ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋದವನ ಗತಿ ಏನಾಯಿತು ಗೊತ್ತಾ ?

ಕಲಬುರಗಿ: ತುಂಬಿ ಹರಿಯುತ್ತಿರುವ ಹಳ್ಳವನ್ನು ದಾಟಲು ಹೋಗಿ ನೀರಿನ ಸೆಳೆತೆಕ್ಕೆ ಸಿಕ್ಕು ಕೊಚ್ಚಿಹೊದ ಆಘಾತಕಾರಿ ಘಟನೆ ಕಲಬುರಗಿಯಲ್ಲಿ ಸಂಭವಿಸಿದೆ. ಹೌದು ಕಲುಬುರಗಿ ಜಿಲ್ಲೆ ಆಳಂದ ತಾಲೂಕಿನ ಹಡಗಲಿ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಹಡಗಲಿಯಿಂದ ಯಳಸಂಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮಳೆಯಿಂದಾಗಿ ಸಂಪೂರ್ಣವಾಗಿ ಜಲಾವೃತವಾಗಿದೆ. ಆದ್ರೂ ಪ್ಲಾಸ್ಟಿಕ್‌ ಕೊಡಗಳನ್ನು ಮಾರುವ ವ್ಯಕ್ತಿಯೊಬ್ಬ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿಯೇ ಬೈಕ್ ಮೇಲೆ ಕೊಡಗಳ ಸಮೇತ ಬ್ರೀಜ್ ದಾಟಲು ಮುಂದಾಗಿದ್ದಾನೆ. ಆಗ ಅರ್ಧ ದಾರಿ ದಾಟಿದಾಗ ನೀರಿನ ಸೆಳೆತ […]

ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋದವನ ಗತಿ ಏನಾಯಿತು ಗೊತ್ತಾ ?
Updated By:

Updated on: Jul 25, 2020 | 9:06 PM

ಕಲಬುರಗಿ: ತುಂಬಿ ಹರಿಯುತ್ತಿರುವ ಹಳ್ಳವನ್ನು ದಾಟಲು ಹೋಗಿ ನೀರಿನ ಸೆಳೆತೆಕ್ಕೆ ಸಿಕ್ಕು ಕೊಚ್ಚಿಹೊದ ಆಘಾತಕಾರಿ ಘಟನೆ ಕಲಬುರಗಿಯಲ್ಲಿ ಸಂಭವಿಸಿದೆ.

ಹೌದು ಕಲುಬುರಗಿ ಜಿಲ್ಲೆ ಆಳಂದ ತಾಲೂಕಿನ ಹಡಗಲಿ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಹಡಗಲಿಯಿಂದ ಯಳಸಂಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮಳೆಯಿಂದಾಗಿ ಸಂಪೂರ್ಣವಾಗಿ ಜಲಾವೃತವಾಗಿದೆ. ಆದ್ರೂ ಪ್ಲಾಸ್ಟಿಕ್‌ ಕೊಡಗಳನ್ನು ಮಾರುವ ವ್ಯಕ್ತಿಯೊಬ್ಬ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿಯೇ ಬೈಕ್ ಮೇಲೆ ಕೊಡಗಳ ಸಮೇತ ಬ್ರೀಜ್ ದಾಟಲು ಮುಂದಾಗಿದ್ದಾನೆ. ಆಗ ಅರ್ಧ ದಾರಿ ದಾಟಿದಾಗ ನೀರಿನ ಸೆಳೆತ ಹೆಚ್ಚಾದ ಪರಿಣಾಮ ಸೈಕಲ್‌ ಹಾಗೂ ಕೊಡಗಳ ಸಮೇತ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

ಆದ್ರೆ ಅವನ ಅದೃಷ್ಟ ಚೆನ್ನಾಗಿತ್ತು ಅಂತ ಕಾಣುತ್ತೆ. ಯಾಕಂದ್ರೆ ಸ್ಥಳದಲ್ಲೇ ಇದ್ದ ಗ್ರಾಮಸ್ಥರು ಸಮಯ ಪ್ರಜ್ಞೆ ಮೆರೆದು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

Published On - 4:41 pm, Fri, 24 July 20