ಬೆಂಗಳೂರು: ಬಿಜೆಪಿಗೆ ವಲಸೆ ಬಂದು ಸಚಿವರಾಗಿರುವವರಿಗೆ ಎಂ.ಪಿ.ರೇಣುಕಾಚಾರ್ಯ ಭರ್ಜರಿ ಟಾಂಗ್ ನೀಡಿದ್ದಾರೆ. ಬಿಜೆಪಿಯ 105 ಶಾಸಕರು ಗೆದ್ದಿದ್ದಕ್ಕೆ, ಪಕ್ಷದ ಕಾರ್ಯಕರ್ತರ ಶ್ರಮದಿಂದ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ ಹೊರತು ಯಾರೊಬ್ಬರಿಂದಲೂ ಅಲ್ಲ ಎಂದು ಹೇಳುವ ಮೂಲಕ ರಮೇಶ್ ಜಾರಕಿ ಹೊಳಿ, ಸಿ.ಪಿ.ಯೋಗೀಶ್ವರ್ ಮತ್ತಿತರರಿಗೆ ಟಾಂಗ್ ನೀಡಿದ್ದಾರೆ.
ಯಡಿಯೂರಪ್ಪ, ಪ್ರಧಾನಿ ಮೋದಿ, ಅಮಿತ್ ಷಾ ಸೇರಿ ಎಲ್ಲ ಮುಖಂಡರು, ಕಾರ್ಯಕರ್ತರ ಶ್ರಮ, ತ್ಯಾಗದಿಂದ ಪಕ್ಷ ಗಟ್ಟಿಗೊಂಡಿದೆ. ಇದನ್ನು ಯಾರೂ ಮರೆಯಬಾರದು. ಬಿಜೆಪಿ ಸೇರಿದ 17 ಶಾಸಕರ ಕೊಡುಗೆಯನ್ನು ಗೌರವಿಸುತ್ತೇವೆ. ಆದರೆ ನಾವು 105 ಮಂದಿ ಗೆದ್ದಿರಲಿಲ್ಲ ಎಂದರೆ ಹೇಗೆ ಸರ್ಕಾರ ರಚನೆ ಸಾಧ್ಯವಾಗುತ್ತಿತ್ತು? ತನ್ನೊಬ್ಬನಿಂದಲೇ ಈ ಸರ್ಕಾರ ಬಂತು ಎಂದು ಭಾವಿಸಿದವರಿಗೆ ನಾನು ಈ ಮಾತನ್ನು ಹೇಳಲು ಇಚ್ಛಿಸುತ್ತೇನೆ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ 17 ಶಾಸಕರು ಮೈತ್ರಿ ಸರ್ಕಾರದಿಂದ ಹೊರನಡೆದು ಬಿಜೆಪಿ ಸೇರಿದ್ದರು. ಅದರ ನಾಯಕತ್ವ ರಮೇಶ್ ಜಾರಕಿಹೊಳಿಯವರದ್ದು ಎಂದಾಗಿತ್ತು. ಈಗಲೂ ಸಹ ಅವರು ಬಿಎಸ್ವೈ ಮೇಲೆ ಒತ್ತಡ ಹೇರುತ್ತಿದ್ದು, ವಲಸೆ ಬಂದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡಬೇಕೆಂದು ಹೇಳುತ್ತಿದ್ದಾರೆ. ಈ ಮಧ್ಯೆ ರೇಣುಕಾಚಾರ್ಯ ನೀಡಿದ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ನಾಳೆ ರಸ್ತೆಗಿಳಿಯೋದಿಲ್ವಂತೆ ಓಲಾ, ಊಬರ್, ಆಟೋ, ಟ್ಯಾಕ್ಸಿ
Published On - 1:13 pm, Wed, 25 November 20