ಲಂಡನ್​ನಿಂದ ಬೆಂಗಳೂರಿಗೆ ಬಂದ ಮೂವರಿಗೆ ಕೊರೊನಾ ದೃಢ

| Updated By: ಸಾಧು ಶ್ರೀನಾಥ್​

Updated on: Dec 23, 2020 | 4:59 PM

ಬೆಂಗಳೂರು ಪೂರ್ವ ಒಬ್ಬರು, ಬೊಮ್ಮನಹಳ್ಳಿಯ ಇಬ್ಬರಿಗೆ ಕೊರೊನಾ ದೃಢವಾಗಿದೆ. ಪ್ರಾಥಮಿಕ ಸಂಪರ್ಕದಿಂದ ಮೂವರಿಗೆ ಕೊರೊನಾ ನೆಗೆಟಿವ್ ಬಂದಿದೆ. ಮೂವರು ಸೋಂಕಿತರ ಗಂಟಲುದ್ರವವನ್ನು ಹೆಚ್ಚಿನ ತಪಾಸಣೆಗೆ ನಿಮ್ಹಾನ್ಸ್​ಗೆ ಕಳುಹಿಸಲಾಗಿದೆ.

ಲಂಡನ್​ನಿಂದ ಬೆಂಗಳೂರಿಗೆ ಬಂದ ಮೂವರಿಗೆ ಕೊರೊನಾ ದೃಢ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ವೈರಸ್​ ಲಂಡನ್​ನಲ್ಲಿ ರೂಪಾಂತರವಾಗಿದೆ ಎನ್ನುವ ವಿಚಾರ ಸಾಕಷ್ಟು ಆತಂಕ ಮೂಡಿಸಿದೆ. ಈ ಬೆನ್ನಲ್ಲೇ ಇಂದಿನಿಂದ ಇಂಗ್ಲೆಂಡ್​ಗೆ ಹಾರಾಡುವ ಎಲ್ಲ ವಿಮಾನಗಳ ಮೇಲೆ ನಿರ್ಬಂಧ ಹೇರಲಾಗಿದೆ. ಈ ಮಧ್ಯೆ, ಲಂಡನ್​ನಿಂದ ಬಂದವರನ್ನು ಪರೀಕ್ಷೆಗೆ ಒಳಪಡಿಸುವ ಕಾರ್ಯವನ್ನು ಸರ್ಕಾರ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ.

ಲಂಡನ್​​ನಿಂದ ಬೆಂಗಳೂರಿಗೆ ಬಂದ ಮೂವರಿಗೆ ಕೊರೊನಾ ಸೋಂಕು ದೃಢವಾಗಿದೆ ಎಂದು ಟಿವಿ9ಗೆ ಬಿಬಿಎಂಪಿ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಹೇಳಿಕೆ ನೀಡಿದ್ದಾರೆ. ಇಂಗ್ಲೆಂಡ್​ನಿಂದ ಬೆಂಗಳೂರಿಗೆ 202 ಪ್ರಯಾಣಿಕರು ಬಂದಿದ್ದರು. ಈ ಪೈಕಿ 182 ಪ್ರಯಾಣಿಕರಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ. 182 ಪ್ರಯಾಣಿಕರಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು ಪೂರ್ವ ಒಬ್ಬರು, ಬೊಮ್ಮನಹಳ್ಳಿಯ ಇಬ್ಬರಿಗೆ ಕೊರೊನಾ ದೃಢವಾಗಿದೆ. ಪ್ರಾಥಮಿಕ ಸಂಪರ್ಕದಿಂದ ಮೂವರಿಗೆ ಕೊರೊನಾ ನೆಗೆಟಿವ್ ಬಂದಿದೆ. ಮೂವರು ಸೋಂಕಿತರ ಗಂಟಲು ದ್ರವವನ್ನು ಹೆಚ್ಚಿನ ತಪಾಸಣೆಗೆ ನಿಮ್ಹಾನ್ಸ್​ಗೆ ರವಾನೆ ಆಗಿದೆ. ಇದು ಹೊಸ ಕೊರೊನಾ ಪ್ರಭೇದವೇ ಎನ್ನುವ ಬಗ್ಗೆ ತಜ್ಞರು ಪರೀಕ್ಷೆ ನಡೆಸಲಿದ್ದಾರೆ.

ಭಾರತಕ್ಕೆ ಬಂತಾ ಬಣ್ಣ ಬದಲಿಸಿದ ಹೆಮ್ಮಾರಿ? ಬ್ರಿಟನ್‌ನಿಂದ ಚೆನ್ನೈ, ದೆಹಲಿಗೆ ಮರಳಿದವರಿಗೆ ಕೊರೊನಾ!