AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Technology Adverse Effect ತಂತ್ರಜ್ಞಾನದ ಅಡ್ಡಪರಿಣಾಮಗಳಿಂದ ಮಕ್ಕಳನ್ನು ಹೀಗೆ ರಕ್ಷಿಸಬಹುದು!

ಯೂಟ್ಯೂಬ್, ಗೂಗಲ್ ತಂತ್ರಜ್ಞಾನದ ಬಗ್ಗೆ ಪುಟಗಟ್ಟಲೆ ವಿವರಿಸುತ್ತಾರೆ. ಹೊರಗೆ ಹೋಗಿ ದಿನಸಿ ಸಾಮಾನು ತರುತ್ತಾರೋ ಇಲ್ವೋ.. ಮೊಬೈಲ್ ಒಳಹೋಗಿ ಏನುಬೇಕಾದರೂ ಹುಡುಕಿ ತರುತ್ತಾರೆ! ತಂತ್ರಜ್ಞಾನದ ಕೆಟ್ಟಪರಿಣಾಮ ಎಂಬ ಪೆಡಂಭೂತ ಹುಟ್ಟಿಕೊಳ್ಳುವುದೂ ಇಲ್ಲೇ..

Technology Adverse Effect ತಂತ್ರಜ್ಞಾನದ ಅಡ್ಡಪರಿಣಾಮಗಳಿಂದ ಮಕ್ಕಳನ್ನು ಹೀಗೆ ರಕ್ಷಿಸಬಹುದು!
TV9 Web
| Updated By: ganapathi bhat|

Updated on:Apr 06, 2022 | 8:57 PM

Share

ಆನ್​ಲೈನ್​  ಕ್ಲಾಸ್ ಎಂದು ಕೂರುವ ಮಕ್ಕಳು ಮೊಬೈಲ್​ನಲ್ಲೇ ಶಿಕ್ಷಕರೊಂದಿಗೆ ಮಾತನಾಡುತ್ತಾರೆ. ಯೂಟ್ಯೂಬ್, ಗೂಗಲ್ ತಂತ್ರಜ್ಞಾನದ ಬಗ್ಗೆ ಪುಟಗಟ್ಟಲೆ ವಿವರಿಸುತ್ತಾರೆ. ಹೊರಗೆ ಹೋಗಿ ದಿನಸಿ ಸಾಮಾನು ತರುತ್ತಾರೋ ಇಲ್ವೋ.. ಮೊಬೈಲ್ ಒಳಹೋಗಿ ಏನುಬೇಕಾದರೂ ಹುಡುಕಿ ತರುತ್ತಾರೆ!

ಈ ಮಕ್ಕಳು ಮೊಬೈಲ್​ನಲ್ಲಿ ಏನು ಕಲೀತಾರಪ್ಪಾ ಅಂತ ನೀವು ತಲೆ ಕೆರೆದುಕೊಳ್ಳಬೇಡಿ. ನಿಮಗಿಂತ ಚುರುಕಾಗಿ ಮಕ್ಕಳು ಮೊಬೈಲ್ ಹಿಡಿದು ಮಿಂಚಿಬಿಡುತ್ತಾರೆ. ಮೊಬೈಲ್​ನಲ್ಲಿ ಮಕ್ಕಳು ಒಳ್ಳೆಯದನ್ನು ಕಲಿತರೆ ಸಂತೋಷ. ಕೆಟ್ಟದ್ದನ್ನು ಕಲಿತರೆ ಸಂಕಷ್ಟ ಕಷ್ಟ ಕಷ್ಟ. ತಂತ್ರಜ್ಞಾನದ ಕೆಟ್ಟಪರಿಣಾಮಗಳಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ ಎಂಬ ಅನುಮಾನ ನಿಮಗಿದ್ದರೆ ಈ ಅಂಶಗಳನ್ನು ಗಮನಿಸಿ..

