್ ಬಳಿಕ ಪವಿತ್ರ ಮನೆಗೆ ವಾಪಸ್ ಬಂದಿದ್ದರು.

ಇದೇ ವಿಚಾರವಾಗಿ ನವೀನ್ ಹಾಗೂ ರಾಕೇಶ್ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು. ಇದೇ ದ್ವೇಷದಿಂದ ನವೀನ್ ಬಾಮೈದ ಜೆ.ಪಿ.ನಗರದ ಮನೆಗೆ ಬಂದು ದಂಪತಿಯನ್ನು ಹತ್ಯೆ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿದ್ದ ಕೋಣನಕುಂಟೆ ಪೊಲೀಸರು ಆರೋಪಿ ರಾಕೇಶ್​ನನ್ನು ಬಂಧಿಸಿದ್ದಾರೆ.