ನನ್ನ ಆತ್ಮಹತ್ಯೆಗೆ ಪ್ರತಾಪ್ ಸಿಂಹ ಕಾರಣವಲ್ಲ -KPCC ವಕ್ತಾರ ಎಂ.ಲಕ್ಷ್ಮಣ ಹೀಗೆ ಹೇಳಿದ್ದೇಕೆ?

ಮೈಸೂರು: ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ ಮಾಡಿದ್ದಾರೆ. ಎಂ.ಲಕ್ಷ್ಮಣ ರೋಲ್‌ಕಾಲ್‌ ಗಿರಾಕಿ ಎಂದು ಸಂಸದ ಪ್ರತಾಪ್ ಸಿಂಹ ಮಾಡಿದ್ದ ಆರೋಪಕ್ಕೆ ಸಂಬಂಧಿಸಿ ಲಕ್ಷ್ಮಣ ತಿರುಗೇಟು ನೀಡಿದ್ದಾರೆ. ಪ್ರತಾಪ್‌ ಸಿಂಹಗೆ ಲಕ್ಷ್ಮಣ ಚಾಲೆಂಜ್ ಪ್ರತಾಪ್ ಸಿಂಹ ನನ್ನ ವೈಯಕ್ತಿಕ ವಿಚಾರದ ಬಗ್ಗೆ ಮಾತಾಡಿದ್ದಾರೆ. ನಾನೊಬ್ಬ ರೋಲ್ ‌ಕಾಲ್ ಗಿರಾಕಿ ಎಂದು ಆರೋಪಿಸಿದ್ದಾರೆ. ನಾನೀಗ ಸಂಸದ ಪ್ರತಾಪ್ ಸಿಂಹಗೆ ಚಾಲೆಂಜ್ ಮಾಡುತ್ತೇನೆ. ಕಲಾಮಂದಿರದಲ್ಲಿ ಈ ಬಗ್ಗೆ ಚರ್ಚೆ ಮಾಡುವುದಕ್ಕೆ ಬರಲಿ. ಅವರ ಮೇಲಿನ […]

ನನ್ನ ಆತ್ಮಹತ್ಯೆಗೆ ಪ್ರತಾಪ್ ಸಿಂಹ ಕಾರಣವಲ್ಲ -KPCC ವಕ್ತಾರ ಎಂ.ಲಕ್ಷ್ಮಣ ಹೀಗೆ ಹೇಳಿದ್ದೇಕೆ?
Updated By: KUSHAL V

Updated on: Aug 30, 2020 | 2:19 PM

ಮೈಸೂರು: ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ ಮಾಡಿದ್ದಾರೆ. ಎಂ.ಲಕ್ಷ್ಮಣ ರೋಲ್‌ಕಾಲ್‌ ಗಿರಾಕಿ ಎಂದು ಸಂಸದ ಪ್ರತಾಪ್ ಸಿಂಹ ಮಾಡಿದ್ದ ಆರೋಪಕ್ಕೆ ಸಂಬಂಧಿಸಿ ಲಕ್ಷ್ಮಣ ತಿರುಗೇಟು ನೀಡಿದ್ದಾರೆ.

ಪ್ರತಾಪ್‌ ಸಿಂಹಗೆ ಲಕ್ಷ್ಮಣ ಚಾಲೆಂಜ್
ಪ್ರತಾಪ್ ಸಿಂಹ ನನ್ನ ವೈಯಕ್ತಿಕ ವಿಚಾರದ ಬಗ್ಗೆ ಮಾತಾಡಿದ್ದಾರೆ. ನಾನೊಬ್ಬ ರೋಲ್ ‌ಕಾಲ್ ಗಿರಾಕಿ ಎಂದು ಆರೋಪಿಸಿದ್ದಾರೆ. ನಾನೀಗ ಸಂಸದ ಪ್ರತಾಪ್ ಸಿಂಹಗೆ ಚಾಲೆಂಜ್ ಮಾಡುತ್ತೇನೆ. ಕಲಾಮಂದಿರದಲ್ಲಿ ಈ ಬಗ್ಗೆ ಚರ್ಚೆ ಮಾಡುವುದಕ್ಕೆ ಬರಲಿ. ಅವರ ಮೇಲಿನ ಆರೋಪ ನಾನು ಸಾಬೀತು ಮಾಡುತ್ತೇನೆ. ಸಾಬೀತು ಮಾಡದಿದ್ದರೆ ನಾನು ಅಲ್ಲೇ ನೇಣುಹಾಕಿಕೊಳ್ತೇನೆ ಎಂದು ಪ್ರತಾಪ್ ಸಿಂಹಗೆ ಕೆಪಿಸಿಸಿ ವಕ್ತಾರ ಲಕ್ಷ್ಮಣ ಚಾಲೆಂಜ್ ಮಾಡಿದ್ದಾರೆ.