ಗೂಗಲ್ ಸೇಫ್ ಸರ್ಚ್ ಈಗ ಎಲ್ಲದಕ್ಕೂ ಗೂಗಲ್ಲೇ ಗುರು. ಏನೇ ಅನುಮಾನವಿದ್ದರೂ ಗೂಗಲ್​ನಲ್ಲಿ ಪರಿಹಾರ. ಪ್ರಶ್ನೆ, ಹುಡುಕಾಟ, ಹೊಸತನ ಎಲ್ಲವೂ ಇಲ್ಲಿ ಲಭ್ಯ. ಮಕ್ಕಳು ಕಲಿಕೆಯ ಸಂದರ್ಭ ಮೊದಲು ಲಗ್ಗೆ ಇಡುವುದು ಇದೇ ಗೂಗಲ್​ನ ಒಳಕ್ಕೆ. ಬೇಕಾದ್ದು, ಬೇಡದ್ದು ಎಲ್ಲವೂ ಇರುವ ಗೂಗಲ್​ನಲ್ಲಿ ಮಕ್ಕಳಿಗೆ ಒಳ್ಳೆಯದು ಮಾತ್ರ ಸಿಗುವಂತಾಗಲು ನೀವು ಹೀಗೆ ಮಾಡಬಹುದು.

ಮೊದಲು ಗೂಗಲ್ ಸರ್ಚ್ ಅಪ್ಲಿಕೇಷನ್ ತೆರೆಯಿರಿ. ಅಲ್ಲಿ, ಕೆಳ ಬಲಭಾಗಕ್ಕೆ ‘ಮೋರ್’ ಎಂಬ ಆಯ್ಕೆ ಕಾಣುತ್ತದೆ. ಅದನ್ನು ಆಯ್ಕೆ ಮಾಡಿ. ನಂತರದ ಪಟ್ಟಿಯಲ್ಲಿ ‘ಜನರಲ್’ ಎಂಬ ಆಯ್ಕೆ ಕಾಣುತ್ತದೆ. ಜನರಲ್ ಸೆಟ್ಟಿಂಗ್ ಆರಿಸಿಕೊಳ್ಳಿ. ಅದರೊಳಗೆ ‘ಸೇಫ್ ಸರ್ಚ್’ ಎಂಬ ಆಯ್ಕೆ ಇರುತ್ತದೆ. ಅದನ್ನು ಆಕ್ಟಿವೇಟ್ ಮಾಡಿ. ಹೀಗೆ ಮಾಡುವುದರಿಂದ ಸೂಕ್ತವಲ್ಲದ ಫೊಟೊ, ವೀಡಿಯೋ, ಸೈಟ್​ಗಳು ಮಕ್ಕಳ ಮೊಬೈಲ್​ನಲ್ಲಿ ಕಾಣಿಸುವುದನ್ನು ತಡೆಗಟ್ಟಬಹುದು.

ಯೂಟ್ಯೂಬ್ ರಿಸ್ಟ್ರಿಕ್ಟೆಡ್ ಮೋಡ್ ಯೂಟ್ಯೂಬ್, ಮಕ್ಕಳ ಆಸಕ್ತಿ ಮತ್ತು ಕುತೂಹಲದ ತಾಣ. ಕಾರ್ಟೂನ್, ಹಾಡು ಎಂದು ಹಠ ಮಾಡುವ ಅವರಿಗೆ ವಯಸ್ಕ ದೃಶ್ಯಾವಳಿಗಳು ಕಾಣಿಸಬಾರದು. ಅಗತ್ಯ ವಿಷಯಗಳು ಮಾತ್ರ ಸಿಗಬೇಕು ಎಂಬ ಆಶಯ ನಿಮ್ಮದಾಗಿದ್ದರೆ, ಹೀಗೆ ಮಾಡಬಹುದು.

