ಬಾಗಲಕೋಟೆ: ಅನೈತಿಕ ಸಂಬಂಧ ಶಂಕೆಯಿಂದ ಪತ್ನಿಯನ್ನು ಪತಿ ಹತ್ಯೆಗೈದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ರಂಗನಾಥ ನಗರದಲ್ಲಿ ನಡೆದಿದೆ. ಮಂಜುಳಾ ಸಂದೀಪ ಬಣಪಟ್ಟಿ(24) ಕೊಲೆಯಾದ ಗರ್ಭಿಣಿ ಮಹಿಳೆ.
ಪತಿ ಸಂದೀಪ ಬಣಪಟ್ಟಿ ತನ್ನ ಗರ್ಭಿಣಿ ಪತ್ನಿ ಮಂಜುಳಾಗೆ ಬೇರೆಯವರ ಜೊತೆ ಅನೈತಿಕ ಸಂಬಂಧವಿದೆ ಎಂದು ಅನುಮಾನ ಪಟ್ಟಿದ್ದ. ಆದರೆ ಅವನ ಅನುಮಾನಕ್ಕೆ ಗರ್ಭಿಣಿ ಹೆಂಡತಿ ಬಲಿಯಾಗಿದ್ದಾಳೆ. ಹೆಂಡತಿಯನ್ನು ಕೊಂದು ಬಳಿಕ ತಾನೂ ಕಲ್ಲಿಗೆ ತಲೆ ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಾಟಕ ಆಡಿದ್ದಾನೆ. ಸ್ಥಳಕ್ಕೆ ಬಾದಾಮಿ ಠಾಣೆ ಪೊಲೀಸರು ಭೇಟಿ ನೀಡಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ಪತಿಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.