ಪ್ರತಾಪ್ ಸಿಂಹ ಸಂಸದರಾಗಲು ಅನ್‌ಫಿಟ್
ರೋಲ್‌ ಕಾಲ್‌ ದಂಧೆ ಮಾಡುತ್ತಿರುವುದು ಪ್ರತಾಪ್ ಸಿಂಹ. ಸಂಸದರ ನಿಧಿಯಲ್ಲಿ ಶೇ.10ರಷ್ಟು ಕಮಿಷನ್ ಪಡೀತಿದ್ದಾರೆ. ಪ್ರತಾಪ್ ಸಿಂಹ ಕಡೆಯವರದ್ದೇ ಒಂದು ಏಜೆನ್ಸಿ ಮಾಡಿದ್ದಾರೆ. ಅಲ್ಲದೆ ಇವರು ವರ್ಗಾವಣೆ ದಂಧೆ ಮಾಡುತ್ತಿದ್ದಾರೆ. ಪ್ರತಾಪ್‌ ಸಿಂಹ ಸಂಸದ ಆಗಲು ಅನ್‌ಫಿಟ್. ಅವರು ಬ್ಲೂ ಫಿಲಂ ಹೀರೋ ಆಗಲು ಲಾಯಕ್‌ ಇದ್ದಾರೆ. ಕಳೆದ ಲೋಕಸಭೆ ಚುನಾವಣೆಯ ವೇಳೆ ಪ್ರತಾಪ್ ಸಿಂಹ ಮಾತಾಡಿದ್ದ ಅಶ್ಲೀಲ ಆಡಿಯೋ ಬಿಡುಗಡೆಯಾಗಿತ್ತು. ಪ್ರತಾಪ್ ಸಿಂಹ ವಿರುದ್ಧ ಆರೋಪ ಮಾಡಿದ್ದ ಹುಡುಗಿ ಎಲ್ಲಿ? ಚುನಾವಣೆ ವೇಳೆ ಕಾಲುಹಿಡಿದು ರಾಜಿ ಮಾಡಿಕೊಂಡಿದ್ದೀರಾ? ಆಕೆಯನ್ನು ಕೊಲೆ ಮಾಡಿಸಿಬಿಟ್ರಾ ಹೇಳಿ? ಎಂದು ಸಂಸದ ಪ್ರತಾಪ್ ಸಿಂಹಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಪ್ರಶ್ನಿಸಿದ್ದಾರೆ.

ನನ್ನ ಆತ್ಮಹತ್ಯೆಗೆ ಪ್ರತಾಪ್ ಸಿಂಹ ಕಾರಣವಲ್ಲ
ನನ್ನ ಆತ್ಮಹತ್ಯೆಗೆ ಪ್ರತಾಪ್ ಸಿಂಹ ಕಾರಣವಲ್ಲ. ಹೀಗೆ ರಾಷ್ಟ್ರಪತಿಗಳಿಗೆ ಪತ್ರ ಬರೆದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಆದರೆ ನೀವು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಅಂತಾ ಲಕ್ಷ್ಮಣ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಂಸದನಾಗುವುದಕ್ಕೂ ಮುನ್ನ ಏನು ಮಾಡುತ್ತಿದ್ದೆ. ಹೆಣ್ಣು ಮಕ್ಕಳನ್ನ ಹಾಳು ಮಾಡಿರುವ ಬಗ್ಗೆ ದಾಖಲೆ ಇದೆ ಎಂದು ಪ್ರತಾಪ್ ಸಿಂಹ ವಿರುದ್ಧ ಎಂ.ಲಕ್ಷ್ಮಣ ಆರೋಪಿಸಿದ್ದಾರೆ. ಈ ದಾಖಲೆಗಳನ್ನು ನಾನು ನ್ಯಾಯಾಲಯಕ್ಕೆ ಕೊಡುತ್ತೇನೆ.