ಮೊದಲು ಯೂಟ್ಯೂಬ್ ಅಪ್ಲಿಕೇಷನ್ ತೆರೆಯಿರಿ. ಮೇಲೆ ಬಲಭಾಗಕ್ಕೆ, ನಿಮ್ಮ ಖಾತೆಯ ಐಕಾನ್ ಕಾಣುತ್ತದೆ. ಅದನ್ನು ಆರಿಸಿಕೊಳ್ಳಿ. ಹೊಸ ಆಯ್ಕೆಗಳ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ಸೆಟ್ಟಿಂಗ್ಸ್ ಆಯ್ಕೆ ಒತ್ತಿ. ಅದರಲ್ಲಿ, ‘ಜನರಲ್’ ಸೆಟ್ಟಿಂಗ್ ಆರಿಸಿ. ಜನರಲ್ ಸೆಟ್ಟಿಂಗ್ಸ್ ಆಯ್ಕೆ ಪಟ್ಟಿಯಲ್ಲಿ \ರಿಸ್ಟ್ರಿಕ್ಟೆಡ್ ಮೋಡ್’ ಆನ್ ಮಾಡಿ. ಯೂಟ್ಯೂಬ್ ರಿಸ್ಟ್ರಿಕ್ಟೆಡ್ ಮೋಡ್ ಆನ್ ಮಾಡಿಕೊಳ್ಳುವ ಮೂಲಕ ಮಕ್ಕಳ ಕೈಗೆ ಅನಗತ್ಯ ವಿಚಾರಗಳು ಸಿಗದಂತೆ ನೋಡಿಕೊಳ್ಳಬಹುದು.

ಪ್ಲೇ ಸ್ಟೋರ್ ಪೇರೆಂಟಲ್ ಕಂಟ್ರೋಲ್ಸ್ ಪ್ಲೇ ಸ್ಟೋರ್ ಎಂದರೆ ಅಂಗಡಿ ಇದ್ದಹಾಗೆ. ಬೇಕು ಬೇಕಾದ ಅಪ್ಲಿಕೇಷನನ್ನು ಅಲ್ಲಿಂದ ಮೊಬೈಲ್​ಗೆ ಇಳಿಸಿಕೊಳ್ಳಬಹುದು. ಗೇಮಿಂಗ್, ಲರ್ನಿಂಗ್ ಮಕ್ಕಳ ಅಚ್ಚುಮೆಚ್ಚಿನ ಆಪ್​ಗಳು. ಹಾಗೆಂದು ಪ್ಲೇ ಸ್ಟೋರ್​ನಲ್ಲಿ ಅಷ್ಟೇ ಸಿಗೋದು ಅಂದುಕೊಂಡರೆ ನೀವು ಮೂರ್ಖರು. 18+ ಸೂಚನೆಯ ಹತ್ತು ಹಲವು ಆಪ್​ಗಳು ಅಲ್ಲಿವೆ. ಮಕ್ಕಳು ಆಡಬಾರದ ಗೇಮ್​ಗಳು ಕೂಡ ಅಲ್ಲಿ ಸಿಗುತ್ತವೆ. ಇದೆಲ್ಲದರಿಂದ ಮಕ್ಕಳನ್ನು ಕಾಪಾಡಬೇಕಾದರೆ ನೀವು ಹೀಗೆ ಮಾಡಬಹುದು.

ಪ್ಲೇ ಸ್ಟೋರ್ ಆಪ್ ತೆರೆದುಕೊಳ್ಳಿ. ಅದರಲ್ಲಿ ಮೇಲೆ ಎಡಭಾಗದಲ್ಲಿ ಮೂರು ಅಡ್ಡಗೆರೆಗಳು ಕಾಣಿಸುತ್ತವೆ. ಆ ಪಟ್ಟಿಯನ್ನು ಆಯ್ಕೆ ಮಾಡಿ. ಅದರಲ್ಲಿ ಸೆಟ್ಟಿಂಗ್ಸ್ ಆಯ್ಕೆ ಆರಿಸಿಕೊಳ್ಳಿ. ಸೆಟ್ಟಿಂಗ್ಸ್ ಪಟ್ಟಿ ತೆರೆದುಕೊಳ್ಳುತ್ತದೆ. ಅಲ್ಲಿ ‘ಪೇರೆಂಟಲ್ ಕಂಟ್ರೋಲ್ಸ್’ ಎಂಬ ಆಯ್ಕೆ ಕಾಣುತ್ತದೆ. ಅದನ್ನು ಒತ್ತಿ. ಪೇರೆಂಟಲ್ ಕಂಟ್ರೋಲ್ಸ್​ನ ಆನ್ ಮಾಡಿಕೊಳ್ಳಿ.

