ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿರುವ ಟಿಬೆಟಿಯನ್ ಲಾಮಾ ಕ್ಯಾಂಪ್‌ನಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ. ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಸಾಂಪ್ರದಾಯಿಕವಾಗಿ ಲೋಸರ್ ಹಬ್ಬ ಆಚರಣೆ ಮಾಡಲಾಗಿದೆ. ಪ್ರತಿ ವರ್ಷ ಟಿಬೆಟ್‌ನಿಂದ ಅತಿಥಿಗಳು ಬರುತ್ತಿದ್ದರು. ಆದ್ರೆ ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಸ್ಥಳೀಯರಿಂದಲೇ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ.
ಟಿಬೆಟಿಯನ್ನರಿಗೆ ಹೊಸ ವರ್ಷದ ಸಂಭ್ರಮ
ಟಿಬೆಟಿಯನ್ನರು ಹೊಸ ವರ್ಷವನ್ನು ಲೋಸರ್ ಹಬ್ಬವಾಗಿ ಆಚರಿಸುತ್ತಾರೆ. ಈ ಹಬ್ಬವನ್ನು 15 ದಿನಗಳ ಕಾಲ ಆಚರಿಸಲಾಗುತ್ತದೆ. ಆದ್ರೆ ಮೊದಲ ಮೂರು ದಿನಗಳು ಅದ್ದೂರಿಯಾಗಿ ನಡೆಯುತ್ತೆ. ಇದು ಹೆಚ್ಚಾಗಿ ಫೆಬ್ರವರಿ ತಿಂಗಳಲ್ಲಿ ಹಾಗೂ ನೇಪಾಳ, ಟಿಬೆಟ್, ಸಿಕ್ಕಿಂ ಮತ್ತು ಭೂತಾನ್ನಲ್ಲಿ ಆಚರಿಸಲಾಗುತ್ತೆ. ಈ ಹಬ್ಬದಲ್ಲಿ ಪ್ರಾರ್ಥನೆ, ಸಮಾರಂಭ, ನೃತ್ಯ ಸೇರಿದಂತೆ ಅದ್ದೂರಿ ಆಚರಣೆಗಳನ್ನು ನೋಡಬಹುದು. ಆರಂಭದಲ್ಲಿ ಈ ಹಬ್ಬವನ್ನು ಹೆಚ್ಚಾಗಿ ರೈತರು ಆಚರಿಸುತ್ತಿದ್ದರು. ಬಳಿಕ ಲೋಸರ್ ಹಬ್ಬ ಹೊಸ ವರ್ಷದ ಆರಂಭದಲ್ಲಿ ಆಚರಿಸುವ ಬೌದ್ಧ ಧರ್ಮದ ಪ್ರಮುಖ ಹಬ್ಬವಾಯಿತು. ಲೋಸರ್ರನ್ನು ದೇವರಿಗೆ ಕೃತಜ್ಞತೆಯ ಸಂಕೇತವಾಗಿ ಆಚರಿಸಲಾಗುತ್ತೆ.
ಲೋಸರ್ ಅರ್ಥ
ಲೋ ಎಂಬ ಪದದ ಅರ್ಥ “ವರ್ಷ” ಮತ್ತು ಸಾರ್ ಎಂಬ ಪದವು “ಹೊಸ” ಎಂಬ ಅರ್ಥವನ್ನು ನೀಡುತ್ತದೆ. ಹೀಗಾಗಿ ಲೋಸರ್ ಪದದ ಅರ್ಥ ಹೊಸ ವರ್ಷವೆಂದು ವ್ಯಾಖ್ಯಾನಿಸಲಾಗಿದೆ.
ಇದನ್ನೂ ಓದಿ: Guru Sevalal Jayanti 2021 |ಸಂತ ಸೇವಾಲಾಲ್ ಜಯಂತ್ಯುತ್ಸವಕ್ಕೆ ಕ್ಷಣಗಣನೆ.. ಇಂದಿನಿಂದ 2 ದಿನ ನಡೆಯಲಿದೆ ಜಾತ್ರೆ