ಅಪ್ರಾಪ್ತೆಗೆ ಹೆರಿಗೆ ಮಾಡಿಸಿ ಮಗು ಸೇಲ್ ಮಾಡಿದ ವೈದ್ಯ ದಂಪತಿ ವಿರುದ್ಧ ಪೋಕ್ಸೋ ಕೇಸ್
ಮಡಿಕೇರಿ: ವೈದ್ಯೋ ನಾರಾಯಣ ಹರಿ ಅನ್ನೋದು ಹಳೇ ಮಾತು. ಆದ್ರಿಲ್ಲಿ ಸರ್ಕಾರಿ ವೈದ್ಯರಾಗಿ ಜೇಬುತುಂಬಾ ಸಂಬಳ ಬಂದ್ರು ದಂಪತಿ ಮಾಡಿರೋ ಕೆಲ್ಸ ಮಣ್ಣು ತಿನ್ನುವಂತದ್ದು. ವೈದ್ಯ ವೃತ್ತಿಗೆ ಕಳಂಕವಾದ ಇವರು, ಅಪ್ರಾಪ್ತ ವಯಸ್ಸಿನ ಬಾಲಕಿಗೆ ಹೆರಿಗೆ ಮಾಡಿಸಿ ಮಗುವನ್ನ ಲಕ್ಷ ಲಕ್ಷಕ್ಕೆ ಮಾರಾಟ ಮಾಡಿ ಎಸ್ಕೇಪ್ ಆಗಿದ್ದಾರೆ. ಕಾಸಿನ ಆಸೆಗೆ ಅಡ್ಡದಾರಿ ಹಿಡಿದ್ರು! ಅಂದಹಾಗೆ ಡಾ.ರಾಜೇಶ್ವರಿ ಮತ್ತು ಡಾ.ನವೀನ್ ಎಂಬ ದಂಪತಿ ಹೊಸ ಬಡಾವಣೆಯ ನಿವಾಸಿಗಳು. ರಾಜೇಶ್ವರಿ ಹಾಗೂ ಡಾಕ್ಟರ್ ನವೀನ್ ಹಲವು ವರ್ಷದಿಂದ ಮಡಿಕೇರಿಯ ಜಿಲ್ಲಾ […]
ಮಡಿಕೇರಿ: ವೈದ್ಯೋ ನಾರಾಯಣ ಹರಿ ಅನ್ನೋದು ಹಳೇ ಮಾತು. ಆದ್ರಿಲ್ಲಿ ಸರ್ಕಾರಿ ವೈದ್ಯರಾಗಿ ಜೇಬುತುಂಬಾ ಸಂಬಳ ಬಂದ್ರು ದಂಪತಿ ಮಾಡಿರೋ ಕೆಲ್ಸ ಮಣ್ಣು ತಿನ್ನುವಂತದ್ದು. ವೈದ್ಯ ವೃತ್ತಿಗೆ ಕಳಂಕವಾದ ಇವರು, ಅಪ್ರಾಪ್ತ ವಯಸ್ಸಿನ ಬಾಲಕಿಗೆ ಹೆರಿಗೆ ಮಾಡಿಸಿ ಮಗುವನ್ನ ಲಕ್ಷ ಲಕ್ಷಕ್ಕೆ ಮಾರಾಟ ಮಾಡಿ ಎಸ್ಕೇಪ್ ಆಗಿದ್ದಾರೆ.
ಕಾಸಿನ ಆಸೆಗೆ ಅಡ್ಡದಾರಿ ಹಿಡಿದ್ರು! ಅಂದಹಾಗೆ ಡಾ.ರಾಜೇಶ್ವರಿ ಮತ್ತು ಡಾ.ನವೀನ್ ಎಂಬ ದಂಪತಿ ಹೊಸ ಬಡಾವಣೆಯ ನಿವಾಸಿಗಳು. ರಾಜೇಶ್ವರಿ ಹಾಗೂ ಡಾಕ್ಟರ್ ನವೀನ್ ಹಲವು ವರ್ಷದಿಂದ ಮಡಿಕೇರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡ್ತಿದ್ರು. 2019 ರ ಆಗಸ್ಟ್ 22 ರಂದು ಅಪ್ರಾಪ್ತ ವಯಸ್ಸಿನ ಬಾಲಕಿ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಅಂತಾ ಬಂದಿದ್ದಾಳೆ.
ಇದನ್ನೇ ಬಂಡವಾಳ ಮಾಡಿಕೊಂಡ ರಾಜೇಶ್ವರಿ ತನ್ನ ಪತಿಯೊಂದಿಗೆ ಸೇರಿ ಆಕೆಯನ್ನು ಮಡಿಕೇರಿ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಹೆರಿಗೆ ಮಾಡಿಸಿದ್ದು, ಮಗುವನ್ನು ಅದೇ ಆಸ್ಪತ್ರೆಯಲ್ಲಿ ಗ್ರೂಪ್ ಡಿ ನೌಕರರಾಗಿರೋ ಸೆಲಿನಾ ಮಗನಾದ ರಾಬಿನ್‌ಗೆ 1.50 ಲಕ್ಷಕ್ಕೆ ಮಾರಿದ್ದಾಳೆ. ಸಾಲದು ಎಂಬಂತೆ ಇದು ರಾಬಿನ್ ಮಗು ಅಂತಾ ಆಸ್ಪತ್ರೆಯಿಂದಲೇ ನಕಲಿ ಡಾಕ್ಯುಮೆಂಟ್ ಕೂಡ ಸೃಷ್ಟಿ ಮಾಡಿದ್ದಾರೆ.
ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅರುಂಧತಿ ಮಡಿಕೇರಿ ನಗರ ಠಾಣೆಯಲ್ಲಿ ಘಟನೆಯ ಕುರಿತು ಕೇಸ್ ದಾಖಲಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿರುವ ಪೊಲೀಸರು ಡಿಸೆಂಬರ್ 27 ರಂದು ಸೆಲೆನಾ ಮನೆಗೆ ಹೋಗಿ ಪರಿಶೀಲಿಸಿದಾಗ 4 ತಿಂಗಳ ಗಂಡು ಮಗು ಪತ್ತೆಯಾಗಿದೆ.
ಮಗುವಿನ ತಾಯಿ ನನಗೆ ಮಗು ಬೇಡಾ ಎಂದು ಆ ಕ್ಷಣ ಸುಳ್ಳು ಹೇಳಿದ್ದ ಕಿರಾತಕರು, ಮಗು ರಾಬೀನ್ ಸೊಸೆ ಸರಳಾ ಮೇರಿಗೆ ಜನಿಸಿದೆ ಎಂದು ನಕಲಿ ಪ್ರಮಾಣ ಪತ್ರವನ್ನೂ ಸೃಷ್ಟಿಸಿದ್ದರೆ. ಇನ್ನು ಪ್ರಕರಣ ದಾಖಲಾಗುತ್ತಿದ್ದಂತೆ ವೈದ್ಯ ದಂಪತಿ ಈಗ ಎಸ್ಕೇಪ್ ಆಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
Published On - 11:52 am, Thu, 9 January 20