ಅಲ್ಲಿ ಹೊಸ ವಿಂಡೋ ತೆರೆದುಕೊಂಡು ಪಿನ್ ದಾಖಲಿಸುವಂತೆ ಕೇಳುತ್ತದೆ. ಎರಡು ಬಾರಿ ಪಿನ್ ಹಾಕಿಕೊಳ್ಳಿ ಮತ್ತು ನಿಮ್ಮ ಪಿನ್ ಸಂಖ್ಯೆ ನಿಮಗೆ ನೆನಪಿರಲಿ. ಹೀಗೆ ಮಾಡುವುದರಿಂದ ಪೇರೆಂಟಲ್ ಕಂಟ್ರೋಲ್ಸ್ ಆಕ್ಟಿವೇಟ್ ಆಗುತ್ತದೆ. ನಂತರ ಯಾವ ವಯಸ್ಸಿನ ಮಿತಿಯ ಆಪ್​ಗಳು ಪ್ಲೇ ಸ್ಟೋರ್​ನಲ್ಲಿ ಕಾಣಿಸಿಕೊಳ್ಳಬೇಕು ಎಂಬ ಬಗ್ಗೆ ನೀವೇ ನಿರ್ಬಂಧ ಹಾಕಿಕೊಳ್ಳಬಹುದು.

ಪೇಯ್ಡ್ ಅಪ್ಲಿಕೇಷನ್​ಗಳನ್ನೂ ಬಳಸಬಹುದು! ಮಕ್ಕಳ ಸುರಕ್ಷತೆಗಾಗಿ ಇತರ ಅಪ್ಲಿಕೇಷನ್​ಗಳನ್ನೂ ಬಳಸಿಕೊಳ್ಳಬಹುದು. ಗೂಗಲ್ ಪ್ಲೇ ಸ್ಟೋರ್​ನಲ್ಲಿ ಪೇರೆಂಟಲ್ ಕಂಟ್ರೋಲ್ಸ್​ಗೆ ಸಂಬಂಧಪಟ್ಟ ಹತ್ತಾರು ಆಪ್​ಗಳು ಲಭ್ಯವಿವೆ. ಜೊತೆಗೆ ಪೇಯ್ಡ್ ಆಪ್​ಗಳನ್ನೂ ಗ್ರಾಹಕರು ಬಳಸಬಹುದಾಗಿದೆ.

Kaspersky ಮೊದಲಾದ ಆಂಟಿವೈರಸ್ ಅಪ್ಲಿಕೇಷನ್​ಗಳು, ಪೇರೆಂಟಲ್ ಕಂಟ್ರೋಲ್ ಸಾಫ್ಟ್​ವೇರ್​ಗಳನ್ನು ತಯಾರಿಸಿವೆ. ಅವುಗಳ ಮೂಲಕ ಮಕ್ಕಳು ಮೊಬೈಲ್ ಬಳಸುವ ಅವಧಿ, ಅವರು ಬಳಸುವ ವೆಬ್ಸೈಟ್, ಗೇಮ್ಸ್, ಅಪ್ಲಿಕೇಷನ್ಸ್ ಮತ್ತು ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡಬಹುದಾಗಿದೆ. ಸಿಂಪಲ್ ಉಪಾಯಗಳನ್ನು ತಿಳಿಸಿದ್ದಾಯ್ತು. ಅಳವಡಿಸಿಕೊಳ್ಳುವುದು ಇನ್ನೀಗ ನಿಮ್ಮ ಹೊಣೆ! -ಗಣಪತಿ ದಿವಾಣ

Published On - 3:25 pm, Wed, 25 November 20